logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cannon-fodder
ನಾಮವಾಚಕ
ಫಿರಂಗಿ ಬಲಿ; ಯುದ್ಧಗಳಲ್ಲಿ ಗುಂಡಿನೇಟಿಗೆ ತುತ್ತಾಗಿ ಸಾಯುವ ಸೈನಿಕರು.

cannonade
ನಾಮವಾಚಕ
ಎಡೆಬಿಡದ ಫಿರಂಗಿ ಹೊಡೆತ; ನಿರಂತರ ಗುಂಡಿನ ಹೊಡೆತ; ಗುಂಡಿನ ಸುರಿಮಳೆ.

cannonade
ಸಕರ್ಮಕ ಕ್ರಿಯಾಪದ
ಫಿರಂಗಿ ಹಾರಿಸು; ಗುಂಡು ಸುರಿಸು; ಗುಂಡಿನ ಮಳೆಗರೆ.

cannot
ಕ್ರಿಯಾಪದ
can not ಎಂಬುದರ ರೂಪಾಂತರ.

cannula
ನಾಮವಾಚಕ
(ಶಸ್ತ್ರವೈದ್ಯ) ತೂರುನಳಿಗೆ; ಕ್ಯಾನ್ಯುಲ; ದೇಹದ ಯಾವುದೇ ನಳಿಗೆಯಲ್ಲೋ ಗಂತಿಯಲ್ಲೋ ದ್ರವ ತೆಗೆಯಲು ಯಾ ಸೇರಿಸಲು, ಒಳತೂರಿಸುವ ನಳಿಗೆ.

cannulate
ಸಕರ್ಮಕ ಕ್ರಿಯಾಪದ
(ಶಸ್ತ್ರವೈದ್ಯ) ತೂರು ನಳಿಗೆ ಯಾ ಕ್ಯಾನುಲವನ್ನು ತೂರಿಸು.

canny
ಗುಣವಾಚಕ
  • ಸುಟಿಯ; ಚೂಟಿಯಾದ; ಚುರುಕುಬುದ್ಧಿಯ; ಬುದ್ಧಿವಂತಿಕೆಯ; ವ್ಯವಹಾರ ನಿಪುಣತೆಯುಳ್ಳ: a canny businessman ಚುರುಕುಬುದ್ಧಿಯ, ವ್ಯವಹಾರನಿಪುಣತೆಯುಳ್ಳ–ವ್ಯಾಪಾರಿ.
  • (ಮುಖ್ಯವಾಗಿ ಸ್ಕಾಟ್‍ ಜನರ ವಿಷಯದಲ್ಲಿ) ಮಿತವ್ಯಯದ; ವ್ಯವಹಾರಕೌಶಲದ.
  • ಕುಶಲ; ನಿಪುಣ; ಚತುರ; ಎಚ್ಚರಿಕೆಯ; ಜಾಗರೂಕ; ಜಾಗ್ರತನಾದ; ಜೋಕೆಯಿಂದ ಪರಿಶೀಲಿಸುವ: a canny reply ಎಚ್ಚರಿಕೆಯ ಉತ್ತರ.
  • ಕಳಿಂಗತನದ; ಕುಯುಕ್ತಿಯ; ಕೃತ್ರಿಮದ; ಠಕ್ಕಿನ.

  • canoe
    ನಾಮವಾಚಕ ನುಡಿಗಟ್ಟು
    (ಹುಟ್ಟು ಹಾಕಿ ನಡೆಸುವ, ಅಡಿಗಟ್ಟಿಲ್ಲದ) ಸಣ್ಣದೋಣಿ; ಕಿರುದೋಣಿ; ಓಡ; ತೋಡುದೋಣಿ. paddle one’s own canoe (ಆಡುಮಾತು) ತನ್ನ ಕೆಲಸ ತಾನೇ ನಿರ್ವಹಿಸು; ಸ್ವತಂತ್ರವಾಗಿ ಕೆಲಸ ಮಾಡು.

    canoe
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    ಓಡದಲ್ಲಿ ಯಾ ದೋಣಿಯಲ್ಲಿ ಸಾಗಿಸು. ಓಡ ನಡೆಸು; ಓಡದಲ್ಲಿ ಹೋಗು.

    canoeing
    ನಾಮವಾಚಕ
    ಓಡ ಯಾ ದೋಣಿ ನಡೆಸುವುದು; ದೋಣಿಚಾಲನೆ.


    logo