logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

under-sheriff
ನಾಮವಾಚಕ
ಉಪ ಷೆರಿಹ್‍; ಷೆರಿಹ್‍ನ ಕೆಳಗಿನ ಅಧಿಕಾರಿ.

underachieve
ಅಕರ್ಮಕ ಕ್ರಿಯಾಪದ
(ಮುಖ್ಯವಾಗಿ ಶಿಕ್ಷಣ, ವ್ಯಾಸಂಗ, ಮೊದಲಾದವಲ್ಲಿ) ಕಡಿಮೆ ಸಾಧಿಸು; ಹಿಂದೆ ಬೀಳು; ನಿರೀಕ್ಷಣೆಗಿಂತ ಕಡಮೆ ಮಟ್ಟ ಸಾಧಿಸು.

underachievement
ನಾಮವಾಚಕ
(ಮುಖ್ಯವಾಗಿ ಶಿಕ್ಷಣ ಮೊದಲಾದವಲ್ಲಿ) ಕಡಿಮೆ ಸಾಧನೆ; ಹಿಂದೆ ಬೀಳುವಿಕೆ.

underachiever
ನಾಮವಾಚಕ
ಕಡಮೆ ಸಾಧಿಸುವವನು; ಹಿಂದೆಬಿದ್ದವನು.

underact
ಸಕರ್ಮಕ ಕ್ರಿಯಾಪದ
(ಪಾತ್ರವನ್ನು) ಅಸಮರ್ಪಕವಾಗಿ ಆಡು; ಅಸಮರ್ಥವಾಗಿ ಆಡು, ಅಭಿನಯಿಸು ( ಅಕರ್ಮಕ ಕ್ರಿಯಾಪದ ಸಹ).

underarm
ಗುಣವಾಚಕ
  • ಕಂಕುಳಲ್ಲಿ.
  • (ಕ್ರೀಡೆ, ಮುಖ್ಯವಾಗಿ ಕ್ರಿಕೆಟ್‍) ಭುಜದ ಕೆಳಗಿನ; ತೋಳು ಭುಜದ ಮಟ್ಟಕ್ಕಿಂತ ಕೆಳಗಿರುವ.
  • ತೋಳಿನ ಅಡಿಯ.

  • underarm
    ಕ್ರಿಯಾವಿಶೇಷಣ
  • ಕಂಕುಳ ಕೆಳಗೆ; ಕಂಕುಳಲ್ಲಿ.
  • (ಕ್ರಿಕೆಟ್‍) ಭುಜದ ಕೆಳಕ್ಕೆ ತೋಳು ಸರಿಸಿ: underarm bowling ಭುಜದ ಕೆಳಗೆ ತೋಳು ತಂದು ಚೆಂಡು ಎಸೆಯುವುದು.
  • ತೋಳಿನ ಕೆಳಗೆ.

  • underbelly
    ನಾಮವಾಚಕ
  • ಕೆಳಹೊಟ್ಟೆ; ಪ್ರಾಣಿ ಮೊದಲಾದವುಗಳ ದೇಹದ ಕೆಳಭಾಗ.
  • ದುರ್ಬಲಸ್ಥಾನ; ಮರ್ಮಸ್ಥಳ; ಸುಲಭವಾಗಿ ಆಕ್ರಮಣ ಮಾಡಬಹುದಾದ ಭಾಗ, ಪ್ರದೇಶ: the soft underbelly of Europe ಯೂರೋಪಿನ ದುರ್ಬಲ, ಮರ್ಮಸ್ಥಾನ.

  • underbid
    ನಾಮವಾಚಕ
  • ಕಡಮೆ ಸವಾಲು; (ಮತ್ತೊಬ್ಬನಿಗಿಂತ) ಕಡಮೆಯಾಗಿ ಕೂಗಿದ ಬೆಲೆ.
  • (ಮಾರಾಟದಲ್ಲಿ, ಹರಾಜಿನಲ್ಲಿ) ಕಡಮೆ (ಬೆಲೆಯಲ್ಲಿ) ಸವಾಲು ಕೂಗುವುದು.

  • underbid
    ಸಕರ್ಮಕ ಕ್ರಿಯಾಪದ
  • ಮತ್ತೊಬ್ಬನಿಗಿಂತ – ಕಡಮೆ ಸವಾಲುಕೂಗು, ಕಡಮೆ ಬೆಲೆ ಕೇಳು.
  • (ಬ್ರಿಡ್ಜ್‍ ಆಟ) (ಕೈಯಲ್ಲಿರುವ ಎಲೆಗಳ ಬೆಲೆಗಿಂತ) ಕಡಮೆ – ಆಟ, ನಂಬರು ಹೇಳು; ಕಡಮೆ ಸವಾಲು ಹೇಳು.


  • logo