logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

okey-dokey
ಗುಣವಾಚಕ
(ಅಶಿಷ್ಟ)= 1OK.

okey-dokey
ಕ್ರಿಯಾವಿಶೇಷಣ
(ಅಶಿಷ್ಟ)= 2OK.

Okla.
ಸಂಕ್ಷಿಪ್ತ
Oklahoma.

okra
ನಾಮವಾಚಕ
  • ಬೆಂಡೆಗಿಡ.
  • ಬೆಂಡೆಕಾಯಿ.

  • old
    ಗುಣವಾಚಕ ಪದಗುಚ್ಛ
    (ವಿಶೇಷಾರ್ಥಗಳಲ್ಲಿ elder, eldest).
    1. ವಯಸ್ಸಾದ; ಮುದಿ; ಮುಪ್ಪಿನ; ವೃದ್ಧ.
    2. ವಯಸ್ಸಾದ; ಚಿಕ್ಕದಲ್ಲದ ಯಾ ಅದರ ಆರಂಭ ದಶೆಯಲಿಲ್ಲದ.
  • ಹಳೆಯ; ಹಳತಾದ; ಹಿಂದೆಂದೋ ತಯಾರಾದ, ರಚಿಸಿದ: old book ಹಳೆಯ ಪುಸ್ತಕ.
  • ಹಳೆಯ; ಬಹಳ ಕಾಲದಿಂದ ಬಳಕೆಯಲ್ಲಿರುವ, ಬಳಸಿರುವ: old suit ಹಳೆಯ ಸೂಟು.
  • ಹಳೆಯ(ದಾದ); ಉಪಯೋಗವಳಿದ; (ಉಪಯೋಗಿಸಿದುದರಿಂದ) ಶಿಥಿಲವಾದ; ಜೀರ್ಣವಾದ: old clothes ಹಳೆಯ ಬಟ್ಟೆಗಳು.
  • ವಯಸ್ಸಾದ; ಮುದಿ; ವೃದ್ಧ; ವಯಸ್ಸಾದ ಲಕ್ಷಣ, ವಯಸ್ಸಿನ ಅನುಭವ ದೌರ್ಬಲ್ಯ, ಮೊದಲಾದವುಗಳನ್ನುಳ್ಳ: the child has an old face ಮಗುವಿಗೆ ವಯಸ್ಸಾದಂತೆ ಕಾಣುವ ಮುಖವಿದೆ.
  • ಹಳೆಯ; ನುರಿತ; ಪಳಗಿದ; ಅನುಭವಿ; ಅನುಭವ ಪಡೆದ: old in cunning ಕಪಟದಲ್ಲಿ ನುರಿತವನು, ಪಳಗಿದವನು. an old offender ಹಳೆಯ, ಪಳಗಿದ ಅಪರಾಧಿ. old in crime ಅಪರಾಧದಲ್ಲಿ ನುರಿತ.
  • ಹಳೆಯ ಕಾಲಕ್ಕೆ ಸೇರಿದ; ಗತಕಾಲದ: old times ಹಳೆಯ ದಿನಗಳು; ಗತಕಾಲ. haunted by old memories ಗತಕಾಲದ ನೆನಪುಗಳ ಗೀಳು ಕಾಡುವ.
  • ಬಹಳ ಹಿಂದಿನ; ಹಳೆಗಾಲದ; ಪುರಾತನ; ಪ್ರಾಚೀನ; ತೀರ ಹಳೆಯ ಕಾಲದ: old as the hills ಗಿರಿಗಳಷ್ಟು ಪ್ರಾಚೀನವಾದ. old friends ಹಳೆಯ ಗೆಳೆಯರು. an old family ಹಿಂದಿನಿಂದ ಪ್ರಸಿದ್ಧವಾದ, ಪುರಾತನವಾದ ವಂಶ, ಕುಲ.
  • (ಒಂದು ಗೊತ್ತಾದ) ವಯಸ್ಸಿನ; ನಿರ್ದಿಷ್ಟ ವಯಸ್ಸಿನ: is four years old ನಾಲ್ಕು ವರ್ಷ ವಯಸ್ಸಾಗಿದೆ. a four-year-old boy ನಾಲ್ಕು ವರ್ಷ ವಯಸ್ಸಿನ ಹುಡುಗ.
  • (ಭಾಷೆಯ ವಿಷಯದಲ್ಲಿ) ಹಳೆಯ; ಪ್ರಾಚೀನ; ಪುರಾತನ.
  • (ಆಡುಮಾತು) ಹಳೆಯ; ಪ್ರಿಯ; ಪ್ರೀತಿಯಿಂದ (ಯಾ ಸಲಿಗೆಯಿಂದ) ಯಾ ಅನೌಪಚಾರಿಕವಾಗಿ ಕರೆಯುವಾಗ ಪ್ರಯೋಗ: good old Charlie ಹಳೆಯ ಪ್ರಿಯ ಚರ್ಲಿ.
  • ಹಳೆಯ; ಹಿಂದಿನ; ಎರಡರಲ್ಲಿ ಮೊದಲನೆಯ ಯಾ ಅನೇಕ ವಸ್ತುಗಳಲ್ಲಿ ಮೊದಲನೆಯ: our old house ನಮ್ಮ ಹಳೆಯ ಮನೆ. wants his old job back ತನ್ನ ಹಳೆಯ, ಹಿಂದಿನ ಕೆಲಸವನ್ನು ಅಪೇಕ್ಷಿಸುತ್ತಾನೆ.

  • old
    ನಾಮವಾಚಕ ಪದಗುಚ್ಛ
    ಹಿಂದಿನ, ಪೂರ್ವ–ಕಾಲ.
  • have heard it of old ಬಹುಕಾಲದ ಹಿಂದೆಯೇ ಅದನ್ನು ಕೇಳಿದ್ದೇನೆ.
  • of old ಹಿಂದಿನ ಕಾಲದ; ಪ್ರಾಚೀನ ಕಾಲದ.
  • of old there were giants ಹಿಂದೆ ಮಹಾಮಹಾ ಪುರುಷರಿದ್ದರು.
  • the men of old ಹಿಂದಿನವರು; ಪುರಾತನರು; ಪ್ರಾಚೀನರು.

  • old age
    ನಾಮವಾಚಕ
    ಮುಪ್ಪು; ಮುದಿತನ; ವಾರ್ಧಕ್ಯ; ವೃದ್ಧಾಪ್ಯ; ಇಳಿವಯಸ್ಸು; ಅಪರ ವಯಸ್ಸು.

    old bachelor
    ನಾಮವಾಚಕ
    ವೃದ್ಧ ಬ್ರಹ್ಮಚಾರಿ; ವಯಸ್ಸಾದ ಅವಿವಾಹಿತ.

    Old Bailey
    ನಾಮವಾಚಕ
    ಓಲ್ಡ್‍ ಬೇಲಿ; ಲಂಡನ್ನಿನ ಕೇಂದ್ರ ಕ್ರಿಮಿನಲ್‍ ಕೋರ್ಟು.

    Old Bill
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಅಶಿಷ್ಟ) ಪೊಲೀಸಿನವನು.


    logo