logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impinge
ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
(ಯಾವುದಾದರೂ ವಸ್ತುವನ್ನು) ತಾಕಿಸು; ಡಿಕ್ಕಿಹೊಡೆಸು; ಸಂಘಟ್ಟಿಸು.
  • ತಟ್ಟು; ತಾಕು; ತಗುಲು; ಬಡಿ; ಆಘಾತ ಮಾಡು; ಸಂಘಟ್ಟಿಸು; ಡಿಕ್ಕಿ ಹೊಡೆ.
  • (ಇನ್ನೊಬ್ಬನ ಭೂಮಿ, ಹಕ್ಕು, ಮೊದಲಾದವನ್ನು) ಅತಿಕ್ರಮಿಸು; ಒತ್ತರಿಸು; ಆಕ್ರಮಿಸು; ಒತ್ತುವರಿ ಮಾಡು: impinge upon another’s rights ಪರರ ಹಕ್ಕುಗಳ ಮೇಲೆ ಅತಿಕ್ರಮಿಸು.
  • ಪ್ರಭಾವ ಬೀರು; ಪರಿಣಾಮವುಂಟುಮಾಡು; ಮುದ್ರೆಒತ್ತು: impinges upon the imagination ಕಲ್ಪನೆಯ ಮೇಲೆ ಮುದ್ರೆಯೊತ್ತುತ್ತದೆ.

  • impingement
    ನಾಮವಾಚಕ
  • ಆಘಾತ; ಸಂಘಟ್ಟನೆ; ಡಿಕ್ಕಿ (ಹೊಡೆಸುವುದು).
  • ಒತ್ತುವರಿ; ಅತಿಕ್ರಮಣ.
  • ಪ್ರಭಾವ; ಪರಿಣಾಮ.

  • impious
    ಗುಣವಾಚಕ
  • ದೈವನಿಷ್ಠೆಯಿಲ್ಲದ; ಧರ್ಮಶ್ರದ್ಧೆಯಿಲ್ಲದ.
  • ಅನಾಚಾರದ; ಅಧಾರ್ಮಿಕ; ನಾಸ್ತಿಕ.

  • impiously
    ಕ್ರಿಯಾವಿಶೇಷಣ
  • ದೈವನಿಷ್ಠೆಯಿಲ್ಲದೆ; ಧರ್ಮಶ್ರದ್ಧೆಯಿಲ್ಲದೆ.
  • ಅನಾಚಾರದಿಂದ; ಅಧಾರ್ಮಿಕವಾಗಿ; ನಾಸ್ತಿಕತೆಯಿಂದ.

  • impish
    ಗುಣವಾಚಕ
  • ದೆವ್ವದ ಮಗುವಿನ; ಮರಿಪಿಶಾಚಿಯ.
  • ತುಂಟಮಗುವಿನ.
  • ತುಂಟತನದ; ತಂಟಲಮಾರಿಯ; ಚೇಷ್ಟೆಯ; ಕುಚೋದ್ಯದ; ಕೀಟಲೆಯ.

  • impishly
    ಕ್ರಿಯಾವಿಶೇಷಣ
  • ದೆವ್ವದ ಮಗುವಿನಂತೆ; ಮರಿಪಿಶಾಚಿಯ ಹಾಗೆ.
  • ತುಂಟ ಮಗುವಿನಂತೆ.
  • ತುಂಟತನದಿಂದ; ಕುಚೇಷ್ಟೆಯಿಂದ; ಕುಚೋದ್ಯವಾಗಿ.

  • impishness
    ನಾಮವಾಚಕ
  • ತುಂಟು ಮಗುವಿನಂತೆ ಇರುವಿಕೆ.
  • ತುಂಟತನ; ಕುಚೇಷ್ಟೆ; ಕೀಟಲೆ.

  • impiteous
    ಗುಣವಾಚಕ
    (ಕಾವ್ಯಪ್ರಯೋಗ) ಕನಿಕರವಿಲ್ಲದ; ನಿಷ್ಕರುಣೆಯ.

    implacability
    ನಾಮವಾಚಕ
  • ತಣಿಸಲಾಗದ ಸ್ಥಿತಿ; ಸಮಾಧಾನಪಡಿಸಲಾಗದಿರುವಿಕೆ.
  • (ಶತ್ರು ಮೊದಲಾದವರ ವಿಷಯದಲ್ಲಿ) ಕಠೋರತೆ; ನಿರ್ದಯತೆ; ನಿಷ್ಕಾರುಣ್ಯ.

  • implacable
    ಗುಣವಾಚಕ
  • ತಣಿಸಲಾಗದ; ತೃಪ್ತಿಪಡಿಸಲಾಗದ; ಸಮಾಧಾನ ಮಾಡಲಾಗದ.
  • (ಶತ್ರು ಮೊದಲಾದವರ ವಿಷಯದಲ್ಲಿ) ಕಠೋರ; ಕನಿಕರವಿಲ್ಲದ; ನಿರ್ದಯ; ನಿಷ್ಕರುಣ; ದಯ ದಾಕ್ಷಿಣ್ಯವಿಲ್ಲದ: an implacable enemy ಕಠೋರ ಶತ್ರು.


  • logo