logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electrode potential
ನಾಮವಾಚಕ
(ರಸಾಯನವಿಜ್ಞಾನ) ವಿದ್ಯುದ್ವಾರ ವಿಭವ; ವಿದ್ಯುತ್ೋಶದಲ್ಲಿರುವ ಪದಾರ್ಥಕ್ಕೂ ಅದರ ಸಂಪರ್ಕದಲ್ಲಿರುವ ವಿದ್ಯುದ್ವಾರಕ್ಕೂ ಇರುವ ವಿದ್ಯುದ್ವಿಭವದ ಅಂತರ.

electrodeposit
ಸಕರ್ಮಕ ಕ್ರಿಯಾಪದ
(ರಸಾಯನವಿಜ್ಞಾನ) ವಿದ್ಯುನ್ನಿಕ್ಷೇಪಿಸು; ವಿದ್ಯುಲ್ಲೇಪಿಸು; ವಿದ್ಯುತ್ತಿನ ಸಹಾಯದಿಂದ ಯಾವುದೇ ಪದಾರ್ಥವನ್ನು (ಸಾಮಾನ್ಯವಾಗಿ ಲೋಹವನ್ನು) ಒಂದು ಕಾಯದ ಮೇಲೆ ಕೂರಿಸು ಯಾ ಲೇಪಿಸು.

electrodeposit
ನಾಮವಾಚಕ
(ರಸಾಯನವಿಜ್ಞಾನ) ವಿದ್ಯುನ್ನಿಕ್ಷೇಪ; ವಿದ್ಯುಲ್ಲೇಪ; ವಿದ್ಯುತ್ತಿನ ಸಹಾಯದಿಂದ ಒಂದು ಕಾಯದ ಮೇಲೆ ಕೂರಿಸಿದ ಯಾ ಲೇಪಿಸಿದ ಯಾವುದೇ, ಸಾಮಾನ್ಯವಾಗಿ ಲೋಹದ ಪದಾರ್ಥ.

electrodeposition
ನಾಮವಾಚಕ
(ರಸಾಯನವಿಜ್ಞಾನ) ವಿದ್ಯುನ್ನಿಕ್ಷೇಪಣ; ವಿದ್ಯುಲ್ಲೇಪನ; ವಿದ್ಯುತ್ತಿನ ಸಹಾಯದಿಂದ ಯಾವುದೇ ಪದಾರ್ಥವನ್ನು (ಸಾಮಾನ್ಯವಾಗಿ ಲೋಹವನ್ನು) ಒಂದು ಕಾಯದ ಮೇಲೆ ಕೂರಿಸುವುದು ಯಾ ಲೇಪಿಸುವುದು.

electrodialysis
ನಾಮವಾಚಕ
(ರಸಾಯನವಿಜ್ಞಾನ) ವಿದ್ಯುದ್ವಿಗಲನ; ಕಲಿಲ ಸಾಲ್‍ (colloid sol)ಗಳನ್ನು ಶುದ್ಧೀಕರಿಸುವಲ್ಲಿ ಪೊರೆಯ ಆಚೆ ಈಚೆ ವಿದ್ಯುದ್ವಾರಗಳನ್ನಿಟ್ಟು ಅವುಗಳ ನೆರವಿನಿಂದ ವಿಗಲಿಸುವುದು.

electrodynamic
ಗುಣವಾಚಕ
ವಿದ್ಯುದ್ಬಲವಿಜ್ಞಾನದ ಯಾ ಅದಕ್ಕೆ ಸಂಬಂಧಿಸಿದ.

electrodynamics
ನಾಮವಾಚಕ
ವಿದ್ಯುದ್ಬಲವಿಜ್ಞಾನ; ವಿದ್ಯುತ್ಪ್ರವಾಹಗಳು ಅಯಸ್ಕಾಂತಗಳೊಡನೆ ಮತ್ತು ಇತರ ವಿದ್ಯುತ್ಪ್ರವಾಹಗಳೊಡನೆ ವರ್ತಿಸುವುದರಿಂದ ಉದ್ಭವಿಸುವ ಪರಿಣಾಮಗಳನ್ನು ಅಭ್ಯಸಿಸುವ ಭೌತವಿಜ್ಞಾನ ವಿಭಾಗ.

electroencephalogram
ನಾಮವಾಚಕ
(ವೈದ್ಯಶಾಸ್ತ್ರ) ವಿದ್ಯುನ್ಮಸ್ತಿಷ್ಕಲೇಖ; ಇಲೆಕ್ಟ್ರೋಇನ್ಸೆಹಲೋಗ್ರ್ಯಾಮ್‍; ವಿದ್ಯುನ್ಮಸ್ತಿಷ್ಕಲೇಖದ ಸಹಾಯದಿಂದ ಪಡೆದ ಮಿದುಳಿನ ಅಲೆಗಳ ರೇಖಾತಿ.

electroencephalograph
ನಾಮವಾಚಕ
(ವೈದ್ಯಶಾಸ್ತ್ರ) ವಿದ್ಯುನ್ಮಸ್ತಿಷ್ಕಲೇಖಿ; ಇಲೆಕ್ಟ್ರೋಎನ್‍ಸೆಹಲೋಗ್ರಾಹ್‍; ಮಿದುಳಿನ ಅಲೆಗಳನ್ನು ಯಾ ವಿದ್ಯುತ್‍ ಚಟುವಟಿಕೆಯನ್ನು ಗುರುತಿಸಿ ದಾಖಲೆ ಮಾಡಿಕೊಳ್ಳುವ ಉಪಕರಣ.

electroencephalography
ನಾಮವಾಚಕ
(ವೈದ್ಯಶಾಸ್ತ್ರ) ವಿದ್ಯುನ್ಮಸ್ತಿಷ್ಕಲೇಖನ; ಮಿದುಳಿನ ವಿದ್ಯುತ್‍ ಚಟುವಟಿಕೆಗಳನ್ನು ದಾಖಲು ಮಾಡಿಕೊಂಡು ಪರೀಕ್ಷೆ ಮಾಡುವುದು.


logo