ಅನಮ್ಯರೇಖೆ; ಕಾಂತೀಯ ಅಕ್ಷರೇಖೆ; ಭೂತಲದಲ್ಲಿ ಯಾವ ಯಾವ ಸ್ಥಳಗಳಲ್ಲಿ ಕಾಂತಸೂಚಿಯು ಕೆಳಕ್ಕೆ ಬಾಗದೆ ಹಾರಿಜವಾಗಿ ತೂಗಾಡುವುದೋ ಅಂತಹ ಸ್ಥಳಗಳನ್ನೆಲ್ಲಾ ಸೇರಿಸುವ ಕಾಲ್ಪನಿಕ ರೇಖೆ.
acme
ನಾಮವಾಚಕ
ತುತ್ತತುದಿ; ಶಿಖರ; ಶೃಂಗ; ಅಗ್ರ.
(ಪ್ರಗತಿ, ಬೆಳವಣಿಗೆ, ಮೊದಲಾದವುಗಳ) ತುತ್ತತುದಿ; ಪರಾಕಾಷ್ಠೆ: the acme of perfection ಪರಿಪೂರ್ಣತೆಯ ಪರಾಕಾಷ್ಠೆ.
(ಜೀವವಿಜ್ಞಾನ) ವಿಕಾಸೋತ್ಕರ್ಷ (ಅವಧಿ); ಒಂದು ಜೀವಿ ಜಾತಿಯ ವಿಕಾಸದಲ್ಲಿ ವಿಕಸನ ಕ್ರಿಯೆ ಅತ್ಯಂತ ಚುರುಕಾಗಿರುವುದೆಂದು ಭಾವಿಸಲಾಗುವ ಅವಧಿ.
acmite
ನಾಮವಾಚಕ
(ಲೋಹವಿದ್ಯೆ) ಆಕ್ಮೈಟ್; ಪೈರಾಕ್ಸಿನ್ ವರ್ಗದ ಒಂದು ಖನಿಜ.
acne
ನಾಮವಾಚಕ
ಮೊಡವೆ; ಮುದ್ದಣ; ಮಡಿಬೊಕ್ಕೆ.
ಮೊಡವೆ ರೋಗ.
acock
ಕ್ರಿಯಾವಿಶೇಷಣ
(ಸಾಮಾನ್ಯವಾಗಿ ಪರಂಗಿ ಟೋಪಿಗೆ ಸಂಬಂಧಿಸಿದಂತೆ) ಸೊಟ್ಟಗೆ ಮೇಲೆತ್ತಿ.
acolyte
ನಾಮವಾಚಕ
ಆಕಲೈಟ್; ಚರ್ಚುಗಳಲ್ಲಿ ಪಾದ್ರಿಯ ಪರಿಚಾರಕನಾದ ಅಧಿಕಾರಿ.
ತೈನಾತಿ; ಅನುಚರ; ಸಹಾಯಕ.
acondylous
ಗುಣವಾಚಕ
(ಸಸ್ಯವಿಜ್ಞಾನ) ಗೆಣ್ಣಿಲ್ಲದ; ಪರ್ವರಹಿತ.
aconite
ನಾಮವಾಚಕ
ಪದಗುಚ್ಛ
winter aconite ಎರಾಂತಿಸ್ ಕುಲದ, ಹಳದಿ ಹೂ ಬಿಡುವ ಚಳಿಗಾಲದ ಸಸ್ಯ.
ಆಕನೈಟ್; ವತ್ಸನಾಭಿ; ಒಂದು ಬಗೆಯ ವಿಷಸಸ್ಯ.
ವತ್ಸನಾಭಿ ಬೇರು.
(ಔಷಧವಾಗಿ ಯಾ ವಿಷವಾಗಿ ಬಳಸುವ) ವತ್ಸನಾಭಿ ಸಾರ.
(ಕಾವ್ಯಪ್ರಯೋಗ) ಘೋರ ವಿಷ.
ವತ್ಸನಾಭಿ ಸಸ್ಯದಿಂದ ತಯಾರಿಸಿದ ಔಷಧ.
aconitic
ಗುಣವಾಚಕ
ಆಕನೈಟ್‍ನಂಥ ಯಾ ಆಕನೈಟ್‍ನ; ವತ್ಸನಾಭಿಯ ಯಾ ವತ್ಸನಾಭಿಗೆ ಸಂಬಂಧಿಸಿದ.
aconitine
ನಾಮವಾಚಕ
(ರಸಾಯನವಿಜ್ಞಾನ) ಅಕಾನಿಟೈನ್; ಆಕನೈಟ್ ಸಸ್ಯದ ಎಲೆ ಮತ್ತು ಬೇರುಗಳಿಂದ ಪಡೆಯಬಹುದಾದ ಬಿಳಿ ಬಣ್ಣದ, ಅತ್ಯಂತ ವಿಷಪೂರಿತವಾದ ಆಲ್ಕಲಾಯ್ಡ್, ${\rm C}_{34}{\rm H}_{47}{\rm NO}_{11}$.