logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

undemonstrativeness
ನಾಮವಾಚಕ
ಸಂಯಮ; ಮನೋಭಾವಗಳನ್ನು ಹೊರಗೆ ತೋರಿಸಿಕೊಳ್ಳದಿರುವುದು, ಪ್ರದರ್ಶಿಸದಿರುವುದು.

undeniable
ಗುಣವಾಚಕ
  • ಪ್ರತಿ ಹೇಳಲಾಗದ; ಅಲ್ಲಗಳೆಯಲಾಗದ.
  • ನಿರ್ವಿವಾದವಾದ; ಖಚಿತವಾದ; ತಪ್ಪು ಕಂಡುಹಿಡಿಯಲಾಗದ; ನಿರ್ದುಷ್ಟವಾದ; ನಿರಾಕ್ಷೇಪಣೀಯವಾದ.
  • ಅತ್ಯುತ್ತಮವಾದ; ಶ್ರೇಷ್ಠವಾದ; ಘನವಾದ: of undeniable worth ಅತ್ಯಂತ ಶ್ರೇಷ್ಠವಾದ.

  • undeniableness
    ನಾಮವಾಚಕ
  • ಪ್ರತಿಹೇಳಲಾಗದಿರುವಿಕೆ.
  • ನಿರ್ವಿವಾದವಾಗಿರುವಿಕೆ.

  • undeniably
    ಕ್ರಿಯಾವಿಶೇಷಣ
  • ನಿರಾಕರಿಸಲಾಗದಂತೆ; ಪ್ರತಿಹೇಳಲಾಗದ ರೀತಿಯಲ್ಲಿ.
  • ನಿರ್ವಿವಾದವಾಗಿ; ಖಚಿತವಾಗಿ.

  • undenominational
    ಗುಣವಾಚಕ
    ಜಾತ್ಯತೀತ; ಯಾವುದೇ ಧರ್ಮ, ಮತ, ಪಂಗಡಗಳಿಗೂ ಸಂಬಂಧಿಸದ: undenominational education ಜಾತ್ಯತೀತ ಶಿಕ್ಷಣ.

    under
    ಉಪಸರ್ಗ ಪದಗುಚ್ಛ
  • ಕೆಳಗೆ; ಕೆಳಗಡೆ: it fell under the table ಅದು ಮೇಜಿನ ಕೆಳಗೆ ಬಿತ್ತು. under the left eye ಎಡಗಣ್ಣಿನ ಕೆಳಗೆ.
  • ಕೆಳಗೆ; ಅಡಿಯಲ್ಲಿ; ತಳಗಡೆ; ಬಉಡದಲ್ಲಿ: under the high wall ಆ ಎತ್ತರದ ಗೋಡೆಯ ಬಉಡದಲ್ಲಿ. under the cliff ಕಡಿದಾದ ಬಂಡೆಯ ಕೆಳಗೆ.
  • ಹಿಂದುಗಡೆ; ಹಿಂಭಾಗದಲ್ಲಿ; ಮರೆಯಲ್ಲಿ: under the island ದ್ವೀಪದ ಹಿಂದುಗಡೆ.
  • ಒಳಗೆ; ಒಳಗಡೆ; ತಳಗಡೆ: inserted a knife under the bark ತೊಗಟೆಯ ಒಳಗೆ ಒಂದು ಚೂರಿಯನ್ನು ಚುಚ್ಚಿದ. wore a vest under his shirt ಷರ್ಟಿನ ಒಳಗೆ ವೆಸ್ಟ್‍ ತೊಟ್ಟಿದ್ದ.
  • ಕೆಳದರ್ಜೆಯ; ಕೆಳಗಿನ: no one under a bishop ಒಬ್ಬ ಬಿಷಪ್‍ಗಿಂತ ಕೆಳಗಿನ ದರ್ಜೆಯವರು ಯಾರೂ ಇಲ್ಲ.
  • ಕಡಮೆ ಖರ್ಚಿನಲ್ಲಿ, ವೆಚ್ಚದಲ್ಲಿ: under Rs. 4000 ನಾಲ್ಕು ಸಾವಿರ ರೂಪಾಯಿ ಗಳಿಗಿಂತ ಕಡಮೆ ಖರ್ಚಿನಲ್ಲಿ.
  • ಒಳಗಾಗಿ; ಸಿಕ್ಕಿ; ಅಧೀನವಾಗಿ; ಒಳಪಟ್ಟು; ಈಡಾಗಿ; ಅನುಭವಿಸುತ್ತ: sank under the load ಭಾರದಿಂದ ಕೆಳಗೆ ಕುಸಿಯಿತು. groaning under tyranny ದಬ್ಬಾಳಿಕೆಗೆ ಸಿಕ್ಕಿ ನರಳುತ್ತ. is under repair ದುರಸ್ತಿಯಲ್ಲಿದೆ.
  • ಪೈರು – ನೆಟ್ಟಿರುವ, ಹಾಕಿರುವ: 50 acres under wheat ಐವತ್ತು ಎಕರೆಗೆ ಗೋಧಿ ಹಾಕಿದ್ದು.
  • (ಯಾವುದೋ ಇಂಧನಶಕ್ತಿ ಮೊದಲಾದವುಗಳಿಂದ) ಮುಂದಕ್ಕೆ ಚಲಿಸುತ್ತ; ದೂಡಲಾಗುತ್ತ: under sail ಹಾಯಿ (ಪಟದ) ನೆರವಿನಿಂದ ಮುಂದಕ್ಕೆ ಚಲಿಸುತ್ತ.
  • (ಪ್ರಾಚೀನ ಪ್ರಯೋಗ) (ಒಬ್ಬರ ಅಧಿಕೃತ ರುಜು, ಮುದ್ರೆ, ಕೈಬರೆಹ, ಮೊದಲಾದವುಗಳಿಂದ) (ಮುಖ್ಯವಾಗಿ) ದೃಢೀಕರಿಸಿದ; ಪ್ರಮಾಣ ಮಾಡಿದ: under one’s hand and seal ತಾನೇ ರುಜುಮಾಡಿ ಮುದ್ರೆ ಒತ್ತಿದ.
  • ಸರದಿಯ ಪ್ರಕಾರ ಇನ್ನೊಬ್ಬ (ಇಸ್ಪೀಟು) ಆಟಗಾರನನ್ನು – ಅನುಸರಿಸುತ್ತ, ಹಿಂಬಾಲಿಸುತ್ತ.
  • ಕೆಳಗೆ; ವರ್ಗದಲ್ಲಿ; ಗುಂಪಿನಲ್ಲಿ; ವರ್ಗೀಕರಣಗೊಂಡು: that book goes under biology ಆ ಪುಸ್ತಕ ಜೀವವಿಜ್ಞಾನದ ಕೆಳಗೆ ಬರುತ್ತದೆ. goes under many names ಹಲವಾರು ಹೆಸರುಗಳಲ್ಲಿ ಇದೆ.

  • under
    ಕ್ರಿಯಾವಿಶೇಷಣ ಪದಗುಚ್ಛ
  • (ಸ್ಥಾನ ಯಾ ಸ್ಥಿತಿಯಲ್ಲಿ) ಕೆಳಗಡೆಗೆ; ಒಳಗಡೆ; ಅಡಿಯಲ್ಲಿ; ತಳಕ್ಕೆ: kept him under ಅವನನ್ನು ಕೆಳಗಡೆ (ಕೆಳಗಿನ ಸ್ಥಾನದಲ್ಲಿ) ಇರಿಸಲಾಗಿದೆ.
  • (ಆಡುಮಾತು) ಅರಿವಳಿದ ಸ್ಥಿತಿಯಲ್ಲಿ; ಪ್ರಜ್ಞಾಹೀನ ಅವಸ್ಥೆಯಲ್ಲಿ: put him under for the operation ಶಸ್ತ್ರಚಿಕಿತ್ಸೆಗಾಗಿ ಅವನನ್ನು ಅರಿವಳಿಕೆಯ ಸ್ಥಿತಿಯಲ್ಲಿಡು.

  • under
    ಗುಣವಾಚಕ
    ಕೆಳ; ಕೆಳಗಿನ; ಕೆಳಗಡೆಯ: the under jaw ಕೆಳದವಡೆ. the under servants ಕೆಳ ಆಳುಗಳು.

    under-
    ಪೂರ್ವಪ್ರತ್ಯಯ
  • ಕೆಳಗೆ; ಅಡಿಯಲ್ಲಿ: under-ground ಭೂಮಿಯ ಅಡಿಯಲ್ಲಿನ, ಕೆಳಗಿನ.
  • – ಕ್ಕಿಂತ ಕಡಮೆಯಾಗಿ, ಕೆಳಗೆ: under-sell ಕೆಳಗಿನ ಬೆಲೆಗೆ ಮಾರು.
  • ಕಡಮೆಯಾಗಿ; ಅಪೂರ್ಣವಾಗಿ: under-cook ಕಡಮೆ ಬೇಯಿಸು. under-developed ಪೂರ್ತಿ ಅಭಿವೃದ್ಧಿ ಹೊಂದದ; ಹಿಂದುಳಿದ.
  • – ಕ್ಕೆ ಕೆಳಗಿರುವ; ಒಳಗಡೆಯಿರುವ; ಅಧೀನವಾದ: under-lip ಕೆಳದುಟಿ. under-soil ಕೆಳಮಣ್ಣು; ತಳಮಣ್ಣು. under-secretary ಅಧೀನ ಕಾರ್ಯದರ್ಶಿ.

  • under-secretary
    ನಾಮವಾಚಕ
    ಅಧೀನ ಕಾರ್ಯದರ್ಶಿ; ಮುಖ್ಯವಾಗಿ ಉಪ ಮಂತ್ರಿ ಯಾ ಹಿರಿಯ ಸಿವಿಲ್‍ ಸೇವೆಯ ನೌಕರ.


    logo