logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ointment
ನಾಮವಾಚಕ
ಮುಲಾಮು: ಅನುಲೇಪನ(ನ); ಔಷಧವಾಗಿಯೋ ಅಂಗರಾಗವಾಗಿಯೋ ಉಪಯೋಗಿಸುವ ಜಿಡ್ಡಾದ ಅರೆ ಘನ ಪದಾರ್ಥ.

Oireachtas
ನಾಮವಾಚಕ
  • (ಅಧ್ಯಕ್ಷರು ಮತ್ತು ಎರಡು ಸಭೆಗಳು, ಚೇಂಬರ್‍ ಆಹ್‍ ಡೆಪ್ಯುಟೀಸ್‍ ಮತ್ತು ಸೆನೆಟ್‍ಗಳೂ ಸೇರಿದ) ಐರ್ಲೆಂಡಿನ ಪಾರ್ಲಿಮೆಂಟು.
  • (ಗೇಲಿಕ್‍ ಭಾಷೆ, ಸಂಪ್ರದಾಯ, ಪರಂಪರೆ, ಕಲೆಗಳು, ಮೊದಲಾದವುಗಳ ಅಭಿವೃದ್ಧಿಗಾಗಿ) ಗೇಲಿಕ್‍ ಮಾತನಾಡುವ ಜನರು (ಸಾಮಾನ್ಯವಾಗಿ ಡಬ್ಲಿನ್‍ನಲ್ಲಿ) ನಡೆಸುವ ವಾರ್ಷಿಕ ಸಭೆ.

  • OK
    ಗುಣವಾಚಕ
    (ಆಡುಮಾತು) (ಸಾಮಾನ್ಯವಾಗಿ ಒಪ್ಪಿಗೆಯನ್ನು ಯಾ ಸಮ್ಮತಿಯನ್ನು ಸೂಚಿಸಲು ಬಳಸುವ ಭಾವಸೂಚಕ ಅವ್ಯಯ ) ಸರಿ; ಸಮ್ಮತ; ಆಗಲಿ.

    OK
    ಕ್ರಿಯಾವಿಶೇಷಣ
    (ಆಡುಮಾತು) ಚೆನ್ನಾಗಿ; ತೃಪ್ತಿಕರವಾಗಿ: that worked out OK ಅದು ತೃಪ್ತಿಕರವಾಗಿ ಆಯಿತು.

    OK
    ನಾಮವಾಚಕ
    (ಆಡುಮಾತು) ಒಪ್ಪಿಗೆ; ಸಮ್ಮತ.

    OK
    ಸಕರ್ಮಕ ಕ್ರಿಯಾಪದ
    ಒಪ್ಪು; ಸಮ್ಮತಿಸು; ಸಮ್ಮತಿ ನೀಡು; ಒಪ್ಪಿಗೆ ಕೊಡು.

    OK
    ಸಂಕ್ಷಿಪ್ತ
    (ಅಮೆರಿಕನ್‍ ಪ್ರಯೋಗ) Oklahoma (ಅಧಿಕೃತ ಅಂಚೆ ಬಳಕೆಯಲ್ಲಿ).

    okapi
    ನಾಮವಾಚಕ
    ಓಕಾಪಿ; ಓಕಾಪಿಯ ಜಾನ್‍ಸ್ಟೋನಿ ಕುಲಕ್ಕೆ ಸೇರಿದ, ಉತ್ತರ ಮತ್ತು ಆಗ್ನೇಯ ಸೆರ್‍ ಪ್ರಾಂತದ ಮೂಲದ, ಜಿರಾಹೆಯ ಕತ್ತಿನಂಥ ಕತ್ತು, ಜೀಬ್ರದಂಥ ದೇಹ ಉಳ್ಳ, ಕಡುಕೆಂಗಂದು ಬಣ್ಣದ ತೊಗಲು, ಹಿಂಭಾಗ ಮತ್ತು ಕಾಲುಗಳ ಮೇಲ್ಭಾಗಗಳಲ್ಲಿ ಮಾತ್ರ ಅಡ್ಡಡ್ಡವಾದ ಗೆರೆಗಳು ಇರುವ, ಮೆಲುಕು ಹಾಕುವ ಒಂದು ಸಸ್ತನಿ ಪ್ರಾಣಿ.

    okey-doke
    ಗುಣವಾಚಕ
    (ಅಶಿಷ್ಟ) = 1okey-dokey.

    okey-doke
    ಕ್ರಿಯಾವಿಶೇಷಣ
    (ಅಶಿಷ್ಟ) = 2okey-dokey.


    logo