logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mangosteen
ನಾಮವಾಚಕ
ಮ್ಯಾಂಗಸ್ಟೀನ್‍:
  • ದಪ್ಪವಾದ ಕೆಂಪು ಸಿಪ್ಪೆಯೂ ಬಿಳಿಯ ರಸಭರಿತ ತಿರುಳೂ ಉಳ್ಳ ಹಣ್ಣನ್ನು ಬಿಡುವ, ಇಂಡೊನೀಷಿಯದ, ಗಾರ್ಸಿನಿಯ ಕುಲದ, ಒಂದು ಬಗೆಯ ಮರ.
  • ಈ ಮರದ ಹಣ್ಣು.

  • mangrove
    ನಾಮವಾಚಕ
    ಮ್ಯಾಂಗ್ರೋವ್‍ (ಮರ); ತೊಗಟೆಯನ್ನು ಔಷಧಕ್ಕೂ ಚರ್ಮ ಹದ ಮಾಡುವುದಕ್ಕೂ ಬಳಸುವ, ಕಂದಾಳ ಯಾ ಕಾಂಡಲು ಕುಲದ, ಉಷ್ಣವಲಯದ ಒಂದು ಬಗೆಯ ಮರ ಯಾ ಪೊದೆ.

    mangy
    ಗುಣವಾಚಕ
  • ಮೇಂಜ್‍ (ಚರ್ಮ) ರೋಗ ತಗುಲಿದ.
  • ಕೊಳಕು ಕೊಳಕಾದ; ಅಸಹ್ಯಕರವಾದ; ಹೊಲಸಾದ.

  • manhandle
    ಸಕರ್ಮಕ ಕ್ರಿಯಾಪದ
  • (ಭಾರವಾದ ವಸ್ತುಗಳನ್ನು) ಮನುಷ್ಯ ಬಲದಿಂದ, ಪ್ರಯತ್ನದಿಂದ ಸಾಗಿಸು.
  • (ಆಡುಮಾತು) ಕೈಮಾಡು; ಒರಟೊರಟಾಗಿ ದೇಹಬಲದಿಂದ (ಒಬ್ಬನನ್ನು) ಹಿಡಿದು ಜಗ್ಗಾಡು.

  • manhattan
    ನಾಮವಾಚಕ
    ವರ್‍ಮೌತ್‍, ವಿಸ್ಕಿ, ಮೊದಲಾದವುಗಳನ್ನು ಮಿಶ್ರಣ ಮಾಡಿ ತಯಾರಿಸಿದ ಒಂದು ಮಿಶ್ರ ಮದ್ಯ.

    manhole
    ನಾಮವಾಚಕ
    ಆಳುಗಂಡಿ; ನೆಲ, ಚರಂಡಿ, ಮೊದಲಾದವುಗಳಲ್ಲಿ ಒಬ್ಬ ಮನುಷ್ಯ ಒಳಹೋಗಲು ಮಾಡಿರುವ ಕಂಡಿ.

    manhood
    ನಾಮವಾಚಕ
  • ಗಂಡು ಸ್ಥಿತಿ; ಪುರುಷಾವಸ್ಥೆ; (ಮಗುವಾಗಲಿ ಹೆಂಗಸಾಗಲಿ ಆಗಿರದ) ಗಂಡಸಿನ ಸ್ಥಿತಿ.
  • ಗಂಡಸುತನ; ಗಂಡುತನ; ಪುಂಸ್ತ್ವ; ಧೈರ್ಯ; ಪೌರುಷ.
  • (ಯಾವುದೇ ದೇಶದ) ಗಂಡಸರು; ಪುರುಷರು; ಪುರುಷಕೋಟಿ.
  • ಗಂಡಸಿನ ಲೈಂಗಿಕ – ಶಕ್ತಿ, ಸಾಮರ್ಥ್ಯ.
  • ಮಾನವತ್ವ; ಮನುಷ್ಯತ್ವ; ಮನುಷ್ಯನಾಗಿರುವಿಕೆ.

  • manhood suffrage
    ನಾಮವಾಚಕ
    ಪ್ರಾಪ್ತ ವಯಸ್ಕ (ಪುರುಷರ) ಮತದಾನದ – ಹಕ್ಕು, ವ್ಯವಸ್ಥೆ.

    manhunt
    ನಾಮವಾಚಕ
    ವ್ಯಕ್ತಿಬೇಟೆ; ಮುಖ್ಯವಾಗಿ ಅಪರಾಧಿಯನ್ನು ಹಿಡಿಯಲು ಮಾಡುವ ವ್ಯವಸ್ಥಿತವಾದ ಶೋಧನೆ, ಹುಡುಕಾಟ.

    mania
    ನಾಮವಾಚಕ
  • (ಮನಶ್ಶಾಸ್ತ್ರ) ಬುದ್ಧಿವಿಕಲ್ಪ; ಚಿತ್ತವಿಕಾರ; ಬುದ್ಧಿ ಭ್ರಮೆ; ಉನ್ಮಾದ; ಹುಚ್ಚು; (ಉದ್ವೇಗ, ಭ್ರಾಂತಿ, ಹಿಂಸಾಪ್ರವೃತ್ತಿ, ಮೊದಲಾದ ಕುರುಹುಗಳನ್ನೊಳಗೊಂಡ) ಮನೋವಿಕಾರ.
  • (ಯಾವುದೇ ವಸ್ತುವಿನ ಯಾ ಕಾರ್ಯದ ಬಗ್ಗೆ) ಹುಚ್ಚು; ಗೀಳು; ಅತ್ಯಾಸಕ್ತಿ; ಮೋಹ; ವ್ಯಾಮೋಹ; ಅತ್ಯುತ್ಸಾಹ.


  • logo