logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impetratory
ಗುಣವಾಚಕ
(ಮುಖ್ಯವಾಗಿ ದೇವತಾಶಾಸ್ತ್ರ) ಪ್ರಾರ್ಥಿಸಿ ಪಡೆಯುವ.

impetuosity
ನಾಮವಾಚಕ
  • ರಭಸ; ಉರುಬು; ಜೋರು; ವೇಗವಾಗಿ, ರಭಸವಾಗಿ ಚಲಿಸುವಿಕೆ.
  • ಉರವಣಿ; ದುಡುಕು; ಆತುರದ ವರ್ತನೆ.

  • impetuous
    ಗುಣವಾಚಕ
  • ರಭಸದ; ಉರುಬಿನ; ಜೋರಿನ; ರಭಸವಾಗಿ, ವೇಗವಾಗಿ, ಬಿರುಸಾಗಿ – ಚಲಿಸುವ.
  • ಉರವಣೆಯ; ದುಡುಕಿನ; ಆತುರದಿಂದ ವರ್ತಿಸುವ.

  • impetuously
    ಕ್ರಿಯಾವಿಶೇಷಣ
  • ರಭಸವಾಗಿ; ಉರುಬಿನಿಂದ; ಜೋರಿನಿಂದ.
  • ಉರವಣೆಯಿಂದ; ದುಡುಕಿನಿಂದ.

  • impetuousness
    ನಾಮವಾಚಕ
    = impetuosity.

    impetus
    ನಾಮವಾಚಕ
  • (ಒಂದು ವಸ್ತು ಚಲಿಸುವ) ರಭಸ; ಉರುಬು; ವೇಗ.
  • (ರೂಪಕವಾಗಿ) ಪ್ರಚೋದನೆ; ಆವೇಗ; ಚಾಲಕ ಶಕ್ತಿ.

  • impeyan pheasant
    ನಾಮವಾಚಕ
    ಇಂಪಿಯನ್‍ ಹೆಸಂಟ್‍; ಉತ್ತರ ಭಾರತದಲ್ಲಿನ, ಲಹಹೋರಸ್‍ ಕುಲದ, ತಲೆಯ ಮೇಲೆ ಶಿಖೆಯಿರುವ, ಉಜ್ಜ್ವಲವರ್ಣದ ಗರಿಗಳುಳ್ಳ, ಜೀವಂಜೀವ ಪಕ್ಷಿ.

    impi
    ನಾಮವಾಚಕ
    (ದಕ್ಷಿಣ ಆಹ್ರಿಕದ) ಸೂಲು, ಬಂಟು ಯೋಧರು; ಸೂಲು ಜನಾಂಗದ ಯೋಧರು, ಯೋಧರ ತಂಡ.

    impiety
    ನಾಮವಾಚಕ
  • (ದೈವ)ಭಕ್ತಿರಾಹಿತ್ಯ; ಶ್ರದ್ಧಾರಾಹಿತ್ಯ; ದೈವಭಕ್ತಿಯಿಲ್ಲದಿರುವುದು; ನಾಸ್ತಿಕತೆ.
  • (ಗುರು ಹಿರಿಯರು ಮೊದಲಾದವರ ವಿಷಯದಲ್ಲಿ) ಅನಾದರ; ಅಶ್ರದ್ಧೆ; ಅಗೌರವ; ಶ್ರದ್ಧಾಭಕ್ತಿಯಿಲ್ಲದಿರುವುದು.

  • impignorate
    ಸಕರ್ಮಕ ಕ್ರಿಯಾಪದ
    (ಸ್ಕಾಟ್ಲೆಂಡ್‍ ಪ್ರಯೋಗ) (ಆಸ್ತಿ ಮೊದಲಾದವನ್ನು) ಅಡವಿಡು; ಒತ್ತೆಯಿಡು.


    logo