logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cannelloni
ನಾಮವಾಚಕ
(ಬಹುವಚನ) ಮಾಂಸ ಮತ್ತು ಮಸಾಲೆಗಳನ್ನೊಳಗೊಂಡ, ‘ಪಾಸ್ಟ’ ಭಕ್ಷ್ಯದ ಸುರುಳಿಗಳು.

cannelure
ನಾಮವಾಚಕ
(ಗುಂಡು ಮೊದಲಾದವುಗಳ ಸುತ್ತ ಇರುವ) ಗಾಡಿ; ದೋಣಿ; ಹಳ್ಳಗೆರೆ.

canner
ನಾಮವಾಚಕ
ಕ್ಯಾನಿಗ; (ಹಣ್ಣು ಮೊದಲಾದವನ್ನು) ಡಬ್ಬಿಗಳಲ್ಲಿ ತುಂಬಿ ಭದ್ರಪಡಿಸುವವನು.

cannery
ನಾಮವಾಚಕ
ಕ್ಯಾನರಿ; ಆಹಾರಪದಾರ್ಥಗಳನ್ನು ಡಬ್ಬಿಗಳಲ್ಲಿ ತುಂಬಿ ಭದ್ರಪಡಿಸುವ ಕಾರ್ಖಾನೆ.

cannibal
ನಾಮವಾಚಕ
  • ನರಾಹಾರಿ; ನರಭಕ್ಷಕ; ಮನುಷ್ಯನನ್ನು ತಿನ್ನುವವನು.
  • (ಪ್ರಾಣಿಗಳಲ್ಲಿ) ಸಜಾತಿಭಕ್ಷಕ (ಪ್ರಾಣಿ); ಸ್ವಜಾತಿ ಭಕ್ಷಕ.

  • cannibal
    ಗುಣವಾಚಕ
  • ನರಭಕ್ಷಕ; ನರಾಹಾರಿ; ಮನುಷ್ಯನನ್ನು ತಿನ್ನುವ.
  • (ಪ್ರಾಣಿಗಳಲ್ಲಿ) ಸಜಾತಿಭಕ್ಷಕ; ಸ್ವಜಾತಿಭಕ್ಷಕ.

  • cannibalise
    ಸಕರ್ಮಕ ಕ್ರಿಯಾಪದ
    =cannibalize.

    cannibalism
    ನಾಮವಾಚಕ
  • ನರಭಕ್ಷಣೆ.
  • (ಪ್ರಾಣಿಗಳಲ್ಲಿ, ಪಕ್ಷಿಗಳಲ್ಲಿ) ಸಜಾತಿಭಕ್ಷಣೆ; ಸ್ವಜಾತಿಭಕ್ಷಣೆ.

  • cannibalistic
    ಗುಣವಾಚಕ
  • ನರಭಕ್ಷಕನಾದ.
  • ಸಜಾತಿಭಕ್ಷಣೆಯ; ಸ್ವಜಾತಿಭಕ್ಷಣೆಯ.

  • cannibalize
    ಸಕರ್ಮಕ ಕ್ರಿಯಾಪದ
    (ಯಂತ್ರ ಮೊದಲಾದವುಗಳ ಭಾಗಗಳನ್ನು) ಅದೇ ತೆರನ ಯಂತ್ರ ಮೊದಲಾದವುಗಳ ದುರಸ್ತಿಗೆ ಬಳಸು.


    logo