logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

undefined
ಗುಣವಾಚಕ
  • ನಿಷ್ಕೃಷ್ಟವಾಗಿ ಹೇಳದಿರುವ; ಲಕ್ಷಣ ನಿರೂಪಿಸದ.
  • (ಎಲ್ಲೆ, ಮೇರೆ, ಹದ್ದು, ಮೊದಲಾದವುಗಳನ್ನು) ಗೊತ್ತುಮಾಡದೆ ಬಿಟ್ಟಿರುವ; ನಿರ್ಣಯಿಸದಿರುವ; ಸ್ಪಷ್ಟಗೊಳಿಸದಿರುವ.

  • undeify
    ಸಕರ್ಮಕ ಕ್ರಿಯಾಪದ
    ದೇವರೆಂದು ಗಣಿಸದಿರು; ದೇವತ್ವ ಕಳೆ; ದೇವರೆಂದು – ಭಾವಿಸದಿರು, ಆರಾಧಿಸದಿರು.

    undelivered
    ಗುಣವಾಚಕ
  • ಉದ್ಧರಿಸದ; ಉಳಿಸದ; ರಕ್ಷಿಸದ.
  • ಬಿಡುಗಡೆ ಮಾಡದ; ವಿಮೋಚನೆ ಪಡೆಯದ.
  • (ಗರ್ಭಿಣಿಯ ವಿಷಯದಲ್ಲಿಇನ್ನೂ) ಹೆತ್ತಿರದ; ಹಡೆದಿಲ್ಲದ; ಪ್ರಸವಿಸದ.
  • (ಪತ್ರ ಮೊದಲಾದವುಗಳ ವಿಷಯದಲ್ಲಿ) ತಲಪಿಸದ; ಮುಟ್ಟಿಸದ; ಬಟವಾಡೆ ಮಾಡದ.
  • (ಭಾಷಣ ಮೊದಲಾದವುಗಳ ವಿಷಯದಲ್ಲಿ) ಅನುಕ್ತ; ಪಠಿಸದ; ಹೇಳದ; ಮಾಡದ.
  • (ಶಿಶುವಿನ ವಿಷಯದಲ್ಲಿ) ಅಜಾತ; ಇನ್ನೂ ಹುಟ್ಟಿಲ್ಲದ; ಜನಿಸಿಲ್ಲದ.

  • undemanding
    ಗುಣವಾಚಕ
  • ಹಕ್ಕು ಹಿಡಿದು, ಜರೂರಾಗಿ – ಕೇಳದ, ನಿರ್ಬಂಧಪಡಿಸಿ ಕೇಳದ; ತಗಾದೆ ಮಾಡದಿರುವ.
  • ಅಪೇಕ್ಷಿಸದ; ಅಪೇಕ್ಷೆಯಿಲ್ಲದ; ತೃಪ್ತ.

  • undemandingness
    ನಾಮವಾಚಕ
  • ತಗಾದೆ ಮಾಡದಿರುವಿಕೆ.
  • ಅನಪೇಕ್ಷೆ; ತೃಪ್ತಿ.

  • undemocratic
    ಗುಣವಾಚಕ
    ಪ್ರಜಾಪ್ರಭುತ್ವವಿರೋಧಿಯಾದ; ಪ್ರಜಾತಂತ್ರಕ್ಕೆ ಅನುಗುಣವಾಗಿರದ.

    undemocratically
    ಕ್ರಿಯಾವಿಶೇಷಣ
    ಪ್ರಜಾಪ್ರಭುತ್ವಕ್ಕೆ – ಅನುಗುಣವಾಗಿರದೆ ಯಾ ವಿರೋಧಿಯಾಗಿ.

    undemonstrated
    ಗುಣವಾಚಕ
  • ಪ್ರದರ್ಶಿಸದ; ತೋರಿಸದ.
  • ಪ್ರತ್ಯಕ್ಷಮಾಡಿ ಯಾ ಪ್ರಾಯೋಗಿಕವಾಗಿ ತೋರಿಸದ; ನಿದರ್ಶನ ಕೊಡದ.
  • ಸಿದ್ಧಾಂತ ಮಾಡಿ ತೋರಿಸದ; ಸಾಧಿಸದ.

  • undemonstrative
    ಗುಣವಾಚಕ
    ಸಂಯಮದ; ಮನೋಭಾವಗಳನ್ನು ಹೊರಗೆ ತೋರಿಸಿಕೊಳ್ಳದ, ಪ್ರದರ್ಶಿಸದ, ಪ್ರಕಟಿಸದ, ಬಹಿರಂಗಪಡಿಸದ.

    undemonstratively
    ಕ್ರಿಯಾವಿಶೇಷಣ
    ಸಂಯಮದಿಂದ; ಮನೋಭಾವಗಳನ್ನು ಹೊರಗೆ ತೋರಿಸಿಕೊಳ್ಳದೆ, ಪ್ರದರ್ಶಿಸದೆ.


    logo