logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mangily
ಕ್ರಿಯಾವಿಶೇಷಣ
ಕೊಳಕು ಕೊಳಕಾಗಿ; ಅಸಹ್ಯಕರವಾಗಿ.

manginess
ನಾಮವಾಚಕ
  • ಮೇಂಜ್‍ರೋಗ ತಗಲಿರುವಿಕೆ.
  • ಕೊಳಕಾಗಿರುವಿಕೆ; ಅಸಹ್ಯವಾಗಿರುವಿಕೆ.

  • mangle
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಒತ್ತು ಯಂತ್ರ; ಒಗೆದ ಬಟ್ಟೆಗಳ ಮೇಲೆ ಉರುಳಿಸಿ ನೀರನ್ನು ಹಿಂಡಿ ಸುಕ್ಕುಗಳಿಲ್ಲದಂತೆ ಮಾಡುವ, ಎರಡೋ ಹೆಚ್ಚೋ ಉರುಳೆಗಳುಳ್ಳ ಯಂತ್ರ.

    mangle
    ಸಕರ್ಮಕ ಕ್ರಿಯಾಪದ
    ಒತ್ತುಯಂತ್ರದಿಂದ (ಬಟ್ಟೆ ಮೊದಲಾದವುಗಳ) ನೀರು ಹಿಂಡಿ ಸುಕ್ಕಿಲ್ಲದಂತೆ ನಯಗೊಳಿಸು.

    mangle
    ಸಕರ್ಮಕ ಕ್ರಿಯಾಪದ
  • (ಆಯುಧದಿಂದ ಹೊಡೆದು ಹೊಡೆದು) ಕಡಿ; ಖಂಡತುಂಡವಾಗಿ ಕತ್ತರಿಸು; ಕೊಚ್ಚು; ಕಚ್ಚುಕಚ್ಚಾಗಿ, ಛಿದ್ರಛಿದ್ರವಾಗಿ ಕತ್ತರಿಸು.
  • ವಿಕಾರವಾಗುವಂತೆ – ಒಡ್ಡೊಡ್ಡಾಗಿ ಕಡಿ, ಕತ್ತರಿಸು.
  • (ತಪ್ಪುತಪ್ಪಾಗಿ ಉಲ್ಲೇಖಿಸುವುದು, ಉಚ್ಚರಿಸುವುದು, ಮೊದಲಾದವುಗಳ ಮೂಲಕ ಗ್ರಂಥಭಾಗ ಮೊದಲಾದವನ್ನು) ಹಾಳುಮಾಡು; ಅನರ್ಥಗೊಳಿಸು; ಕುಲಗೆಡಿಸು.

  • mangler
    ನಾಮವಾಚಕ
    ಕೊಚ್ಚುಗ; (ಮಾಂಸ, ಕಬ್ಬು, ಮೊದಲಾದವನ್ನು) ಕೊಚ್ಚುವ, ಕತ್ತರಿಸಿ ಹಾಕುವ ಯಂತ್ರ.

    mango
    ನಾಮವಾಚಕ ಪದಗುಚ್ಛ
    mango trick (ಕ್ಷಣಕಾಲದಲ್ಲಿ ಮೊಳೆತು ಬೆಳೆದು ಹಣ್ಣು ಬಿಡುವಂತೆ ತೋರಿಸುವ) ಮಾವಿನ – ಯಕ್ಷಿಣಿ, ಇಂದ್ರಜಾಲ, ಜಾದೂ.
  • ಮಾವು; ಆಮ್ರ; ಮಾವಿನ ಮರ.
  • ಮಾವಿನ ಕಾಯಿ ಯಾ ಹಣ್ಣು.

  • mangold
    ನಾಮವಾಚಕ
    = mangel.

    mangold-wurzel
    ನಾಮವಾಚಕ
    = mangel.

    mangonel
    ನಾಮವಾಚಕ
    (ಸೈನಿಕ ಚರಿತ್ರೆ) ಕವಣೆ ಯಂತ್ರ; ಶಿಲಾ ಪ್ರಕ್ಷೇಪಕ; (ಕಲ್ಲುಗಳು ಮೊದಲಾದವನ್ನು ತೂರುವ) ಒಂದು ಯುದ್ಧಯಂತ್ರ.


    logo