logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

lashkar
ನಾಮವಾಚಕ
ಲಷ್ಕರ್‍ದಳ; ಭಾರತದ ಶಸ್ತ್ರಸಜ್ಜಿತ ಗುಡ್ಡಗಾಡು ದಳ.

lashless
ಗುಣವಾಚಕ
ಕಣ್ಣೆವೆಯಿಲ್ಲದ; ರೆಪ್ಪೆಯಿಲ್ಲದ.

lasque
ನಾಮವಾಚಕ
ಕೆಟ್ಟ ಚಪ್ಪಟೆ ವಜ್ರ; ಚಪ್ಪಟೆಯಾಗಿ, ವಿರೂಪವಾಗಿ ದೋಷಯುತವಾಗಿ – ಇರುವ ವಜ್ರ.

lass
ನಾಮವಾಚಕ
(ಮುಖ್ಯವಾಗಿ ಸ್ಕಾಟ್ಲೆಂಡ್‍ ಮತ್ತು ಉತ್ತರ ಇಂಗ್ಲೆಂಡುಗಳಲ್ಲಿ ಯಾ ಕಾವ್ಯಪ್ರಯೋಗ.)
  • ಹುಡುಗಿ; ಬಾಲೆ; ತರಳೆ; ಪೋರಿ.
  • ಇನಿಯೆ; ನಲ್ಲೆ; ಪ್ರಿಯೆ; ಮನದನ್ನೆ.

  • Lassa fever
    ನಾಮವಾಚಕ
    ಆಹ್ರಿಕದ (ಬಹುವೇಳೆ) ಮಾರಕವಾದ ವೈರಸ್‍ ಜ್ವರ.

    lassie
    ನಾಮವಾಚಕ
    (ಆಡುಮಾತು) = lass.

    lassitude
    ನಾಮವಾಚಕ
  • ಆಯಾಸ; ಸುಸ್ತು; ದಣಿವು; ಬಳಲಿಕೆ; ಶ್ರಮ; ಆಲಸ್ಯ; ಆಲಸಿಕೆ.
  • ನಿರುತ್ಸಾಹ; ನಿರಾಸಕ್ತಿ; ಜಡತೆ; ಶ್ರಮಪಡಲು ಯಾ ಆಸಕ್ತಿ ವಹಿಸಲು ಇಚ್ಛೆಯಿಲ್ಲದಿರುವುದು.

  • lasso
    ನಾಮವಾಚಕ
    (ಬಹುವಚನ lassos ಯಾ lassoes). ಕುಣಿಕೆ ಹಗ್ಗ; ಕೊರಳ ಹಗ್ಗ; ಕಂಠಪಾಶ; ದಕ್ಷಿಣ ಅಮೆರಿಕನ್‍ ಪ್ರಯೋಗದಲ್ಲಿ ದನ ಮೊದಲಾದವನ್ನು ಹಿಡಿಯಲು ಅವುಗಳ ಕತ್ತಿಗೆ ಎಸೆಯುವ, ಜೀರು ಕುಣಿಕೆಯುಳ್ಳ ಹಗ್ಗ, ಬಾರು.

    lasso
    ಸಕರ್ಮಕ ಕ್ರಿಯಾಪದ
    (ವರ್ತಮಾನಕಾಲ ಪ್ರಥಮಪುರುಷ ಏಕವಚನ lassoes, ಭೂತರೂಪ ಮತ್ತು ಭೂತಕೃದಂತ lassoed). (ಮುಖ್ಯವಾಗಿ ಉತ್ತರ ಅಮೆರಿಕದಲ್ಲಿ ದನ ಮೊದಲಾದವನ್ನು) ಕುಣಿಕೆ ಪಾಶ ಎಸೆದು, ಕೊರಳ ಹಗ್ಗ ಬೀಸಿ – ಹಿಡಿ.

    lassoer
    ನಾಮವಾಚಕ
    ದನ ಮೊದಲಾದವನ್ನು ಕುಣಿಕೆಹಗ್ಗ ಹಾಕಿ ಹಿಡಿಯುವವ.


    logo