logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imperturbable
ಗುಣವಾಚಕ
ಉದ್ರೇಕಗೊಳ್ಳದ; ಕ್ಷೋಭೆಗೊಳ್ಳದ; ಅನುದ್ವಿಗ್ನ; ಶಾಂತ; ಅಕ್ಷೋಭ್ಯ.

imperturbableness
ನಾಮವಾಚಕ
= imperturbability.

imperturbably
ಕ್ರಿಯಾವಿಶೇಷಣ
ಶಾಂತವಾಗಿ; ನಿರುದ್ವೇಗದಿಂದ; ಅನುದ್ವೇಗದಿಂದ; ಪ್ರಕ್ಷುಬ್ಧಗೊಳ್ಳದೆ.

impervious
ಗುಣವಾಚಕ
  • (ನೀರು ಮೊದಲಾದವು) ಹೊಗಲಾಗದ; ಪ್ರವೇಶಿಸಲಾಗದ; ಅಪ್ರವೇಶ್ಯ; ಅಭೇದ್ಯ; ತೂರದ: impervious to bullets ಗುಂಡು ಹೊಗಲಾಗದ.
  • (ರೂಪಕವಾಗಿ) ಪ್ರಭಾವಿತನಾಗದ; ಸಗ್ಗದ; ವಿಚಲಿತನಾಗದ: impervious to argument ವಾದಕ್ಕೆ ಕಿವಿಗೊಡದ.

  • imperviously
    ಕ್ರಿಯಾವಿಶೇಷಣ
  • ಅಪ್ರವೇಶ್ಯವಾಗಿ; ಹೊಗಲಾಗದಂತೆ.
  • (ರೂಪಕವಾಗಿ) ಪ್ರಭಾವಕ್ಕೆ ಒಳಗಾಗದೆ; ಅವಿಚಲಿತವಾಗಿ.

  • imperviousness
    ನಾಮವಾಚಕ
  • ಅಪ್ರವೇಶ್ಯತೆ; ಹೊಗಲಾಗದಂತಿರುವುದು.
  • (ರೂಪಕವಾಗಿ) ಅವಿಚಾಲ್ಯತೆ; ಪ್ರಭಾವಕ್ಕೆ ಒಳಗಾಗದಿರುವಿಕೆ.

  • impetiginous
    ಗುಣವಾಚಕ
    ಇಂಪಿಟೈಗೊ ರೋಗ ತಗುಲಿದ.

    impetigo
    ನಾಮವಾಚಕ
    ಇಂಪಿಟೈಗೋ; ಮುಖ್ಯವಾಗಿ ಮುಖದ ಮೇಲೆ ಗುಳ್ಳೆಗಳೇಳುವ, ತೀವ್ರ ಸ್ವರೂಪದ ಚರ್ಮದ ಅಂಟುರೋಗ.

    impetrate
    ಸಕರ್ಮಕ ಕ್ರಿಯಾಪದ
  • (ದೇವತಾಶಾಸ್ತ್ರ) ಬೇಡಿ ಪಡೆ; ಪ್ರಾರ್ಥನೆಯಿಂದ ಪಡೆ.
  • (ವಿರಳ ಪ್ರಯೋಗ) ಬೇಡು; ಕೋರು; ಪ್ರಾರ್ಥಿಸು.

  • impetration
    ನಾಮವಾಚಕ
  • (ದೇವತಾಶಾಸ್ತ್ರ) ಪ್ರಾರ್ಥಿಸಿ ಪಡೆಯುವುದು.
  • (ವಿರಳ ಪ್ರಯೋಗ) ಪ್ರಾರ್ಥನೆ; ಕೋರಿಕೆ.


  • logo