logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electrify
ಸಕರ್ಮಕ ಕ್ರಿಯಾಪದ
ವಿದ್ಯುದೀಕರಿಸು:
  • ಯಾವುದೇ ಕಾಯದ ಮೇಲೆ ವಿದ್ಯುತ್ತನ್ನುಂಟುಮಾಡು; ಯಾವುದೇ ಕಾಯಕ್ಕೆ ವಿದ್ಯುದಾವೇಶ ಮಾಡು.
  • (ವ್ಯಕ್ತಿಗೆ) ವಿದ್ಯುದಾಘಾತ ಉಂಟು ಮಾಡು.
  • (ರೈಲು, ಕಾರ್ಖಾನೆ, ಯಂತ್ರ, ಮೊದಲಾದವುಗಳ ವಿಷಯದಲ್ಲಿ) ವಿದ್ಯುಚ್ಛಕ್ತಿಯಿಂದ ನಡೆಯುವಂತೆ ಮಾಡು.
  • (ರೂಪಕವಾಗಿ) (ವಿದ್ಯುತ್ತಿನಿಂದಲೋ ಎಂಬಂತೆ) ಉದ್ರೇಕಿಸು; ಆವೇಗ ಉಂಟುಮಾಡು; ಪುಲಕಿಸು.
  • (ಪ್ರದೇಶ, ಮನೆ, ಮೊದಲಾದವುಗಳಿಗೆ) ವಿದ್ಯುಚ್ಛಕ್ತಿ ಒದಗಿಸು.

  • electro
    ನಾಮವಾಚಕ

    electro
    ಸಕರ್ಮಕ ಕ್ರಿಯಾಪದ

    electro-
    ಸಮಾಸ ಪೂರ್ವಪದ
    ವಿದ್ಯುತ್ತಿನ, ವಿದ್ಯುತ್ತಿಗೆ ಸಂಬಂಧಿಸಿದ, ವಿದ್ಯುತ್ತಿನಿಂದಾದ, ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ: electrobiology.

    electro-osmosis
    ನಾಮವಾಚಕ
    (ರಸಾಯನವಿಜ್ಞಾನ) ವಿದ್ಯುತ್ಪರಾಸರಣ; ಅತಿಸೂಕ್ಷ್ಮ ರಂಧ್ರಗಳಿರುವ ಒಂದು ಪೊರೆಯ ಆಚೆ ಮತ್ತು ಈಚೆ ಇಟ್ಟಿರುವ ಎರಡು ವಿದ್ಯುದ್ವಾರಗಳ ಮೇಲೆ ವಿದ್ಯುಚ್ಚಾಲಕ ಬಲವನ್ನು ಪ್ರಯೋಗಿಸಿದಾಗ ಆ ಪೊರೆಯ ಮೂಲಕ ನೀರು ಯಾ ದ್ರವ ಹರಿಯುವುದು.

    electro-positive
    ಗುಣವಾಚಕ
  • (ಭೌತವಿಜ್ಞಾನ) ಧನವಿದ್ಯುತ್‍; ಧನವಿದ್ಯುದಾವೇಶವಿರುವ.
  • (ರಸಾಯನವಿಜ್ಞಾನ) ವಿದ್ಯುದ್ಧನ(ದ); ಇಲೆಕ್ಟ್ರಾನುಗಳನ್ನು ಕಳೆದುಕೊಳ್ಳುವ ಪ್ರತ್ತಿ ಇರುವ.

  • electro-shock
    ನಾಮವಾಚಕ
    = electric shock.

    electro-shock treatment
    ನಾಮವಾಚಕ
    ವಿದ್ಯುದಾಘಾತ ಚಿಕಿತ್ಸೆ; ವಿದ್ಯುದಾಘಾತಗಳ ಮೂಲಕ, ಮುಖ್ಯವಾಗಿ ಮಾನಸಿಕ ರೋಗಗಳಿಗೆ ನೀಡುವ ವೈದ್ಯಕೀಯ ಚಿಕಿತ್ಸೆ.

    electro-tonic
    ಗುಣವಾಚಕ
    (ಶರೀರ ವಿಜ್ಞಾನ) ವಿದ್ಯುನ್ನಾಡೀಸ್ಥಿತಿಯ; ವಿದ್ಯುತ್ಪ್ರವಾಹದ ಪರಿಣಾಮವಾಗಿ ನರದ ಸಂವೇದಕತೆಯಲ್ಲಾಗುವ ಬದಲಾವಣೆಯ.

    electrobiology
    ನಾಮವಾಚಕ
    ವಿದ್ಯುಜ್ಜೀವಶಾಸ್ತ್ರ; ಜೀವಿಗಳಲ್ಲಿ ನಡೆಯುವ ವಿದ್ಯುದ್ವ್ಯಾಪಾರಗಳನ್ನು ಕುರಿತ ಶಾಸ್ತ್ರ.


    logo