logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cankered
ಗುಣವಾಚಕ
  • (ಗಿಡಗಳ ವಿಷಯದಲ್ಲಿ) ಹುಳುತಿಂದ; ಹುಳಿತ; ಹುಳುಕಾದ.
  • ಹುಣ್ಣಾದ; ಹುಣ್ಣು ಎದ್ದ.
  • (ನೈತಿಕವಾಗಿ) ಕೆಟ್ಟುಹೋದ; ಭ್ರಷ್ಟ.
  • (ರೂಪಕವಾಗಿ) ಸೇಡಿನ; ಜಿದ್ದಿನ; ವಿಷಕಾರುವ; ಮತ್ಸರಗ್ರಸ್ತ; ವೈರ, ದ್ವೇಷ–ತುಂಬಿದ.

  • cankerous
    ಗುಣವಾಚಕ
    (ಗಿಡಗಳ ವಿಷಯದಲ್ಲಿ) ಹುಳುತುಂಬಿದ; ಹುಳುಮಯ; ಕ್ಯಾಂಕರ್‍ ರೋಗ ತಗುಲಿದ.

    cankerworm
    ನಾಮವಾಚಕ
    =1canker(4).

    canna
    ನಾಮವಾಚಕ
    ಕ್ಯಾನ; ಚರೆಗುಂಡಿನ ಗಿಡ; ಉಜ್ಜ್ವಲ ಹಳದಿ, ಕೆಂಪು ಯಾ ಕಿತ್ತಳೆ ಬಣ್ಣದ ಸುಂದರವಾದ ಹೂಗಳು ಹಾಗೂ ಆಲಂಕಾರಿಕವಾದ ದೊಡ್ಡ ದೊಡ್ಡ ಎಲೆಗಳು ಬಿಡುವ ಗಿಡಗಳ ಕುಲ ಯಾ ಆ ಕುಲದ ಗಿಡ.

    cannabis
    ನಾಮವಾಚಕ
  • ಕ್ಯಾನಬಿಸ್‍; ಭಂಗಿ, ಗಾಂಜಾ ಮೊದಲಾದವನ್ನೊಳಗೊಂಡ ಗಿಡಗಳ ಕುಲ.
  • ಗಾಂಜಾ, ಭಂಗಿ–ಗಿಡ.
  • ಭಂಗಿ; ಗಾಂಜಾ; ಗಾಂಜಾ ಗಿಡದಿಂದ ತಯಾರಿಸಿದ, ಅಮಲೇರಿಸುವ ಮತ್ತು ಭ್ರಮೆ ಹುಟ್ಟಿಸುವ ಪದಾರ್ಥ.

  • cannabis resin
    ನಾಮವಾಚಕ
    ಕ್ಯಾನಬಿಸ್‍ ರಾಳ; ಗಾಂಜಾ ಗಿಡಗಳಿಂದ, ಮುಖ್ಯವಾಗಿ ಹೂ ಬಿಡುವ ತುದಿಗಳಿಂದ, ಒಸರುವ ಅಂಟುಪದಾರ್ಥ.

    canned
    ಗುಣವಾಚಕ
  • ಡಬ್ಬ ಯಾ ಜಾಡಿಯಲ್ಲಿ ಹಾಕಿಟ್ಟು ರಕ್ಷಿಸಿದ.
  • ಮೊದಲೇ ಸಿದ್ಧಗೊಳಿಸಿದ; ಪೂರ್ವಸಿದ್ಧ.
  • (ಅಶಿಷ್ಟ) ಕುಡಿದ; ಅಮಲೇರಿದ.
  • (ಸಂಗೀತ) (ರೇಡಿಯೋ ಮೊದಲಾದವುಗಳಲ್ಲಿ) ಪ್ರಸಾರಕ್ಕಾಗಿ ಧ್ವನಿಮುದ್ರಿತವಾದ.

  • canned music
    ನಾಮವಾಚಕ
    (ಅಶಿಷ್ಟ) ಧ್ವನಿಮುದ್ರಿತ ಗಾಯನ; ರೇಡಿಯೋ, ಟೆಲೆವಿಷನ್‍ಗಳಲ್ಲಿ ಪ್ರಸಾರ ಮಾಡುವುದಕ್ಕಾಗಿ ಮೊದಲೇ ರೆಕಾರ್ಡ್‍ ಮಾಡಿಟ್ಟುಕೊಂಡ ಸಂಗೀತ.

    cannel
    ನಾಮವಾಚಕ
    ಕ್ಯಾನಲ್‍ (ಕಲ್ಲಿದ್ದಲು); ಅನಿಲ ತಯಾರಿಕೆಗಾಗಿ ಬಳಸುವ, ಉಜ್ಜ್ವಲವಾಗಿ ಜ್ವಲಿಸುವ, ಬಿಟುಮಿನ್‍ ಕಲ್ಲಿದ್ದಲು.

    cannel coal
    ನಾಮವಾಚಕ
    =cannel.


    logo