logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

undeceive
ಸಕರ್ಮಕ ಕ್ರಿಯಾಪದ
(ಒಬ್ಬನ) ತಪು ತಿಳಿವಳಿಕೆಯನ್ನು ಕಳೆ; ಭ್ರಾಂತಿಯನ್ನು ಕಳೆ; ಮೋಸದಿಂದ ಪಾರಾಗಿಸು.

undecided
ಗುಣವಾಚಕ
  • ನಿರ್ಧಾರವಾಗಿಲ್ಲದ; ತೀರ್ಮಾನವಾಗಿಲ್ಲದ; ಅನಿರ್ಣೀತ: the point is still undecided ಈ ವಿಷಯ ಇನ್ನೂ ತೀರ್ಮಾನವಾಗಿಲ್ಲ.
  • ಅನಿಶ್ಚಿತ; ಹಿಂದುಮುಂದು ನೋಡುವ; ತೂಗಾಡುವ, ಡೋಲಾಯಮಾನ, ಸಂದಿಗ್ಧ – ಮನಸ್ಸಿನ: he stood undecided ಅವನು ಹಿಂದುಮುಂದು ನೋಡುತ್ತ ನಿಂತುಬಿಟ್ಟ.

  • undecidedly
    ಕ್ರಿಯಾವಿಶೇಷಣ
  • ಅನಿರ್ಧಾರಿತವಾಗಿ; ತೀರ್ಮಾನವಾಗದೆ; ಅನಿರ್ಣೀತವಾಗಿ.
  • ನಿಶ್ಚಯವಿಲ್ಲದೆ; ಹಿಂದುಮುಂದು ನೋಡುತ್ತ; ತೂಗಾಡುತ್ತ; ಡೋಲಾಯಮಾನ ಮನಸ್ಕನಾಗಿ.

  • undecipherable
    ಗುಣವಾಚಕ
    (ಗೋಪ್ಯಲಿಪಿ, ಕಾಕಲಿಪಿ, ಅರ್ಥವಾಗದ ಬರವಣಿಗೆ, ಮೊದಲಾದವುಗಳ ವಿಷಯದಲ್ಲಿ) ತೊಡಕು ಬಿಡಿಸಲಾಗದ; ಓದಲು ಕಷ್ಟವಾದ; ಗೊತ್ತಾಗದ; ಸಾಮಾನ್ಯ ಲಿಪಿಗೆ ತಿರುಗಿಸಲಾಗದ.

    undeclared
    ಗುಣವಾಚಕ
    ತಿಳಿಯಪಡಿಸದ; ಪ್ರಕಟಿಸದ; ಬಹಿರಂಗವಾಗಿ ಘೋಷಿಸದ; ಅಪ್ರಕಟಿತ; ಅಘೋಷಿತ.

    undefeated
    ಗುಣವಾಚಕ
    ಸೋತಿಲ್ಲದ; ಅಪರಾಜಿತ; ಪರಾಭವಗೊಂಡಿಲ್ಲದ.

    undefended
    ಗುಣವಾಚಕ
  • ಅರಕ್ಷಿತ; ಕಾಪಿಲ್ಲದ.
  • (ಮುಖ್ಯವಾಗಿ ದಾವೆಯ ವಿಷಯದಲ್ಲಿ) ಪ್ರತಿವಾದ ಹೂಡದೆ ಇರುವ; ಪ್ರತಿವಾದಿಸದ.

  • undefiled
    ಗುಣವಾಚಕ
    ಮಲಿನ ಮಾಡದ; ಅಶುದ್ಧವಾಗದಿರುವ; ಮೈಲಿಗೆ ಮಾಡದಿರುವ; ಅಪವಿತ್ರಗೊಳಿಸದ; ಕಲುಷಿತವಾಗದ; ಹೊಲೆಗೆಡದ.

    undefinable
    ಗುಣವಾಚಕ
  • ಲಕ್ಷಣ ನಿರೂಪಿಸಲಾಗದ.
  • (ಎಲ್ಲೆ, ಮೇರೆ, ಮೊದಲಾದವನ್ನು) ಅನಿರ್ಣೇಯ; ಗೊತ್ತುಮಾಡಲಾಗದ; ನಿರ್ಣಯಿಸಲಾಗದ.

  • undefinably
    ಕ್ರಿಯಾವಿಶೇಷಣ
  • ಲಕ್ಷಣ ನಿರೂಪಿಸಲಾಗದೆ.
  • (ಎಲ್ಲೆ ಮೊದಲಾದವನ್ನು) ಗೊತ್ತು ಮಾಡಲಾಗದೆ; ನಿರ್ಣಯಿಸಲಾಗದೆ.


  • logo