logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tautomer
ನಾಮವಾಚಕ
(ರಸಾಯನವಿಜ್ಞಾನ) ಟಾಟೊಮರ್‍; ಸುಭವಾಗಿ ಪರಸ್ಪರ ಅಂತರ ಪರಿವರ್ತನಗೊಳ್ಳುವ ಎರಡು ಸಮಾಂಗಿಗಳುಳ್ಳ ಸಂಯುಕ್ತದಲ್ಲಿಯ ಒಂದು ಸಮಾಂಗಿ.

tautomeric
ಗುಣವಾಚಕ
(ರಸಾಯನವಿಜ್ಞಾನ) ಟಾಟೊಮರಿಕ:
  • (ಸಂಯುಕ್ತ ಒಂದರ ವಿಷಯದಲ್ಲಿ) ಸುಭವಾಗಿ ಪರಸ್ಪರ ಅಂತರಪರಿವರ್ತನಗೊಳ್ಳುವ ಸಮಾಂಗಿಗಳುಳ್ಳ.
  • (ಟಾಟೊಮರ್‍ ಒಂದರ ವಿಷಯದಲ್ಲಿ) ಸುಭವಾಗಿ ಅಂತರಪರಿವರ್ತನೆಗೊಳ್ಳುವ.

  • tautomerism
    ನಾಮವಾಚಕ
    (ರಸಾಯನವಿಜ್ಞಾನ) ಟಾಟಾಮರಿಸಂ; ಎರಡು ಸಮಾಂಗಿಗಳು ಸುಭವಾಗಿ ಅಂತರಪರಿವರ್ತನೆಗೊಳ್ಳುವುದು.

    tautophony
    ನಾಮವಾಚಕ
    ಪುನರ್ಧನಿ; ಧ್ವನಿಯೊಂದರ ಪುನರುಚ್ಚಾರ; ಅದೇ ಧ್ವನಿಯನ್ನು ಮತ್ತೆ ಮಾಡುವುದು.

    tavern
    ನಾಮವಾಚಕ
    (ಸಾಹಿತ್ಯಕ) ಪ್ರವಾಸಿಗೃಹ; ಹೋಟೆಲು.

    taverna
    ನಾಮವಾಚಕ
    ಗ್ರೀಸಿನ (ಊಟದ) ಹೋಟೆಲು, ಖಾನಾವಳಿ.

    TAVR
    ಸಂಕ್ಷಿಪ್ತ
    Territorial and Army Volunteer Reserve.

    taw
    ಸಕರ್ಮಕ ಕ್ರಿಯಾಪದ
    (ತೊಗಟೆ ಕಷಾಯದಲ್ಲಿ ಅದ್ದದೆ, ಪಟಿಕ ಮತ್ತು ಉಪ್ಪಿನ ದ್ರಾವಣದಲ್ಲಿ ನೆನಸಿ) ಚರ್ಮ ಹದಮಾಡು.

    taw
    ನಾಮವಾಚಕ
  • (ಗೆರೆಗೆರೆಯಾದ) ಗೋಲಿ.
  • (ಗೆರೆಗೆರೆ ಗೋಲಿಗಳಿಂದ ಆಡುವ) ಗೋಲಿಯಾಟ.
  • ಗೋಲಿಯಾಟದಲ್ಲಿ ಗೋಲಿ ಎಸೆಯುವ ಎಲ್ಲೆ ಗೆರೆ.

  • tawdrily
    ಕ್ರಿಯಾವಿಶೇಷಣ
    ಅಗ್ಗದ ಅಲಂಕಾರದಿಂದ ಕೂಡಿ; ಅತ್ಯಾಡಂಬರದಿಂದ ಸಿಂಗರಿಸಿಕೊಂಡು.


    logo