logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oil-slick
ನಾಮವಾಚಕ
ತೈಲಪಟಲ; ಎಣ್ಣೆ ಹರವು; ಮುಖ್ಯವಾಗಿ ಸಮುದ್ರದ ಮೇಲೆ ಸೋರಿ ನುಣುಪಾಗಿ ಹರಡಿರುವ ಎಣ್ಣೆಯ ಪೊರೆ.

oil-spring
ನಾಮವಾಚಕ
ಎಣ್ಣೆ–ಚಿಲುಮೆ, ಬುಗ್ಗೆ; ಪೆಟ್ರೋಲಿಯಮ್‍ ದೊರಕುವ ಊಟೆ.

oil-stove
ನಾಮವಾಚಕ
ಎಣ್ಣೆ ಒಲೆ; ಎಣ್ಣೆಯನ್ನು ಇಂಧನವಾಗಿ ಬಳಸುವ ಒಲೆ.

oil-tanker
ನಾಮವಾಚಕ
ತೈಲ (ವಾಹಕ) ನೌಕೆ; ಎಣ್ಣೆ ಹಡಗು; ಪೆಟ್ರೋಲಿಯಮ್ಮನ್ನು ಸಾಗಿಸಲು ಬಳಸುವ, ದೊಡ್ಡ ತೊಟ್ಟಿಗಳಿರುವ ಜಹಜು .

oil-tree
ನಾಮವಾಚಕ
ಎಣ್ಣೆಮರ; ಎಣ್ಣೆಯನ್ನು ನೀಡುವ ಯಾವುದೇ ಮರ.

oilcake
ನಾಮವಾಚಕ
(ಎಣ್ಣೆ ಬೀಜಗಳಿಂದ ಗಾಣದಲ್ಲಿ ಎಣ್ಣೆ ತೆಗೆದ ಮೇಲೆ ಉಳಿಯುವ, ದನಗಳಿಗೆ ಮೇವಾಗಿ ಇಲ್ಲವೆ ಗೊಬ್ಬರವಾಗಿ ಬಳಸುವ) ಹಿಂಡಿ.

oilcan
ನಾಮವಾಚಕ
ಎಣ್ಣೆ–ಡಬ್ಬಿ, ಬುಡ್ಡಿ, ಡಬ್ಬ; ಎಣ್ಣೆ ತುಂಬಿಡಲು ಉಪಯೋಗಿಸುವ, ಮುಖ್ಯವಾಗಿ ಯಂತ್ರಗಳಿಗೆ ಎಣ್ಣೆ ಹಾಕಲು ಬಳಸುವ, ಉದ್ದನೆಯ ಮೂತಿಯುಳ್ಳ ಬುಡ್ಡಿ.

oilcloth
ನಾಮವಾಚಕ
  • ಮೇಣಗಪಟ; ಎಣ್ಣೆಗಪಟ; ಎಣ್ಣೆಯಿಂದ ಸಂಸ್ಕರಿಸಿ ನೀರಿಳಿಯದಂತೆ ಮಾಡಿರುವ ಹತ್ತಿ ಬಟ್ಟೆ.
  • = oilskin.
  • ಎಣ್ಣೆಗಪಟ; ಅಗಸೆ ಎಣ್ಣೆ ಮೊದಲಾದವನ್ನು ಬಳಿದು, ಮೇಜಿನ ಯಾ ನೆಲದ ಮೇಲೆ ಹಾಸಲು ಬಳಸುವ ಕ್ಯಾನ್‍ವಾಸ್‍ ಬಟ್ಟೆ.

  • oiled
    ಗುಣವಾಚಕ ಪದಗುಚ್ಛ
  • ಎಣ್ಣೆ (ಹೆರೆ) ಹಾಕಿದ.
  • ಎಣ್ಣೆಯಿಂದ ಸಂಸ್ಕರಿಸಿದ.
  • (ಅಶಿಷ್ಟ) ಕುಡಿದ; ಪಾನಮತ್ತ: thoroughly oiled and very talkative ಚೆನ್ನಾಗಿ ಕುಡಿದು ಹರಟುವ.

  • oiled silk
    ನಾಮವಾಚಕ
    ಎಣ್ಣೆ ರೇಷ್ಮೆ; ನೀರು ತೂರದಂತೆ ಎಣ್ಣೆ ಹಾಕಿ ತಯಾರಿಸಿದ ರೇಷ್ಮೆ ಬಟ್ಟೆ.


    logo