logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

manganese
ನಾಮವಾಚಕ
(ರಸಾಯನವಿಜ್ಞಾನ) ಮ್ಯಾಂಗನೀಸ್‍:
  • ಪರಮಾಣು ಸಂಖ್ಯೆ 25, ಪರಮಾಣು ತೂಕ 54.93 ಉಳ್ಳ, ಕಬ್ಬಿಣವನ್ನು ಹೋಲುವ, ಆದರೆ ಕಾಂತೀಯವಲ್ಲದ, ಭಿದುರವಾದ ಲೋಹಧಾತು.
  • ಖನಿಜ ರೂಪದಲ್ಲಿ ಸಿಕ್ಕುವ ಮ್ಯಾಂಗನೀಸ್‍ ಆಕ್ಸೈಡ್‍, ಮುಖ್ಯವಾಗಿ ಪೈರೋಲು ಸೈಟ್‍.

  • manganese oxide
    ನಾಮವಾಚಕ
    (ಗಾಜಿನ ತಯಾರಿಕೆಯಲ್ಲಿ ಬಳಸುವ, ಕಪ್ಪಾದ) ಮ್ಯಾಂಗನೀಸ್‍ ಆಕ್ಸೈಡ್‍.

    manganic
    ಗುಣವಾಚಕ
    ಮ್ಯಾಂಗ್ಯಾನಿಕ್‍; ಮ್ಯಾಂಗನೀಸ್‍ ಸಂಯುಕ್ತಗಳಲ್ಲಿ ತ್ರಿವೇಲೆನ್ಸೀಯ ಮ್ಯಾಂಗನೀಸ್‍ ಉಳ್ಳ.

    manganic acid
    ನಾಮವಾಚಕ
    ಮ್ಯಾಂಗನಿಕ್‍ ಆಮ್ಲ, ${\rm H}_2{\rm MnO}_4$.

    manganous
    ಗುಣವಾಚಕ
    ಮ್ಯಾಂಗನಸ್‍; (ಮ್ಯಾಂಗನೀಸ್‍ ಸಂಯುಕ್ತಗಳ ವಿಷಯದಲ್ಲಿ) ದ್ವಿವೇಲೆನ್ಸೀಯ ಮ್ಯಾಂಗನೀಸ್‍ ಉಳ್ಳ.

    mange
    ನಾಮವಾಚಕ
  • ಮೇಂಜ್‍; ಅಡಪು; ಜೇಡನ ಬಳಗದ ಒಂದು ಪರೋಪಜೀವಿಯಿಂದ ಕೂದಲು ಯಾ ತುಪ್ಪಟ ಉಳ್ಳ ಪ್ರಾಣಿಗಳಿಗೆ, ಕೆಲವು ವೇಳೆ ಮನುಷ್ಯರಿಗೂ ತಗಲುವ ಒಂದು ಚರ್ಮರೋಗ, ಚರ್ಮವ್ಯಾಧಿ.
  • (ಸಡಿಲವಾಗಿ) ಚರ್ಮದ ಕೊಳಕು ಸ್ಥಿತಿ.

  • mange-tout
    ನಾಮವಾಚಕ
    = sugar-pea.

    mangel
    ನಾಮವಾಚಕ
    = mangel-wurzel.

    mangel-wurzel
    ನಾಮವಾಚಕ
    ಮ್ಯಾಂಗಲ್‍ವಸಲ್‍; (ದನಗಳ ಮೇವಿಗಾಗಿ ಹಾಕುವ) ದೊಡ್ಡ ಜಾತಿಯ ಬೀಟ್‍ಗೆಡ್ಡೆ.

    manger
    ನಾಮವಾಚಕ ಪದಗುಚ್ಛ
    ಗೋದಣ; ಗೊಂತು; ಚರಣಿ; ಗೋದಲೆ; ಮೇವಿನ ತೊಟ್ಟಿ; (ಲಾಯದಲ್ಲಿ) ಕುದುರೆಗಳಿಗೆ, (ಕೊಟ್ಟಿಗೆಯಲ್ಲಿ) ದನಗಳಿಗೆ, ಮೇವು ಹಾಕುವ ಪೆಟ್ಟಿಗೆ ಯಾ ತೊಟ್ಟಿ. $^1$dog in the manger.


    logo