logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impersonally
ಕ್ರಿಯಾವಿಶೇಷಣ
  • ಅವೈಯಕ್ತಿಕವಾಗಿ; ವ್ಯಕ್ತಿಗೆ ಅನ್ವಯಿಸದೆ.
  • ವ್ಯಕ್ತಿಸ್ವರೂಪವಿಲ್ಲದೆ; ನಿರಾಕಾರವಾಗಿ.

  • impersonate
    ಸಕರ್ಮಕ ಕ್ರಿಯಾಪದ
  • ವ್ಯಕ್ತೀಕರಿಸು; ಮೂರ್ತೀಕರಿಸು; ಮನುಷ್ಯರೂಪ ಕೊಡು; ಮನುಷ್ಯಾಕಾರದಲ್ಲಿ – ನಿರೂಪಿಸು, ಭಾವಿಸು, ಪರಿಗಣಿಸು.
  • (ಯಾವುದೇ ಪಾತ್ರವನ್ನು) ವಹಿಸು; ನಿರ್ವಹಿಸು; ಅಭಿನಯಿಸು; ನಟಿಸು; ಅಭಿನಯ ಮಾಡು.
  • (ಮೋಸಗೊಳಿಸಲು ಯಾ ವಿನೋದಗೊಳಿಸಲು) ಮತ್ತೊಬ್ಬನಂತೆ, ಇನ್ನೊಬ್ಬನಂತೆ – ನಟಿಸು, ವೇಷ ಹಾಕು.

  • impersonation
    ನಾಮವಾಚಕ
  • ವ್ಯಕ್ತೀಕರಣ; ಮೂರ್ತೀಕರಣ; ಮನುಷ್ಯರೂಪದಲ್ಲಿ ತೋರಿಸುವುದು.
  • ಮೂರ್ತೀಕೃತವಾಗಿರುವುದು; ಮನುಷ್ಯರೂಪ ಪಡೆದಿರುವುದು.
  • ಪಾತ್ರಾಭಿನಯ; ಪಾತ್ರ ನಿರ್ವಹಣೆ.
  • ಸುಳ್ಳು ನಟನೆ; (ಕಪಟ) ವೇಷಧಾರಣೆ; ಮೋಸಕ್ಕಾಗಿ ಬೇರೊಬ್ಬನ ಸೋಗು ಹಾಕುವುದು.

  • impersonative
    ಗುಣವಾಚಕ
  • ಮೂರ್ತೀಕರಿಸುವ; ವ್ಯಕ್ತೀಕರಿಸುವ; ದೇಹರೂಪದಲ್ಲಿ ತೋರಿಸುವ.
  • ಪಾತ್ರಾಭಿನಯದ; ಪಾತ್ರ ನಿರ್ವಹಿಸುವ; ಪಾತ್ರಾಭಿನಯ ರೂಪದ: impersonative talent ಪಾತ್ರಾಭಿನಯ ಕೌಶಲ.
  • (ಕಪಟ) ವೇಷಧಾರಣೆಯ; ಸುಳ್ಳು ನಟನೆಯ.

  • impersonator
    ನಾಮವಾಚಕ
  • ಪಾತ್ರಧಾರಿ; ವೇಷಧಾರಿ; ನಟ.
  • ಕಪಟವೇಷಧಾರಿ; ಸುಳ್ಳು ನಟಿಸುವವನು; (ತಾನೇ ಇನ್ನೊಬ್ಬನು ಎನ್ನುವ) ಸೋಗುಗಾರ; ಸೋಗಾಳಿ.

  • impersonify
    ಸಕರ್ಮಕ ಕ್ರಿಯಾಪದ
    (ಪ್ರಾಚೀನ ಪ್ರಯೋಗ) = personify.

    impertinence
    ನಾಮವಾಚಕ
  • ಅಸಂಬದ್ಧತೆ; ಅಸಂಗತತೆ; ವಿಷಯಕ್ಕೆ ಸಂಬಂಧಪಡದ್ದು.
  • ಅಧಿಕಪ್ರಸಂಗಿತನ; ತಲೆಹರಟೆ.
  • ಅಪ್ರಸ್ತುತತೆ; ಅಪ್ರಸಕ್ತವಾದದ್ದು; ಸಂದರ್ಭಕ್ಕೆ ಸಂಬಂಧಿಸದಿರುವುದು.
  • ಅವಿನೀತತೆ; ಸೊಕ್ಕು; ದುರಹಂಕಾರ; ಉದ್ಧಟತನ; ಧಾರ್ಷ್ಟ್ಯ; ವಿನಯವಿಲ್ಲದ ನಡವಳಿಕೆ.

  • impertinent
    ಗುಣವಾಚಕ
  • (ಮುಖ್ಯವಾಗಿ ನ್ಯಾಯಶಾಸ್ತ್ರ) ಅಸಂಬದ್ಧ; ಅಸಂಗತ; ವಿಷಯಕ್ಕೆ ಸಂಬಂಧಪಡದ.
  • ತಲೆಹರಟೆಯ; ಅಧಿಕಪ್ರಸಂಗಿತನದ; ತನಗೆ ಸಂಬಂಧಿಸದ ವಿಷಯದಲ್ಲಿ ತಲೆಹಾಕುವ.
  • ಅಪ್ರಸ್ತುತ; ಅಪ್ರಸಕ್ತ; ಸಂದರ್ಭಕ್ಕೆ ತಗದ.
  • ಅವಿನೀತ; ಸೊಕ್ಕಿನ; ಉದ್ಧತ; ಧೃಷ್ಟ; ದುರಹಂಕಾರದ; ವಿನಯವಿಲ್ಲದ.

  • impertinently
    ಕ್ರಿಯಾವಿಶೇಷಣ
  • ಅಸಂಬದ್ಧವಾಗಿ; ಅಸಂಗತವಾಗಿ.
  • ಅಧಿಕ ಪ್ರಸಂಗಿತನದಿಂದ; ತಲೆಹರಟೆಯಿಂದ.
  • ಅಪ್ರಸ್ತುತವಾಗಿ; ಅಪ್ರಸಕ್ತವಾಗಿ.
  • ಸೊಕ್ಕಿನಿಂದ; ದುರಹಂಕಾರದಿಂದ; ವಿನಯವಿಲ್ಲದೆ.

  • imperturbability
    ನಾಮವಾಚಕ
    ಶಾಂತತೆ; ನಿರುದ್ವಿಗ್ನತೆ; ಅನುದ್ವೇಗತೆ; ಪ್ರಕ್ಷುಬ್ಧಗೊಳ್ಳದಿರುವಿಕೆ.


    logo