logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electric storm
ನಾಮವಾಚಕ
= electrical storm.

electric torch
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ವಿದ್ಯುತ್‍ ಕೈದೀಪ; ಒಣಬ್ಯಾಟರಿಗಳಿಂದ ಕೆಲಸಮಾಡುವ, ಕೈಯಲ್ಲಿ ಒಯ್ಯಬಹುದಾದ ವಿದ್ಯುದ್ದೀಪ, ಟಾರ್ಚು.

electrical
ಗುಣವಾಚಕ
  • ವಿದ್ಯುತ್ತಿನ; ವಿದ್ಯುತ್ತಿಗೆ ಸಂಬಂಧಿಸಿದ.
  • ವಿದ್ಯುತ್ತಿನ ಲಕ್ಷಣದ, ಸ್ವರೂಪವುಳ್ಳ.
  • ವಿದ್ಯುತ್ತಿನಂಥ; ಹಠಾತ್ತಾಗಿ ಉದ್ರೇಕಗೊಳಿಸುವ: the effect was electrical ಪರಿಣಾಮ ವಿದ್ಯುತ್ತಿನಂತೆ ಇತ್ತು.

  • electrical engineer
    ನಾಮವಾಚಕ
    ವಿದ್ಯುದ್ಯಂತ್ರ ಶಿಲ್ಪಿ; ವಿದ್ಯುತ್‍ ಎಂಜಿನಿಯರು; ವಿದ್ಯುತ್ಸಂಪರ್ಕ ಸಾಧನಗಳು, ವಿದ್ಯುಚ್ಛಕ್ತಿಯ ಉತ್ಪಾದನೆ, ಹಂಚಿಕೆ, ವಿದ್ಯುದ್ಯಂತ್ರಗಳು, ಮೊದಲಾದವನ್ನು ಕುರಿತ ಆನ್ವಯಿಕ ವಿದ್ಯುತ್‍ ಶಾಸ್ತ್ರವನ್ನು ಅಭ್ಯಾಸಮಾಡಿದವ.

    electrical engineering
    ನಾಮವಾಚಕ
    ವಿದ್ಯುದ್ಯಂತ್ರ ಶಿಲ್ಪ(ಶಾಸ್ತ್ರ); ವಿದ್ಯುತ್‍ ಎಂಜಿನಿಯರಿಂಗ್‍; ವಿದ್ಯುತ್ಸಂಪರ್ಕ ಸಾಧನಗಳು, ವಿದ್ಯುಚ್ಛಕ್ತಿಯ ಉತ್ಪಾದನೆ, ಹಂಚಿಕೆ, ವಿದ್ಯುದ್ಯಂತ್ರಗಳು, ಮೊದಲಾದವನ್ನು ಕುರಿತ ಆನ್ವಯಿಕ ಶಿಲ್ಪಶಾಸ್ತ್ರದ ಒಂದು ಶಾಖೆ.

    electrical storm
    ನಾಮವಾಚಕ
    ವಿದ್ಯುನ್ಮಾರುತ; ವಾತಾವರಣದ ವಿದ್ಯುತ್‍ ಸ್ಥಿತಿ ಏಕಾಏಕಿ ಕ್ಷುಬ್ಧವಾಗಿ, ಬಿರುಸಾಗಿ ಗುಡುಗು ಮಿಂಚುಗಳಿಂದ ಕೂಡಿದ ಮಳೆಯೊಡನೆ ಏಳುವ ಬಿರುಗಾಳಿ.

    electrically
    ಕ್ರಿಯಾವಿಶೇಷಣ
  • ವಿದ್ಯುತ್ತಿನಿಂದ.
  • ವಿದ್ಯುತ್ತಿನ ರೀತಿಯಲ್ಲಿ; ವಿದ್ಯುತ್ತಿನಂತೆ.

  • electrician
    ನಾಮವಾಚಕ
    ವಿದ್ಯುತ್ಕಾರ್ಮಿಕ; ವಿದ್ಯುತ್ಕೆಲಸಗಾರ; ವಿದ್ಯುತ್ತಿಗೆ ಸಂಬಂಧಿಸಿದ ಉಪಕರಣಗಳನ್ನು ಸ್ಥಾಪಿಸುವ, ದುರಸ್ತು ಮಾಡುವ ಕೆಲಸಗಾರ.

    electricity
    ನಾಮವಾಚಕ ಪದಗುಚ್ಛ
  • ವಿದ್ಯುತ್ತು; ಯಾವುದೇ ವಸ್ತುವ್ಯವಸ್ಥೆಯಲ್ಲಿ ಇಲೆಕ್ಟ್ರಾನುಗಳ ಹೆಚ್ಚಳ ಯಾ ಕೊರತೆಯ ಕಾರಣ, ಕ್ರಮವಾಗಿ ಋಣ ಮತ್ತು ಧನ ಎಂಬ ಎರಡು ಬಗೆಯಲ್ಲಿ ಮೈದೋರುವ ಒಂದು ಬಗೆಯ ಭೌತ ಅಸ್ತಿತ್ವ.
  • ವಿದ್ಯುತ್‍ ಪ್ರವಾಹ; ದೀಪ ಮೊದಲಾದವುಗಳಿಗೆ ವಿದ್ಯುತ್‍ ಪೂರೈಕೆ.
  • ವಿದ್ಯುತ್‍ ಶಾಸ್ತ್ರ; ವಿದ್ಯುತ್ತಿಗೆ ಸಂಬಂಧಿಸಿದ ಶಾಸ್ತ್ರ.

  • electrification
    ನಾಮವಾಚಕ
    ವಿದ್ಯುದೀಕರಣ:
  • ಯಾವುದೇ ಕಾಯದ ಮೇಲೆ ವಿದ್ಯುತ್ತನ್ನುಂಟುಮಾಡುವುದು; ಯಾವುದೇ ಕಾಯಕ್ಕೆ ವಿದ್ಯುದಾವೇಶ ಮಾಡುವುದು.
  • (ವ್ಯಕ್ತಿಗೆ) ವಿದ್ಯುದಾಘಾತ ಉಂಟುಮಾಡುವುದು.
  • (ಯಂತ್ರಗಳ ವಿಷಯದಲ್ಲಿ) ವಿದ್ಯುಚ್ಛಕ್ತಿಯಿಂದ ನಡೆಯುವಂತೆ ಮಾಡುವುದು.
  • (ರೂಪಕವಾಗಿ) (ವಿದ್ಯುತ್ತಿನಿಂದಲೋ ಎಂಬಂತೆ) ಉದ್ರೇಕಿಸುವುದು; ಆವೇಗ ಉಂಟುಮಾಡುವುದು; ಪುಲಕಿಸುವುದು.
  • (ಪ್ರದೇಶ, ಮನೆ, ಮೊದಲಾದವಕ್ಕೆ) ವಿದ್ಯುಚ್ಛಕ್ತಿ ಒದಗಿಸುವುದು.


  • logo