logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

canikin
ನಾಮವಾಚಕ
  • ಸಣ್ಣಡಬ್ಬಿ.
  • ಸಣ್ಣಮರದ ಬಕೆಟ್ಟು.
  • ಕುಡಿಯುವ ಲೋಟ ಯಾ ಕಪ್ಪು.

  • canine
    ನಾಮವಾಚಕ
  • ಕ್ಯಾನಿಡೇ ಯಾ ನಾಯಿವಂಶಕ್ಕೆ ಸೇರಿದ ತೋಳ, ನರಿ, ಕಿರುಬ, ಮೊದಲಾದ ಯಾವುದೇ ಪ್ರಾಣಿ.
  • ನಾಯಿ; ಸೊಣಗ; ಶುನಕ; ಶ್ವಾನ.
  • = canine tooth.

  • canine
    ಗುಣವಾಚಕ
    ನಾಯಿಯ; ನಾಯಿ ಸ್ವಭಾವದ; ನಾಯಿಯಂಥ.

    canine tooth
    ನಾಮವಾಚಕ
    ಕೋರೆಹಲ್ಲು; ದವಡೆ ಹಲ್ಲು ಮತ್ತು ಬಾಚಿ ಹಲ್ಲುಗಳ ನಡುವಣ ಚೂಪಾಗಿರುವ ನಾಲ್ಕು ಹಲ್ಲುಗಳಲ್ಲೊಂದು.

    caning
    ನಾಮವಾಚಕ
  • (ಕುರ್ಚಿ ಮೊದಲಾದವುಗಳಿಗೆ) ಬೆತ್ತ ಹೆಣೆಯುವಿಕೆ.
  • ಛಡಿಯೇಟು; ಕೋಲಿನಿಂದ ಹೊಡೆಯುವ ಹೊಡೆತ.

  • canister
    ನಾಮವಾಚಕ
  • ಸಣ್ಣಡಬ್ಬಿ; ಕಿರು ಡಬ್ಬಿ; ಟೀಸೊಪ್ಪು ಮೊದಲಾದವನ್ನು ಇಡುವ, ಸಾಮಾನ್ಯವಾಗಿ ಲೋಹದ ಚಿಕ್ಕ ಡಬ್ಬಿ.
  • (ಬಂದೂಕಿನ ತೋಟಾಗಳ) ಸಣ್ಣ ಗುಂಡುಗಳು.

  • canister shot
    ನಾಮವಾಚಕ
    = canister(2).

    canker
    ನಾಮವಾಚಕ
  • (ರೋಗಶಾಸ್ತ್ರ) (ಮನುಷ್ಯನ) ಬಾಯಿಹುಣ್ಣು; ಬಾಯಿವ್ರಣ.
  • (ಕುದುರೆಯ) ಕಾಲುಹುಣ್ಣು; ಪಾದವ್ರಣ.
  • (ಗಿಡಗಳ ಕಾಂಡದ ಯಾ ತೊಗಟೆಯ ಮೇಲಿನ) ನಿರ್ಜೀವ ಭಾಗ; ಸತ್ತಭಾಗ; ಮೃತ ಭಾಗ.
  • ಕ್ಯಾಂಕರು; (ಗಿಡಗಳ ಕಾಂಡದ ಯಾ ತೊಗಟೆಯ ಭಾಗಗಳನ್ನು) ನಾಶಗೊಳಿಸುವ, ನಿರ್ಜೀವಗೊಳಿಸುವ ಒಂದು ರೋಗ.
  • (ರೂಪಕವಾಗಿ) ನಾಶಕಾರಿ; ಒಳಗಿಂದಲೇ ತಿಂದು ಹಾಕುವ, ಕೆಡಿಸುವ, ಹಾಳುಮಾಡುವ–ಶಕ್ತಿ, ಪ್ರಭಾವ.
  • ಎಲೆ–ಹುಳು, ಕೀಟ; ಮೊಗ್ಗು–ಹುಳು, ಕೀಟ; ಎಲೆಗಳನ್ನೂ ಮೊಗ್ಗುಗಳನ್ನೂ ತಿಂದುಹಾಕುವ ಮರಿಹುಳು.

  • canker
    ಸಕರ್ಮಕ ಕ್ರಿಯಾಪದ
  • (ಮನುಷ್ಯರಿಗೆ) ಬಾಯಿಹುಣ್ಣು ಬರಿಸು.
  • (ಕುದುರೆಗೆ) ಕಾಲುಹುಣ್ಣು ಬರಿಸು.
  • (ಗಿಡಗಳಿಗೆ) ಕ್ಯಾಂಕರು–ಹತ್ತಿಸು, ತಗುಲಿಸು.
  • (ನೈತಿಕವಾಗಿ) ಕೆಡಿಸು; ಭ್ರಷ್ಟಗೊಳಿಸು.

  • canker rash
    ನಾಮವಾಚಕ
    ಗಂಟಲುವ್ರಣ; ಗಂಟಲುಹುಣ್ಣು; ಗಂಟಲಿನಲ್ಲಿ ಹುಣ್ಣಾಗುವ ಒಂದು ವೈರಸ್‍ ಜ್ವರ.


    logo