ಸೊನ್ನೆ, ಶೂನ್ಯ – ಫಲದ, ಪರಿಣಾಮದ, ಫಲಿತದ; (ಆಟ, ರಾಜಕೀಯ ಪರಿಸ್ಥಿತಿ, ಮೊದಲಾದವುಗಳ ವಿಷಯದಲ್ಲಿ) ಒಂದು ಪಕ್ಷ ಗೆದ್ದುದನ್ನು, ಪಡೆದುದನ್ನು ಇನ್ನೊಂದು ಪಕ್ಷ ಕಳೆದುಕೊಳ್ಳುವ ಮೂಲಕ ಉಂಟಾದ ಒಟ್ಟಾರೆ, ಒಟ್ಟಿನ ಮೇಲೆ ಯಾವುದೇ ಫಲ, ಪರಿಣಾಮ, ಬದಲಾವಣೆ ಯಾ ವ್ಯತ್ಯಾಸ ಆಗದಿರುವ.
zeroth
ಗುಣವಾಚಕ
ಸೊನ್ನೆಯ; ಸಂಖ್ಯಾಶ್ರೇಣಿಯಲ್ಲಿ ಒಂದನೆಯದಕ್ಕಿಂತ ಹಿಂದಿನ; ಒಂದು ಸಾಲಿನಲ್ಲಿ ಮೊದಲನೆಯದು ಎಂದು ಭಾವಿಸಿರುವುದಕ್ಕಿಂತ ಹಿಂದಿನ.
zest
ನಾಮವಾಚಕ
ಪದಗುಚ್ಛ
add zest to ರುಚಿಗೊಳಿಸು; ಆಸಕ್ತಿ, ರುಚಿ ಹುಟ್ಟಿಸು; ಉತ್ಸಾಹ ತುಂಬು.
ರುಚಿಕಾರಕ; ರುಚಿ ಹುಟ್ಟಿಸುವ ಸವಿ ಯಾ ಗುಣ.
ಪೂರ್ಣ ಆಸ್ವಾದ ಯಾ ತೀವ್ರಾಸಕ್ತಿ; ಕಟ್ಟೊಲವು.
ರುಚಿ; ಆಸಕ್ತಿ; ಅಭಿನಿವೇಶ.
ಹುರುಪು; ಹುಮ್ಮಸ್ಸು; ಅತ್ಯುತ್ಸಾಹ: entered into it with zest ಹುರುಪಿನಿಂದ ಅದರಲ್ಲಿ ಭಾಗವಹಿಸಿದ, ಪಾಲುಗೊಂಡ.
ವ್ಯಂಜನ; ರುಚಿಗಾಗಿ ಸೇರಿಸುವ, ನಿಂಬೆ ಯಾ ಕಿತ್ತಳೆ ಹಣ್ಣಿನ ಸಿಪ್ಪೆ ಯಾ ಸಿಪ್ಪೆಯ ಚೂರು.