logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tableland
ನಾಮವಾಚಕ
ಪ್ರಸ್ಥಭೂಮಿ; ಮಟ್ಟಸ ಮೇಲ್ಮೈ ಇರುವ, ಹರವಾದ ಎತ್ತರದ ಚಪ್ಪಟೆ ಪ್ರದೇಶ.

tablespoon
ನಾಮವಾಚಕ
  • (ಆಹಾರವನ್ನು ಬಡಿಸಲು ಬಳಸುವ ದೊಡ್ಡ) ಮೇಜುಚಮಚ.
  • (ಸಂಕ್ಷಿಪ್ತ tbsp). ಅಂಥ ಚಮಚದಲ್ಲಿ ಹಿಡಿಸುವ ಪ್ರಮಾಣ (United Kingdomನಲ್ಲಿ 15 ಮಿಲಿಮೀಟರ್‍. ಅಳತೆ).

  • tablespoonful
    ನಾಮವಾಚಕ
    (ಬಹುವಚನ tablespoonfuls). ಒಂದು ಮೇಜು ಚಮಚ ತುಂಬಉವಷ್ಟು ಪ್ರಮಾಣ.

    tablet
    ನಾಮವಾಚಕ
    1. (ಬರೆಯಲು ಬಳಸುವ ದಂತ, ಮರ, ಮೊದಲಾದವುಗಳ) ಫಲಕ; ತೆಳುಹಲಗೆ (ಮುಖ್ಯವಾಗಿ ಒಟ್ಟುಗೂಡಿಸಿದ ತಂಡದಲ್ಲಿನ ಇಂಥ ಒಂದು ಫಲಕ).
    2. (ಸಾಮಾನ್ಯವಾಗಿ ಬಹುವಚನದಲ್ಲಿ) ಇಂಥ ಹಲಗೆ ಕಟ್ಟು.
  • (ಮುಖ್ಯವಾಗಿ ಪ್ರದರ್ಶನಕ್ಕಾಗಿಯೋ, ಶಾಸನ ಕೆತ್ತುವುದಕ್ಕಾಗಿಯೋ ಬಳಸುವ, ಕಲ್ಲಿನ ಯಾ ಮರದ) ಫಲಕ; ಹಲಗೆ.
  • = $^1$pad(2).
  • (ಬ್ರಿಟಿಷ್‍ ಪ್ರಯೋಗ) ಸಾಬಊನು ಮೊದಲಾದವುಗಳ ತುಂಡು, ಬಿಲ್ಲೆ.
  • ಔಷಧಿ(ಯ) ಮಾತ್ರೆ ಯಾ ಗುಳಿಗೆ.
  • (ವಾಸ್ತುಶಿಲ್ಪ) = 1table\((8)\).
  • (ಅಮೆರಿಕನ್‍ ಪ್ರಯೋಗ) = writing-pad.

  • tabletop
    ನಾಮವಾಚಕ
  • ಮೇಜಿನ ಮೇಲ್ಮೈ ಯಾ ಮೇಲುಭಾಗ.
  • (ವಿಶೇಷಣವಾಗಿ) ಮೇಜಿನ ಮೇಲೆ ಇಡಬಹುದಾದ ಯಾ ಮೇಲ್ಮೈಯಾಗಿ ಬಳಸುವ.

  • tableware
    ನಾಮವಾಚಕ
    ಊಟದ ಮೇಜಿನ ಪಾತ್ರೆ, ಪರಿಕರ; ಊಟದ ಮೇಜಿನ ಮೇಲೆ ಬಳಸುವ ತಟ್ಟೆ, ಬಟ್ಟಲು, ಚಮಚ, ಚಾಕು, ಮೊದಲಾದವು.

    tablier
    ನಾಮವಾಚಕ
    (ಚರಿತ್ರೆ) (ಹೆಂಗಸಿನ ಉಡುಪಿನ) ಸಣ್ಣ ದೂಳು ಪಾವುಡ; ಮುಂಗವಚದಂಥ, ಉಡುಪಿನ ಭಾಗ.

    tabling
    ನಾಮವಾಚಕ
  • (ಮಸೂದೆ ಮೊದಲಾದವುಗಳನ್ನು ಚರ್ಚೆಗಾಗಿ) ಮಂಡಿಸುವುದು; ಮಂಡನೆ.
  • (ನೌಕೆಯ) ಹಾಯಿ ಬಪಡಿಸುವುದು.
  • (ವಿಷಯದ ಚರ್ಚೆಯನ್ನು) ಮುಂದೂಡುವುದು; ಮುಂದೂಡಿಕೆ.

  • tabloid
    ನಾಮವಾಚಕ
  • ಟ್ಯಾಬ್ಲಾಯ್ಡ್‍; ಪುಟಾಣಿ, ಚಿಕಣಿ–ಪತ್ರಿಕೆ; ಎದ್ದುಕಾಣುವ ಶೀರ್ಷಿಕೆಗಳು, ದೊಡ್ಡ ಹೋಟೋಗಳ ಸಹಿತ, ಸುಭಶೈಲಿಯಲ್ಲಿ ಸಾರವತ್ತಾಗಿ, ಸಾಮಾನ್ಯವಾಗಿ ಜನಪ್ರಿಯ ಸಂಗತಿಗಳನ್ನು ತಿಳಿಸುವ, ಅರ್ಧಹಾಳೆಯ ಗಾತ್ರದ ವೃತ್ತಪತ್ರಿಕೆ.
  • ಸಾರಸಂಗ್ರಹ; ಸಂಕ್ಷೇಪವಾದ ಯಾ ಸಾರವತ್ತಾದ ಯಾವುದೇ ವಿಷಯ ಮೊದಲಾದವು.

  • taboo
    ನಾಮವಾಚಕ
    1. (ಪಾಲಿನೇಷಿಯನ್ನರು ಮೊದಲಾದವರಲ್ಲಿ) ಮೀಸಲಿಡುವುದು; ವ್ಯಕ್ತಿ ಯಾ ವಸ್ತುವನ್ನು ಪವಿತ್ರ ಯಾ ಅಪವಿತ್ರವೆಂದು ಪ್ರತ್ಯೇಕಿಸಿಡುವ ಪದ್ಧತಿ ಯಾ ಕಾರ್ಯ.
    2. ಹಾಗೆ ತೆಗೆದಿಟ್ಟ, ಪ್ರತ್ಯೇಕವಾಗಿರಿಸಿದ–ವ್ಯಕ್ತಿ, ವಸ್ತು.
  • (ಸಾಮಾಜಿಕ ಸಂಪ್ರದಾಯದಿಂದ ವ್ಯಕ್ತಿಯ, ವಸ್ತುವಿನ ಯಾ ಕಾರ್ಯದ ಮೇಲೆ ವಿಧಿಸಿದ) ಬಹಿಷ್ಕಾರ; ನಿಷೇಧ.


  • logo