logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Machiavellian
ಗುಣವಾಚಕ
  • ಕುಟಿಲನೀತಿಯ; ಸಂಚಿನ; ಮೋಸದ; ಒಳತಂತ್ರದ.
  • ಕುಟಿಲ ರಾಜಕಾರಣದ; ಕುಟಿಲ ರಾಜಕೀಯ ನಡೆಸುವ.

  • Machiavellianism
    ನಾಮವಾಚಕ
  • ಕುಟಿಲ – ನೀತಿ, ವ್ಯವಹಾರ.
  • ಕುಟಿಲ – ರಾಜಕಾರಣ, ರಾಜಕೀಯ; ರಾಜಕೀಯದಲ್ಲಿ ಮೋಸ, ಒಳತಂತ್ರ, ಸಂಚುಗಾರಿಕೆ.

  • machicolate
    ಸಕರ್ಮಕ ಕ್ರಿಯಾಪದ
    (ವಾಸ್ತುಶಿಲ್ಪ) (ಕೆಳಗಿರುವ ದಾಳಿಕಾರರ ಮೇಲೆ ಕಲ್ಲು, ಕಾದ ಸೀಸ, ಮೊದಲಾದವನ್ನು ಸುರಿಯಲು) ಪಾಗಾರದಲ್ಲಿ ಯಾ ಪೌಳಿ ಗೋಡೆಯಲ್ಲಿ ಯಾ ನೆಲದಲ್ಲಿ ತೆರಪು, ಕಂಡಿ, ತೂತು, ಮೊದಲಾದವನ್ನು ಮಾಡು, ಒದಗಿಸು.

    machicolated
    ಗುಣವಾಚಕ
    (ವಾಸ್ತುಶಿಲ್ಪ)
  • (ಕೆಳಗಿರುವ ದಾಳಿಕಾರರ ಮೇಲೆ ಕಲ್ಲು ಮೊದಲಾದವುಗಳನ್ನು ಸುರಿಯಲು) ಪಾಗಾರದಲ್ಲಿ ಯಾ ಪೌಳಿ ಗೋಡೆಯಲ್ಲಿ ಕಂಡಿ ಮೊದಲಾದವನ್ನು ಮಾಡಿದ.
  • (ಪೌಳಿ ಗೋಡೆಯ ವಿಷಯದಲ್ಲಿ) ಅಂಥ ಕಂಡಿಗಳಿರುವ, ಕಂಡಿಗಳನ್ನಿಟ್ಟ.

  • machicolation
    ನಾಮವಾಚಕ
    (ವಾಸ್ತುಶಿಲ್ಪ) (ದಾಳಿಕಾರರ ಮೇಲೆ ಕಲ್ಲು ಮೊದಲಾದವನ್ನು ಸುರಿಯಲು ಪಾಗಾರ, ಪೌಳಿ ಗೋಡೆ, ಮೊದಲಾದವುಗಳಲ್ಲಿ ಮಾಡಿರುವ) ತೂರು ತೂತು, ತೆರಪು ಯಾ ಅವುಗಳಿರುವ ಕೊತ್ತಳ.

    machicoulis
    ನಾಮವಾಚಕ
    = machicolation.

    machinate
    ಅಕರ್ಮಕ ಕ್ರಿಯಾಪದ
    ತಂತ್ರನಡೆಸು; ಒಳಸಂಚು ಹೂಡು; ಪಿತೂರಿ ನಡೆಸು; ಮಸಲತ್ತು ಮಾಡು.

    machination
    ನಾಮವಾಚಕ
    ಒಳ ಸಂಚು; ಪಿತೂರಿ, ಮಸಲತ್ತು; ಕುತಂತ್ರ; ತಂತ್ರಗಾರಿಕೆ.

    machinator
    ನಾಮವಾಚಕ
    ಕುತಂತ್ರಿ; ಪಿತೂರಿಗಾರ; ಮಸಲತ್ತುಗಾರ; ಒಳಸಂಚು ಹೂಡುವವನು.

    machine
    ನಾಮವಾಚಕ
  • ಯಂತ್ರ:
    1. ಒಂದೊಂದಕ್ಕೂ ಬೇರೆ ಬೇರೆ ಕಾರ್ಯಗಳಿರುವ ವಿವಿಧ ಭಾಗಗಳನ್ನು ಹೊಂದಿ, ಅವೆಲ್ಲವೂ ಒಟ್ಟುಗೂಡಿ ಕೆಲವು ಬಗೆಯ ಕೆಲಸಗಳನ್ನು ಮಾಡುವ ಯಾಂತ್ರಿಕ ಶಕ್ತಿ ಪ್ರಯೋಗಿಸುವ ಉಪಕರಣ, ಸಾಧನ: sewing machine ಹೊಲಿಗೆ ಯಂತ್ರ.
    2. ಒಂದು ನಿರ್ದಿಷ್ಟ ಬಗೆಯ ಯಂತ್ರ, ಮುಖ್ಯವಾಗಿ ವಾಹನ, ವಿದ್ಯುಚ್ಚಾಲಿತ ಯಾ ಇಲೆಕ್ಟ್ರಾನಿಕ್‍ ಸಾಧನ.
  • ಯಾಂತ್ರಿಕ ಜೀವಿ; ಮಾನವ ಯಂತ್ರ; ಯಂತ್ರದಂತೆ ಬುದ್ಧಿ ಉಪಯೋಗಿಸದೆ ಮತ್ತು ಭಾವರಹಿತನಾಗಿ ಕೆಲಸ ಮಾಡುವವನು; ಯಂತ್ರಪ್ರಾಯನಾದವನು; ಸ್ವಲ್ಪವೂ ಕ್ರಮ ತಪ್ಪದೆ ಯಂತ್ರದಂತೆ ನಡೆಯುವವನು.
  • (ಯಂತ್ರಶಾಸ್ತ್ರ) ಯಂತ್ರ; ಬಲವನ್ನು ಒಂದೆಡೆಯಿಂದ ಇನ್ನೊಂದೆಡೆಗೆ ವರ್ಗಾಯಿಸುವ ಯಾ ಅದರ ಉಪಯೋಗವನ್ನು ನಿರ್ದೇಶಿಸುವ ಸಾಧನ: simple machine ಸರಳ ಯಂತ್ರ; ಭಾಗಗಳಿರದ ಯಂತ್ರ, ಉದಾಹರಣೆಗೆ ಸನ್ನೆಕೋಲು.
  • (ಒಂದು ಸಂಸ್ಥೆ, ರಾಜಕೀಯ ಪಂಗಡ, ಮೊದಲಾದವುಗಳ) ನಿಯಂತ್ರಕ ವ್ಯವಸ್ಥೆ; ಆಡಳಿತ ಯಂತ್ರ: the party machine ಪಕ್ಷಯಂತ್ರ ಪಕ್ಷ ವ್ಯವಸ್ಥೆ.


  • logo