logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Labour Day
ನಾಮವಾಚಕ
ಕಾರ್ಮಿಕರ ದಿನ; ಲೇಬರ್‍ ದಿನ:
  • ಮೇ ಡೇ; ಮೇ ತಿಂಗಳ ಒಂದನೇ ತಾರೀಖು.
  • ಅಮೆರಿಕದ ಸಂಯುಕ್ತ ಸಂಸ್ಥಾನಗಳು ಮತ್ತು ಕೆನಡಾಗಳಲ್ಲಿ ಕಾರ್ಮಿಕರ ಗೌರವಾರ್ಥವಾಗಿ ಆಚರಿಸುವ ಸೆಪ್ಟೆಂಬರ್‍ ತಿಂಗಳ ಮೊದಲ ಸೋಮವಾರ.

  • Labour Exchange
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಆಡುಮಾತು ಯಾ ಚರಿತ್ರೆ) ಕಾರ್ಮಿಕ ವಿನಿಮಯ ಕಚೇರಿ; ಉದ್ಯೋಗ ವಿನಿಮಯ ಕೇಂದ್ರ; ಕೆಲಸಗಾರರು ಬೇಕಾಗಿರುವ ಸ್ಥಳಗಳಿಗೆ ಕೆಲಸ ಅಪೇಕ್ಷಿಸುವವರನ್ನು ಒದಗಿಸುವ ಸರ್ಕಾರಿ ಕಚೇರಿ.

    labour force
    ನಾಮವಾಚಕ
    ಕಾರ್ಮಿಕ ಬಲ; ಮುಖ್ಯವಾಗಿ ಒಂದು ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವ ಒಟ್ಟು ಕಾರ್ಮಿಕರು.

    Labour Party
    ನಾಮವಾಚಕ
    ಲೇಬರ್‍ ಪಕ್ಷ:
  • ಕಾರ್ಮಿಕರ ಹಿತಾಸಕ್ತಿಗಳನ್ನು ಕಾಪಾಡಲು ರಚಿಸಿದ ಬ್ರಿಟನ್ನಿನ ರಾಜಕೀಯ ಪಕ್ಷ.
  • ಇತರ ದೇಶಗಳಲ್ಲಿ ಇಂಥದೇ ರಾಜಕೀಯ ಪಕ್ಷ.

  • labour union
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) ಕಾರ್ಮಿಕ(ರ) ಸಂಘ; ಶ್ರಮಿಕ ಸಂಘ.

    labour-intensive
    ಗುಣವಾಚಕ
    ಕಾರ್ಮಿಕಾಧಿಕ್ಯದ: ಶ್ರಮಿಕ ಪ್ರಧಾನ; (ಒಂದು ಕೆಲಸದ ಬಗೆಯ ವಿಷಯದಲ್ಲಿ) ಕಾರ್ಮಿಕ ದಳ ಯಾ ಸಂಖ್ಯೆ ಹೆಚ್ಚಾಗಿ ಬೇಕಾದ.

    labour-market
    ನಾಮವಾಚಕ
    ಕಾರ್ಮಿಕ ಸರಬರಾಯಿ; ಬೇಡಿಕೆಗೆ ಅನುಗುಣವಾಗಿ ಕಾರ್ಮಿಕರನ್ನು ಬೇಕಾಗಿರುವೆಡೆಗೆ ಒದಗಿಸುವುದು.

    labour-saving
    ಗುಣವಾಚಕ
    ಶ್ರಮ, ದುಡಿಮೆ – ಉಳಿಸುವ; (ಸಾಧನ, ಯೋಜನೆ, ಮೊದಲಾದವುಗಳ ವಿಷಯದಲ್ಲಿ) ಕೆಲಸವನ್ನು ಕಡಿಮೆ ಮಾಡುವ ಯಾ ಇಲ್ಲದಂತೆ ಮಾಡುವ.

    laboured
    ಗುಣವಾಚಕ
  • ಬಹಳ ಲಂಬಿಸಿದ; ಅತಿವಿಸ್ತೃತ.
  • ಬಹಳ ಶ್ರಮದಿಂದ ಮಾಡಿದಂತೆ ತೋರುವ; ತಿಣುಕಿ ಮಾಡಿದ; ತಾನಾಗಿ, ಸಹಜವಾಗಿ ಬಂದದ್ದಲ್ಲದ, ಆದದ್ದಲ್ಲದ.

  • labourer
    ನಾಮವಾಚಕ
    (ಅಮೆರಿಕನ್‍ ಪ್ರಯೋಗ laborer).
  • ದುಡಿಮೆಗಾರ; ಜೀತಗಾರ; ಶ್ರಮಜೀವಿ; ಶ್ರಮಿಕ.
  • ಕೂಲಿ; ಕಾರ್ಮಿಕ; ಕರ್ಮಚಾರಿ; ಜಾಣ್ಮೆ ಯಾ ತರಬೇತಿಗಿಂತ ಬಲ ಯಾ ತಾಳ್ಮೆ ಹೆಚ್ಚಾಗಿ ಬೇಕಾಗಿರುವ ಕೂಲಿ ಕೆಲಸ ಮಾಡುವವನು.


  • logo