logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

earnest
ನಾಮವಾಚಕ
ಶ್ರದ್ಧೆ; ಆಸಕ್ತಿ: in (real) earnest
  • ಶ್ರದ್ಧಾಯುಕ್ತವಾದ; ಶ್ರದ್ಧೆಯಿಂದ ಕೂಡಿದ; ತಮಾಷೆಯದಲ್ಲದ.
  • ಶ್ರದ್ಧಾಯುಕ್ತವಾಗಿ; ಶ್ರದ್ಧೆಯಿಂದ ಕೂಡಿ; ತಮಾಷೆಯದಾಗಿರದೆ.

  • earnest
    ನಾಮವಾಚಕ
  • (ಕರಾರನ್ನು ಢಪಡಿಸುವುದು ಮೊದಲಾದವಕ್ಕಾಗಿ ಭಾಗಶಃ ಪಾವತಿ ಮಾಡಿದ) ಮುಂಗಡ ಹಣ; ಅಗಾವು; ಸಂಚಕಾರ.
  • ಮುನ್ನರಿಕೆ; ಮುನ್ಸೂಚನೆ; ಪೂರ್ವಲಕ್ಷಣ; ಪೂರ್ವಸೂಚನೆ; ಮೊದಲ — ಸುಳಿವು, ಸೂಚನೆ: is in (an) earnest of what is to come ಮುಂದೆ ಬರುವುದರ ಪೂರ್ವಸೂಚನೆ.

  • earnestly
    ಕ್ರಿಯಾವಿಶೇಷಣ
  • ಶ್ರದ್ಧೆಯಿಂದ; ಶ್ರದ್ಧಾಪೂರ್ವಕವಾಗಿ; ಮನಃಪೂರ್ವಕವಾಗಿ; ಆಸಕ್ತಿಯಿಂದ; ಅಸಡ್ಡೆಮಾಡದೆ.
  • ತೀವ್ರಾಸಕ್ತಿಯಿಂದ; ಕಟ್ಟಕ್ಕರೆಯಿಂದ.

  • earnestness
    ನಾಮವಾಚಕ
    ಶ್ರದ್ಧೆ; ಆಸಕ್ತಿ; ಶ್ರದ್ಧಾಪೂರ್ವಕವಾಗಿರುವಿಕೆ.

    earning
    ನಾಮವಾಚಕ
  • (ಬಹುವಚನದಲ್ಲಿ)ಗಳಿಕೆ; ಅರ್ಜನೆ; ಸಂಪಾದನೆ; ಶ್ರಮಕ್ಕೆ ಯಾ ಯೋಗ್ಯತೆಗೆ ಪ್ರತಿಫಲವಾಗಿ ಪಡೆದ ಯಾ ಸಂಪಾದಿಸಿದ ಹಣ.
  • ಸಂಪಾದನೆ; ಗಳಿಸುವಿಕೆ; ಆರ್ಜನೆ.

  • earphone
    ನಾಮವಾಚಕ
    ಕಿವಿಹೋನು; ಕರ್ಣವಾಣಿ; ದೂರವಾಣಿ, ರೇಡಿಯೋ, ಮೊದಲಾದವುಗಳನ್ನು ಆಲಿಸಲು ಯಾ ಸರಿಯಾಗಿ ಕೇಳಲು, ಕಿವಿಗೆ ಸಿಕ್ಕಿಸಿಕೊಳ್ಳುವ ಸಲಕರಣೆ.

    earshot
    ನಾಮವಾಚಕ
    ಕಿವಿ ಎಟಕು; ಕೇಳುದೂರ; ಶ್ರವಣದೂರ; ಕಿವಿಗೆ ಕೇಳಿಸುವಷ್ಟು ದೂರ: within earshot ಕಿವಿಗೆ ಎಟುಕುವಷ್ಟು ದೂರದಲ್ಲಿ.

    earth
    ನಾಮವಾಚಕ ನುಡಿಗಟ್ಟು
  • ನೆಲ; ಭೂಮಿ; ಧರೆ; ತಿರೆ: it fell to earth ಅದು ನೆಲಕ್ಕೆ ಬಿತ್ತು.
  • (ಬಹುವಚನ ಸಹ) (ನೆಲಗರಡಿ, ನರಿ, ಮೊದಲಾದವುಗಳ) ಬಿಲ.
  • ಒಣನೆಲ.
  • (ಆಕಾಶಕ್ಕೆ ವಿರುದ್ಧವಾಗಿ, ಸಾಗರಗಳನ್ನೊಳಗೊಂಡಂತೆ) ಭೂಮಿ; ಭೂತಲ.
  • (Earth) ಭೂಗ್ರಹ; ಭೂಮಂಡಲ.
  • ಭೂಲೋಕ; ಥಿವಿ; ಮರ್ತ್ಯಲೋಕ; ಮಾನವ ಅಸ್ತಿತ್ವಕ್ಕೆ ಭವಿಷ್ಯದ ಸ್ಥಳಗಳಾದ ಸ್ವರ್ಗಲೋಕ ಯಾ ನರಕಗಳಿಗೆ ವಿರುದ್ಧವಾಗಿ ಈಗ ಅವನು ವಾಸಿಸುವ ಲೋಕ.
  • (ಬಹುವಚನದಲ್ಲಿ) ಮಣ್ಣು; ಬಂಡೆ, ಮರಳು ಅಲ್ಲದ್ದು.
  • (ಬಹುವಚನದಲ್ಲಿ) (ರಸಾಯನವಿಜ್ಞಾನ) ಭಸ್ಮ; ರಸವಾದಿಗಳು ಧಾತುವೆಂದು ತಿಳಿದಿದ್ದ, ಸುಲಭವಾಗಿ ಅಪಕರ್ಷಿಸಲಾಗದ ಲೋಹದ ಆಕ್ಸೈಡು: alkaline earths ಕ್ಷಾರೀಯ ಭಸ್ಮಗಳು.
  • (ಬ್ರಿಟಿಷ್‍ ಪ್ರಯೋಗ) (ಬಹುವಚನದಲ್ಲಿ) (ವಿದ್ಯುದ್ವಿಜ್ಞಾನ) ಭೂಸಂಪರ್ಕ:
    1. ವಿದ್ಯುತ್ತು ಭೂಮಿಗೆ ಹರಿದುಹೋಗುವಂತೆ ಯಾವುದೇ ಸಲಕರಣೆಯನ್ನು ತಂತಿಯಿಂದ ಭೂಮಿಗೆ ಸೇರಿಸುವುದು.
    2. ಅಂತಹ ತಂತಿ.
  • (ಆಡುಮಾತು) ಭಾರಿ ಮೊತ್ತ; ಪ್ರಪಂಚ; ಜಗತ್ತು: let it cost the earth, I am ready to pay ಇಡೀ ಪ್ರಪಂಚದಷ್ಟೇ ಬೆಲೆಯಾಗಲಿ, ನಾನು ತೆರಲು ಸಿದ್ದ.

  • earth
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
  • (ಗಿಡಗಳ ಬೇರುಗಳನ್ನು) ಮಣ್ಣಿನಿಂದ ಮುಚ್ಚು; ಮಣ್ಣು ಹೊಡೆ; ಮಣ್ಣು ಏರಹಾಕು.
  • (ನರಿಯನ್ನು) ಬಿಲಕ್ಕೆ ಓಡಿಸು; ಬಿಲ ಹೊಗಿಸು.
  • (ಬ್ರಿಟಿಷ್‍ ಪ್ರಯೋಗ) (ವಿದ್ಯುದ್ವಿಜ್ಞಾನ) ಭೂಸಂಪರ್ಕಗೊಳಿಸು; ಭೂಸಂಪರ್ಕ ಕಲ್ಪಿಸು.

  • earth mother
    ನಾಮವಾಚಕ
  • (ಪುರಾಣ) ಭೂದೇವಿ; ಭೂಮಿತಾಯಿ.
  • (ರೂಪಕವಾಗಿ) ಭೋಗಾಸಕ್ತಿಯ ಮತ್ತು ಮಾಸ್ವಭಾವದ ಹೆಂಗಸು.


  • logo