logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

cabin cruiser
ನಾಮವಾಚಕ
ಕ್ಯಾಬಿನ್‍ ಕ್ರೂಸರು; ವಸತಿ ಸೌಕರ್ಯವಿರುವ, ಶಕ್ತಿಚಾಲಿತ ನೌಕೆ.

cabin-boy
ನಾಮವಾಚಕ
(ಹಡಗಿನಲ್ಲಿ) ಕ್ಯಾಬಿನ್‍–ಹುಡುಗ, ಮಾಣಿ, ಪರಿಚಾರಕ; ಪ್ರಯಾಣಿಕರನ್ನು ಉಪಚರಿಸಲು ನೇಮಿಸಿರುವ ಹುಡುಗ.

cabined
ಗುಣವಾಚಕ
  • ಜೋಪಡಿಯಂತೆ ಮಾಡಿದ.
  • ಕಿರುಕೋಣೆಯುಳ್ಳ.
  • ಇಕ್ಕಟ್ಟಿನ; ಇಕ್ಕಟ್ಟಾದ.
  • (ರೂಪಕವಾಗಿ) ಇಕ್ಕಟ್ಟಿಗೆ–ಸಿಕ್ಕಿದ ಯಾ ಸಿಕ್ಕಿಸಿದ.

  • cabinet
    ನಾಮವಾಚಕ
    (ಪ್ರಾಚೀನ ಪ್ರಯೋಗ)
  • ಅಲಮಾರು; ಬೀರು; ಒಡವೆ, ದಾಖಲೆಗಳು ಮೊದಲಾದವನ್ನು ಜೋಪಾನವಾಗಿ ಇಡಲು ಯಾ ಮಾದರಿವಸ್ತುಗಳನ್ನು ಪ್ರದರ್ಶಿಸಲು, ಅರೆಗಳು, ಖಾನೆಗಳು, ಬಡುಗಳು ಮೊದಲಾದವುಗಳಿರುವ ಕಪಾಟು.
  • ರೇಡಿಯೋ, ದೂರದರ್ಶನ ಮೊದಲಾದವನ್ನು ಒಳಗೊಂಡಿರುವ ಪೀಠೋಪಕರಣಸಂಪುಟ.
  • (ರಾಜನೀತಿಶಾಸ್ತ್ರ) (Cabinet) ಸಚಿವ ಸಂಪುಟ; ಸರ್ಕಾರದ ಧೋರಣೆಗಳನ್ನು ನಿಯಂತ್ರಿಸುವ ಮಂತ್ರಿಮಂಡಲ.
  • (ಪ್ರಾಚೀನ ಪ್ರಯೋಗ) (ಚಿಕ್ಕ) ಒಳಕೋಣೆ; ಖಾಸಗಿ ಕಿರು ಕೋಣೆ.
  • ಕಲಾಕೃತಿಗಳ (ಪ್ರದರ್ಶನಕ್ಕಾಗಿಯೇ ಮೀಸಲಾಗಿರುವ) ಕೋಣೆ.
  • (ಮುಖ್ಯ ಸದಸ್ಯರ ಯಾ ಮಂತ್ರಿಗಳ) ಮಂತ್ರಾಲೋಚನ–ಮಂದಿರ, ಶಾಲೆ; ಆಲೋಚನಾಲಯ; ಮಂತ್ರಣ–ಮಂದಿರ, ಶಾಲೆ.

  • cabinet crisis
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಸಚಿವಸಂಪುಟದ ಬಿಕ್ಕಟ್ಟು; ಮಂತ್ರಿಮಂಡಲದ ಬಿಕ್ಕಟ್ಟು; ಕೆಲವು ಮಂತ್ರಿಗಳ ರಾಜೀನಾಮೆಯಿಂದ ಯಾ ಸರ್ಕಾರ ಬದಲಾಗುವುದರಿಂದ ಆಗುವ ಬಿಕ್ಕಟ್ಟು.

    cabinet edition
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) (ಬೆಲೆ ಮೊದಲಾದವುಗಳಲ್ಲಿ) ಕ್ಯಾಬಿನೆಟ್‍ ಪ್ರತಿ; ಮಧ್ಯಮಪ್ರತಿ; ಲೈಬ್ರರಿ ಆವೃತ್ತಿಗೂ ಜನಪ್ರಿಯ ಆವೃತ್ತಿಗೂ ನಡುವಣ ಪ್ರತಿ.

    Cabinet Minister
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಸಂಪುಟಸಚಿವ; ಕ್ಯಾಬಿನೆಟ್‍ ಮಂತ್ರಿ; ಒಳ ಮಂತ್ರಿಮಂಡಲದ ಸದಸ್ಯ.

    cabinet photograph
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ) ಮಧ್ಯಮ ಸೈಜಿನ ಹೋಟೋ; ಕ್ಯಾಬಿನೆಟ್‍ ಹೋಟೋ ($4”\times 6”$ ಸೈಜಿನದು).

    cabinet pudding
    ನಾಮವಾಚಕ
    ಹಣ್ಣುಗಡುಬು; ಸಕ್ಕರೆ ಬೆರೆಸಿದ ಯಾ ಒಣಗಿದ ಹಣ್ಣು, ಹಾಲು ಮತ್ತು ಮೊಟ್ಟೆಗಳನ್ನು ಸೇರಿಸಿ, ಆವಿಯಲ್ಲಿ ಬೇಯಿಸಿದ ಪುಡಿಂಗು.

    cabinet-maker
    ನಾಮವಾಚಕ
  • ಕುಶಲಬಡಗಿ; ನಾಜೂಕುಬಡಗಿ; ಮರಗೆಲಸವನ್ನು–ಮುಖ್ಯವಾಗಿ ಆಲಂಕಾರಿಕ ಬೀರು, ಮೇಜು, ಕುರ್ಚಿ ಮೊದಲಾದವುಗಳನ್ನು–ಬಹು ಚೆನ್ನಾಗಿ ಮಾಡುವವನು.
  • (ಆಡುಮಾತು) ಸಂಪುಟ ರಚಿಸುವ ಪ್ರಧಾನಿ; ಸಂಪುಟರಚಕ.


  • logo