logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uncurtailed
ಗುಣವಾಚಕ
ಮೊಟಕು, ಕಡಮೆ, ಖೋತ – ಮಾಡದ; ಕತ್ತರಿಸದ; ಹ್ರಸ್ವ ಮಾಡದ (ರೂಪಕವಾಗಿ ಸಹ).

uncurtained
ಗುಣವಾಚಕ
ತೆರೆಮುಚ್ಚದ; ಪರದೆ ಹಾಕದ; ತೆರೆಯಿಲ್ಲದ; ಮರೆ ಮಾಡದ.

uncustomed
ಗುಣವಾಚಕ
  • ಸುಂಕರಹಿತ; ಸುಂಕವಿಲ್ಲದ; ಸುಂಕ ವಿಧಿಸದ.
  • ಸುಂಕ ಕೊಟ್ಟಿಲ್ಲದ; ಸುಂಕ ತೆರದಿರುವ, ಪಾವತಿಸದ.

  • uncut
    ಗುಣವಾಚಕ
  • ಕತ್ತರಿಸಿಲ್ಲದ.
  • (ಪುಸ್ತಕದ ವಿಷಯದಲ್ಲಿ) ಹಾಳೆಗಳ ಅಂಚು ಕತ್ತರಿಸದೆ ಬಿಟ್ಟಿರುವ; ಹಾಳೆತುದಿಯನ್ನು ಕತ್ತರಿಸಿ ಸಮ ಮಾಡದಿರುವ.
  • (ಗ್ರಂಥ, ಚಲನಚಿತ್ರ, ಮೊದಲಾದವುಗಳ ವಿಷಯದಲ್ಲಿ) (ಮುಖ್ಯವಾಗಿ ಸೆನ್ಸಾರ್‍ ಅಧಿಕಾರಿಗಳು) ಕತ್ತರಿಸದಿರುವ; ಮೊಟಕು ಮಾಡದಿರುವ.
  • (ಹರಳಿನ, ಮುಖ್ಯವಾಗಿ ವಜ್ರದ ವಿಷಯದಲ್ಲಿ) ಕಂಡರಿಸದ; ಸಾಣೆ ಹಿಡಿಯದ.
  • (ಬಟ್ಟೆ) ಜುಂಗು ಕತ್ತರಿಸದ.

  • undamaged
    ಗುಣವಾಚಕ
    ಕೆಡಿಸದ; ಹಾನಿ – ಮಾಡದ ಯಾ ಆಗದ.

    undated
    ಗುಣವಾಚಕ
    ತಾರೀಖು ನಮೂದಿಸದ; ದಿನಾಂಕ ಸೂಚಿಸದ; ಕಾಲ ಸೂಚಿಸದ.

    undaunted
    ಗುಣವಾಚಕ
    ಎದೆಗುಂದದ; ಧೈರ್ಯಗೆಡದ; ನಿರ್ಭೀತ.

    undauntedly
    ಕ್ರಿಯಾವಿಶೇಷಣ
    ಎದೆಗುಂದದೆ; ನಿರ್ಭೀತನಾಗಿ.

    undauntedness
    ನಾಮವಾಚಕ
    ಎದೆಗುಂದದಿರುವಿಕೆ; ನಿರ್ಭೀತಿ.

    undecagon
    ನಾಮವಾಚಕ
    = hendecagon.


    logo