logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

tauto-
ಸಮಾಸ ಪೂರ್ವಪದ
ಅದೇ-, ಒಂದೇ-, ಸಮ-, ಎಂಬರ್ಥದ ಸಮಾಸ ಪೂರ್ವಪದ.

tautog
ನಾಮವಾಚಕ
(ಉತ್ತರ ಅಮೆರಿಕದ ಅಟ್ಲಾಂಟಿಕ್‍ ಕರಾವಳಿಯಲ್ಲಿ ಸಿಕ್ಕುವ) ಆಹಾರದ ಹಾಗೂ ಬೇಟೆಯ ಮೀನು.

tautologic
ಗುಣವಾಚಕ
ಪುನರುಕ್ತಿಯ; ತಲೆಶಿರೋಭಾರ ಪ್ರಯೋಗದ.

tautological
ಗುಣವಾಚಕ
= tautologic.

tautologically
ಕ್ರಿಯಾವಿಶೇಷಣ
ಪುನರುಕ್ತಿಯಾಗಿ; ಪುನರುಕ್ತಿ–ಆಗುವಂತೆ ಯಾ ಆಗಿರುವಂತೆ.

tautologise
ಅಕರ್ಮಕ ಕ್ರಿಯಾಪದ
= tautologize.

tautologist
ನಾಮವಾಚಕ
ಪುನರುಕ್ತಿಕಾರ; ಪುನರುಕ್ತಿ ಬಳಸುವವನು.

tautologize
ಅಕರ್ಮಕ ಕ್ರಿಯಾಪದ
ಪುನರುಕ್ತಿ–ಬಳಸು, ಪ್ರಯೋಗಿಸು; ಹೇಳಿದ್ದನ್ನೇ ಹೇಳು.

tautologous
ಗುಣವಾಚಕ
= tautological.

tautology
ನಾಮವಾಚಕ
  • ಪುನರುಕ್ತಿ; ಹೇಳಿದ್ದನ್ನೇ ಬೇರೆಬೇರೆ ಮಾತುಗಳಲ್ಲಿ ಹೇಳುವುದು (ಉದಾಹರಣೆಗೆ arrived one after another in succession ಒಬ್ಬರಾದ ಮೇಲೊಬ್ಬರಂತೆ ಅನುಕ್ರಮವಾಗಿ ಬಂದು ಸೇರಿದರು).
  • ನಿಯತಸತ್ಯೋಕ್ತಿ; ಸ್ವರೂಪದಿಂದಲೇ ಸತ್ಯವಾಗಿರುವ, ಎಂದರೆ ವಸ್ತುಸ್ಥಿತಿಗಳ ಸ್ವರೂಪದಿಂದಲೇ ಅವುಗಳಿಗೆ ವಿರುದ್ಧವಾಗಿರುವುದು ಅಸಾಧ್ಯವಾಗಿರುವ - ಹೇಳಿಕೆ, ನಿರೂಪಣೆ.


  • logo