logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oil-paint
ನಾಮವಾಚಕ
ತೈಲವರ್ಣ; ಎಣ್ಣೆಬಣ್ಣ; ವರ್ಣದ್ರವ್ಯವನ್ನು ಎಣ್ಣೆಯಲ್ಲಿ ನುಣ್ಣಗೆ ಅರೆದು ತಯಾರಿಸಿದ, ವರ್ಣಚಿತ್ರ ರಚನೆಗೆ ಬಳಸುವ ಬಣ್ಣ.

oil-painting
ನಾಮವಾಚಕ
  • ತೈಲಚಿತ್ರ ರಚನೆ; ತೈಲ ವರ್ಣಚಿತ್ರಣ; ತೈಲವರ್ಣಗಳಿಂದ ಚಿತ್ರ ರಚಿಸುವುದು.
  • ತೈಲ(ವರ್ಣ) ಚಿತ್ರ; ತೈಲ ವರ್ಣಗಳಿಂದ ರಚಿಸಿದ ಚಿತ್ರ.

  • oil-palm
    ನಾಮವಾಚಕ
    ಎಣ್ಣೆ, ತೈಲ–ತಾಳೆ; ಎಣ್ಣೆ ನೀಡುವ ಕಾಯಿಬಿಡುವ, ಪಶ್ಚಿಮ ಆಹ್ರಿಕದ ಎಲೀಯಿಸ್‍ ಗ್ವಿನೀನ್‍ಸಿಸ್‍ ಕುಲಕ್ಕೆ ಯಾ ಅಮೆರಿಕದ ಎಲೀಯಿಸ್‍ ಓಲೀಹರ ಕುಲಕ್ಕೆ ಸೇರಿದ ತಾಳೆಮರಗಳ ಎರಡು ಬಗೆಗಳಲ್ಲಿ ಒಂದು.

    oil-pan
    ನಾಮವಾಚಕ
    ಎಣ್ಣೆತೊಟ್ಟಿ ಯಾ ಕುಳಿ; ಅಂತರ್ದಹನ ಯಂತ್ರದ ‘ಕ್ರ್ಯಾಂಕ್‍ ಕೇಸ್‍’. ಎಣ್ಣೆಯಿರುವ ತಳಭಾಗ.

    oil-paper
    ನಾಮವಾಚಕ
    ಎಣ್ಣೆ ಕಾಗದ; ತೈಲ ಕಾಗದ; ಎಣ್ಣೆಯಿಂದ ಸಂಸ್ಕರಿಸಿ ನೀರಿಳಿಯದಂತೆ ಅಥವಾ ಪಾರದರ್ಶಕವಾಗಿ ಮಾಡಿದ ಕಾಗದ.

    oil-plant
    ನಾಮವಾಚಕ
    ಎಣ್ಣೆಗಿಡ; ತೈಲ ಸಸ್ಯ; ಎಣ್ಣೆ ನೀಡುವ ಎಳ್ಳು, ಹರಳು, ಮೊದಲಾದ ಯಾವುದೇ ಗಿಡ.

    oil-press
    ನಾಮವಾಚಕ
    ಗಾಣ; ಎಣ್ಣೆ ಬೀಜಗಳನ್ನು ಒತ್ತಿ ಎಣ್ಣೆಯನ್ನು ತೆಗೆಯುವ ಉಪಕರಣ.

    oil-sand
    ನಾಮವಾಚಕ
    ಎಣ್ಣೆಮರಳು; ತೈಲಸಿಕತ; ಪೆಟ್ರೋಲಿಯಮ್ಮನ್ನು ಕೊಡುವ, ಸರಂಧ್ರ ಶಿಲೆಯ ಸ್ತರ, ಪದರ.

    oil-seed
    ನಾಮವಾಚಕ
    ಎಣ್ಣೆಬೀಜ; ಎಣ್ಣೆಯನ್ನು ಕೊಡುವ ಹರಳು, ಸೇಂಗಾ, ಹತ್ತಿ, ಮೊದಲಾದ ಬೀಜ.

    oil-shale
    ನಾಮವಾಚಕ
    ಎಣ್ಣೆಕಲ್ಲು; ತೈಲ ಶಿಲೆ; ಎಣ್ಣೆಯನ್ನು ತೆಗೆಯಬಹುದಾದ, ನಯವಾದ ಕಣಗಳುಳ್ಳ ಶಿಲೆ.


    logo