logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

laryngitic
ಗುಣವಾಚಕ
ಕಂಠಕುಹರೀಯ:
  • ಗಂಟಲಗೂಡಿನ ಉರಿಯೂತ(ಕ್ಕೆ ಸಂಬಂಧಿಸಿ)ದ.
  • ಗಂಟಲಗೂಡಿನ ಉರಿಯೂತ ಸ್ವಭಾವದ.

  • laryngitis
    ನಾಮವಾಚಕ
    ಗಂಟಲಗೂಡಿನ, ಕಂಠಕುಹರದ – ಉರಿಯೂತ; ಗಂಟಲಿನ ದನಿಪೆಟ್ಟಿಗೆಯ ಉರಿಯೂತ.

    laryngology
    ನಾಮವಾಚಕ
    ಕಂಠಕುಹರಶಾಸ್ತ್ರ; ಗಂಟಲಿನ ದನಿಪೆಟ್ಟಿಗೆಯ ಮತ್ತು ಅದರ ರೋಗಗಳನ್ನು ಕುರಿತ ಶಾಸ್ತ್ರ.

    laryngoscope
    ನಾಮವಾಚಕ
    ಕಂಠಕುಹರದರ್ಶಕ; ಗಂಟಲಿನ ಗೂಡಿನಲ್ಲಿರುವ ದನಿಪೆಟ್ಟಿಗೆಯ ಒಳಭಾಗವನ್ನು ಪರೀಕ್ಷಿಸಲು ಉಪಯೋಗಿಸುವ ಕನ್ನಡಿಯಿಂದ ಕೂಡಿದ ಉಪಕರಣ.

    laryngotomy
    ನಾಮವಾಚಕ
    ಕಂಠಕುಹರಕೃಂತನ; ಮುಖ್ಯವಾಗಿ ಉಸಿರಾಟಕ್ಕೆ ಬೇರೆ ದಾರಿ ಕಲ್ಪಿಸಲು ಕೊರಳ ಹೊರಗಿನಿಂದ ಗಂಟಲಗೂಡಿನ ದನಿಪೆಟ್ಟಿಗೆಗೆ ರಂಧ್ರಮಾಡುವುದು.

    larynx
    ನಾಮವಾಚಕ
    ಗಂಟಲಗೂಡು; ಕಂಠಕುಹರ; ಧ್ವನಿಪೆಟ್ಟಿಗೆ; ಮನುಷ್ಯರಲ್ಲಿ ಮತ್ತು ಇತರ ಸಸ್ತನಿಗಳಲ್ಲಿ ಧ್ವನಿತಂತುಗಳನ್ನು ಒಳಗೊಂಡಿರುವ ಮತ್ತು ಶ್ವಾಸಕೋಶಗಳಿಗೆ ಗಾಳಿ ಹೋಗುವ ಮಾರ್ಗವಾಗಿರುವ, ಟೊಳ್ಳಾದ ಮಾಂಸಲ ಅಂಗ.

    lasagne
    ನಾಮವಾಚಕ
    (ಬಹುವಚನ) ಲಸಾಂಜ; ತುರಿದ ಮಾಂಸ ಮತ್ತು ಚೀಸ್‍ ಸಾಸಿನ ಜತೆ ಬಡಿಸುವ, ಹಾಳೆಗಳ ಯಾ ಅಗಲವಾದ ರಿಬ್ಬನ್‍ ಆಕಾರದಲ್ಲಿ ಬೇಯಿಸಿದ ಹಿಟ್ಟು.

    lascivious
    ಗುಣವಾಚಕ
  • ಕಾಮುಕ(ನಾದ); ವಿಷಯಲಂಪಟ(ನಾದ).
  • ಕಾಮಪ್ರಚೋದಕ; ಕಾಮ ಕೆರಳಿಸುವ.

  • lasciviously
    ಕ್ರಿಯಾವಿಶೇಷಣ
  • ಕಾಮುಕನಾಗಿ; ವಿಷಯಲಂಪಟನಾಗಿ.
  • ಕಾಮಪ್ರಚೋದಕವಾಗಿ; ಕಾಮಕೆರಳಿಸುವ ರೀತಿಯಲ್ಲಿ.

  • lasciviousness
    ನಾಮವಾಚಕ
  • ಕಾಮುಕತೆ; ವಿಷಯಲಂಪಟತ್ವ.
  • ಕಾಮಪ್ರಚೋದಕತೆ; ಕಾಮಕೆರಳಿಸುವ ಲಕ್ಷಣ.


  • logo