logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

impermanency
ನಾಮವಾಚಕ
= impermanence.

impermanent
ಗುಣವಾಚಕ
ಅನಿತ್ಯ; ನಶ್ವರ; ಅಶಾಶ್ವತ; ಶಾಶ್ವತವಲ್ಲದ.

impermeability
ನಾಮವಾಚಕ
  • ಅಪ್ರವೇಶ್ಯತೆ; ಅವ್ಯಾಪ್ಯತೆ; ಒಳಹೊಗಲು ಎಡೆಗೊಡದಿರುವಿಕೆ.
  • (ಭೌತವಿಜ್ಞಾನ) ಅಪಾರಕತೆ; ತರಲಗಳು (fluids) ಹಾದು ಹೋಗಲಾರದಂತಿರುವುದು.

  • impermeable
    ಗುಣವಾಚಕ
  • ಅಪ್ರವೇಶ್ಯ; ಒಳಹೊಗಲವಕಾಶಕೊಡದ; ಒಳಗೆ ಹೊಗಲಾಗದ.
  • (ಭೌತವಿಜ್ಞಾನ) ಅಪಾರಕ; ತರಲಗಳು (fluids) ಹಾದು ಹೋಗಲಾಗದ.

  • impermissible
    ಗುಣವಾಚಕ
    ನಿಷಿದ್ಧ; ಅಪ್ಪಣೆ ಕೊಡಲಾಗದ; ಅನುಮತಿ ನೀಡಲಾಗದ; ಅಪ್ಪಣೆ ಕೊಡಲು ಸಾಧ್ಯವಿಲ್ಲದ.

    imperscriptible
    ಗುಣವಾಚಕ
    ಲಿಖಿತಾಧಾರವಿಲ್ಲದ; ಲಿಖಿತ ಪ್ರಮಾಣವಿಲ್ಲದ; (ಬರಹದ) ದಾಖಲೆಯಿಲ್ಲದ.

    impersonal
    ಗುಣವಾಚಕ
  • (ವ್ಯಾಕರಣ) (ಕ್ರಿಯಾಪದದ ವಿಷಯದಲ್ಲಿ) ಅಕರ್ತೃಕ; ಕರ್ತೃಪದವಿಲ್ಲದ.
  • ನಿರಾಕಾರ; ನೀರೂಪ; ಮನುಷ್ಯಾಕಾರವಿಲ್ಲದ; ಪುರುಷಾಕಾರವಿಲ್ಲದ; ವ್ಯಕ್ತಿಸ್ವರೂಪವಿಲ್ಲದ: impersonal deity ನಿರಾಕಾರ ದೇವತೆ; ಪುರುಷರೂಪವಿಲ್ಲದ ದೇವತೆ. impersonal forces ನೀರೂಪ ಶಕ್ತಿಗಳು, (ಉದಾಹರಣೆಗೆ ನಿಸರ್ಗದಲ್ಲಿರುವಂಥ) ಮಾನವರೂಪವಿಲ್ಲದ ಶಕ್ತಿಗಳು.
  • ವೈಯಕ್ತಿಕವಲ್ಲದ; ಅವೈಯಕ್ತಿಕ; ವ್ಯಕ್ತಿಗೆ ಅನ್ವಯಿಸದ, ಸಂಬಂಧಿಸದ: impersonal remarks ವೈಯಕ್ತಿಕವಲ್ಲದ ಟೀಕೆಗಳು.

  • impersonal pronoun
    ನಾಮವಾಚಕ
    (ವ್ಯಾಕರಣ) = indefinite pronoun.

    impersonal verb
    ನಾಮವಾಚಕ
    (ವ್ಯಾಕರಣ) (ಕ್ರಿಯೆಯ ಅರ್ಥವನ್ನೇ ಹೊಂದಿರುವ, ಕರ್ತೃಪದದೊಡನೆ ಪ್ರಯೋಗವಾಗುವ) ಅಕರ್ತೃಕ ಕ್ರಿಯಾಪದ; ಸ್ಪಷ್ಟ ಕರ್ತೃಪದವಿಲ್ಲದೆ, ಪ್ರಥಮ ಪುರುಷ ಏಕವಚನದಲ್ಲಿ ಮಾತ್ರ ಪ್ರಯೋಗವಾಗುವ ಕ್ರಿಯಾಪದ: me thinks ನನಗನ್ನಿಸುತ್ತದೆ. it rains ಮಳೆಯಾಗುತ್ತದೆ.

    impersonality
    ನಾಮವಾಚಕ
  • ಅವೈಯಕ್ತಿಕತೆ; ವ್ಯಕ್ತಿಗೆ ಸಂಬಂಧಪಡದಿರುವಿಕೆ.
  • ನಿರಾಕಾರತೆ; ವ್ಯಕ್ತಿಸ್ವರೂಪರಾಹಿತ್ಯ; ಮಾನವ ಸ್ವರೂಪ ಯಾ ಮಾನವ ಗುಣಗಳು ಇಲ್ಲದಿರುವಿಕೆ.


  • logo