ಬೆತ್ತದ ಕುರ್ಚಿ; ಬೆನ್ನು ಮತ್ತು ಪೀಠಗಳಿಗೆ ಬೆತ್ತವನ್ನು ಹೆಣೆದಿರುವ ಕುರ್ಚಿ.
cane trash
ನಾಮವಾಚಕ
(ವೆಸ್ಟ್ ಇಂಡೀ) ಕಬ್ಬಿನ ಹಿಪ್ಪೆ; ರಸ ಹಿಂಡಿ ತೆಗೆದ ನಂತರ, ಉರುವಲಾಗಿ ಬಳಸುವ ಕಬ್ಬಿನ ಹಿಪ್ಪೆ, ಸಿಪ್ಪೆ ಮತ್ತು ಸೋಗೆ.
cane-brake
ನಾಮವಾಚಕ
(ಅಮೆರಿಕನ್ ಪ್ರಯೋಗ) ಬೆತ್ತದ, ಬಿದಿರಿನ ಯಾ ಕಬ್ಬಿನ–ಮೆಳೆ; ಬಿದಿರುಗುತ್ತಿ.
ಬೆತ್ತದ ಕಾಡು; ಬಿದಿರು ಕಾಡು; ಬೆತ್ತ, ಬಿದಿರು ಮೊದಲಾದವು ಒತ್ತಾಗಿ ಬೆಳೆದ ಪ್ರದೇಶ.
cane-sugar
ನಾಮವಾಚಕ
ಕಬ್ಬಿನ ಸಕ್ಕರೆ; ಕಬ್ಬಿನಿಂದ ತಯಾರಾಗುವ ಸಕ್ಕರೆ.
canephorus
ನಾಮವಾಚಕ
(ವಾಸ್ತುಶಿಲ್ಪ) (ಬಹುವಚನ canephori). ಕರಂಡಧಾರಿ; ಕರಂಡಧಾರ ಯಾ ಕರಂಡಧಾರಿಣಿ; ಪ್ರಾಚೀನ ಗ್ರೀಕರ ವಾಸ್ತುಶಿಲ್ಪದಲ್ಲಿ ತಲೆಯ ಮೇಲೆ ಬುಟ್ಟಿಹೊತ್ತಿರುವಂತೆ ಕೆತ್ತಿರುವ, ಯುವಕ ಯಾ ಯುವತಿಯ ವಿಗ್ರಹ.
canful
ನಾಮವಾಚಕ
ಡಬ್ಬದ ತುಂಬ; ಡಬ್ಬಭರ್ತಿ; ಡಬ್ಬ ತುಂಬುವಷ್ಟು ಪ್ರಮಾಣ.
cang
ನಾಮವಾಚಕ
=cangue.
cangue
ನಾಮವಾಚಕ
(ಚರಿತ್ರೆ) (ಚೀನಾದಲ್ಲಿ) ಕುತ್ತಿಗೆ ಬೇಡಿ; ಕತ್ತುಬಂದಿ; ಶಿಕ್ಷೆಯಾಗಿ ಖೈದಿಗಳು ಕತ್ತಿನ ಸುತ್ತ ಹೊತ್ತಿರಬೇಕಾದ, ಭಾರವಾದ, ಹಲವು ಅಡಿಗಳಷ್ಟು ಅಗಲವಾದ, ಮರದ ಹಲಗೆ.