(ನ್ಯಾಯಶಾಸ್ತ್ರ) ದಿವಾಳಿ ಸಾಲಗಾರ; ಪಾಪರು; ಸಾಲ ತೀರಿಸಲು ಅಶಕ್ತನೆಂದು ತಾನೇಯೋ, ಸಾಲಗಾರರೋ ದಿವಾಳಿ ವ್ಯವಹಾರದ ನ್ಯಾಯಸ್ಥಾನಕ್ಕೆ ಅರ್ಜಿ ಹಾಕಿ, ಉಳಿದಿರುವ ಆಸ್ತಿಯನ್ನು ಸಾಲಗಾರರಿಗೆ ಹಂಚಿಕೆಯಾಗುವಂತೆ ನ್ಯಾಯಸ್ಥಾನದಲ್ಲಿ ತೀರ್ಮಾನವಾದ ವ್ಯಕ್ತಿ.
ದಿವಾಳಿ ಎದ್ದವನು; ಪಾಪರು; ಸಾಲ ತೀರಿಸಲಾಗದವನು.
ಇಲ್ಲದವ; ದರಿದ್ರ; ಯಾವುದಾದರೂ ಒಂದು ವಸ್ತುವಿನ ಗುಣದ ಅಭಾವ ಯಾ ಕೊರತೆ ಇರುವವ: intellectual bankrupt ಬುದ್ಧಿ ಇಲ್ಲದವ; ಬುದ್ಧಿ ದರಿದ್ರ.
bankrupt
ಸಕರ್ಮಕ ಕ್ರಿಯಾಪದ
ದಿವಾಳಿಯಾಗಿಸು; ದಿವಾಳಿ ಮಾಡು; ಪಾಪರಾಗಿಸು.
bankrupt
ಗುಣವಾಚಕ
(ನ್ಯಾಯಶಾಸ್ತ್ರ) ದಿವಾಳಿಗೆ ಒಳಪಟ್ಟ, ದಿವಾಳಿಯೆದ್ದುದರಿಂದ ನ್ಯಾಯಸ್ಥಾನದ ವ್ಯವಹಾರಕ್ಕೆ ಯಾ ಕಾನೂನು ಕ್ರಮಕ್ಕೆ ಒಳಪಟ್ಟಿರುವ.
ದಿವಾಳಿಯಾದ; ದಿವಾಳಿಯೆದ್ದ; ಪಾಪರಾದ; ನಿರ್ಗತಿಕನಾದ.
(ಯಾವುದಾದರೂ ಗುಣ ಮೊದಲಾದವುಗಳ ವಿಷಯದಲ್ಲಿ) ಖಾಲಿ; ಶೂನ್ಯ; ರಹಿತ; ದರಿದ್ರ.
ದಿವಾಳಿಯ; ದಿವಾಳಿಗೆ ಸಂಬಂಧಿಸಿದ.
bankruptcy
ನಾಮವಾಚಕ
ದಿವಾಳಿತನ; ನಾದಾರಿತನ; ಪಾಪರುಗಿರಿ; ಸಾಲ ತೀರಿಸಲಾಗದಿರುವಿಕೆ.
(ಕೀರ್ತಿ ಮೊದಲಾದವುಗಳ ವಿಷಯದಲ್ಲಿ) ಇಲ್ಲಮೆ; ರಿಕ್ತತೆ; ರಾಹಿತ್ಯ; ದಾರಿದ್ರ್ಯ; ಶೂನ್ಯತೆ; ಪೂರ್ಣ ಅಭಾವ.
banksia
ನಾಮವಾಚಕ
(ಸಸ್ಯವಿಜ್ಞಾನ) ಬ್ಯಾಂಕ್ಸಿಯ; ಮೊದಲು ಆಸ್ಟ್ರೇಲಿಯದಲ್ಲಿ ಬೆಳೆಯುತ್ತಿದ್ದ, ಈಗ ಯೂರೋಪಿನಲ್ಲೂ ಬೆಳೆಯುವ, ಚರ್ಮದಂಥ ಎಲೆಗಳುಳ್ಳ, ಒತ್ತಾದ ಉರುಳೆಯಾಕಾರದ, ನಸುಹಳದಿ ಬಣ್ಣದ ಹೂಗೊಂಚಲುಗಳುಳ್ಳ, ನಿತ್ಯ ಹರಿದ್ವರ್ಣದ ಪೊದೆಗಳ ಒಂದು ಕುಲ ಯಾ ಆ ಕುಲದ ಒಂದು ಪೊದೆ.
banksia rose
ನಾಮವಾಚಕ
ಬ್ಯಾಂಕ್ಸಿಯ ಗುಲಾಬಿ; ಚಿಕ್ಕ ಚಿಕ್ಕ ಹೂಬಿಡುವ ಚೀನಾದೇಶದ ಬಳ್ಳಿ ಗುಲಾಬಿ.
banksman
ನಾಮವಾಚಕ
(ಕಲ್ಲಿದ್ದಲು) ಗಣಿ ಮೇಸ್ತ್ರಿ; ಗಣಿಯ ಮೇಲ್ಭಾಗದಲ್ಲಿದ್ದುಕೊಂಡು ಉಸ್ತುವಾರಿ ಮಾಡುವವನು.