logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oil-fired
ಗುಣವಾಚಕ
ತೈಲೇಂಧನದ; ತೈಲವನ್ನು ಇಂಧನವಾಗಿ ಬಳಸುವ.

oil-gauge
ನಾಮವಾಚಕ
ತೈಲಮಾಪಕ:
  • ಎಣ್ಣೆಯ ವಿಶಿಷ್ಟಗುರುತ್ವವನ್ನು ಅಳೆಯುವ ಉಪಕರಣ.
  • ಯಂತ್ರ, ಎಂಜಿನ್‍, ಮೊದಲಾದವುಗಳಲ್ಲಿ ಕೀಲೆಣ್ಣೆಯ ಮಟ್ಟವನ್ನು ಗುರುತಿಸುವ ಉಪಕರಣ.

  • oil-gilding
    ನಾಮವಾಚಕ
    ಎಣ್ಣೆ ಗಿಲೀಟು; ತೈಲವರ್ಣದ ಮೇಲೆ ಚಿನ್ನದ ಮುಲಾಮು ಲೇಪಿಸುವುದು.

    oil-gland
    ನಾಮವಾಚಕ
    ತೈಲಗ್ರಂಥಿ; ಎಣ್ಣೆಯನ್ನು ಸ್ರವಿಸುವ ಗ್ರಂಥಿ; ಮುಖ್ಯವಾಗಿ ಹಕ್ಕಿಗಳಲ್ಲಿರುವ ಯೂರೋಪಿಜಿಯಲ್‍ ಗ್ರಂಥಿ.

    oil-gold
    ನಾಮವಾಚಕ
    = oil-gilding.

    oil-heater
    ನಾಮವಾಚಕ
    ತೈಲಮಾಪಕ; ಎಣ್ಣೆಯನ್ನು ಇಂಧನವಾಗಿ ಬಳಸುವ ಹೀಟರು, ತಾಪಕ.

    oil-hole
    ನಾಮವಾಚಕ
    ಎಣ್ಣೆ ತೂತು; ತೈಲರಂಧ್ರ; ಯಂತ್ರಗಳಿಗೆ ಕೀಲೆಣ್ಣೆ ಹಾಕುವುದಕ್ಕಾಗಿ ಒದಗಿಸಿರುವ ತೂತು.

    oil-lamp
    ನಾಮವಾಚಕ
    ಎಣ್ಣೆ–ದೀಪ, ದೀವಿಗೆ; ತೈಲದೀಪ; ಎಣ್ಣೆಯನ್ನು ಇಂಧನವಾಗಿ ಬಳಸುವ ದೀಪ.

    oil-meal
    ನಾಮವಾಚಕ
    = oilcake.

    oil-nut
    ನಾಮವಾಚಕ
    ಎಣ್ಣೆಕಾಯಿ; ಎಣ್ಣೆ ಬೀಜವಿರುವ ಚಿಪ್ಪುಳ್ಳ ಕಾಯಿ.


    logo