(ಆಸ್ಟ್ರೇಲಿಯ) (ಸಾಮಾನ್ಯವಾಗಿ ಚಿಕ್ಕ ವಯಸ್ಸಿನ) ಬೀದಿಪುಂಡ; ಪೋಕರಿ; ಪೋಲಿ; ಗೂಂಡಾ; ಫಟಿಂಗ; ರೌಡಿ.
larrup
ಸಕರ್ಮಕ ಕ್ರಿಯಾಪದ
(ಆಡುಮಾತು) ಬಡಿ; ಚಚ್ಚು; ತದಕು; ಸದೆಬಡಿ.
Larry
ನಾಮವಾಚಕ
(as) happy as Larry (ಎಂಬ ನುಡಿಗಟ್ಟಿನಲ್ಲಿ ಪ್ರಯೋಗ) (ಆಡುಮಾತು) ತುಂಬ ಖುಷಿಯಾಗಿ; ಬಹಳ ಮಜವಾಗಿ.
larva
ನಾಮವಾಚಕ
ಲಾರ್ವ:
ಮರಿಹುಳು; ಮೊಟ್ಟೆಯಿಂದ ಹೊರಬಂದ ಬಳಿಕ ಗೂಡುಕಟ್ಟುವವರೆಗಿನ ಕೀಟದ ರೂಪ, ಉದಾಹರಣೆಗೆ ಕಂಬಳಿಹುಳು (caterpillar).
ತಾಯಿಯ ಗರ್ಭದಿಂದ ಯಾ ಮೊಟ್ಟೆಯಿಂದ ಹೊರಬಂದಾಗ, ಸಂಪೂರ್ಣ ಬೆಳೆದ ಸ್ಥಿತಿಗಿಂತ ಭಿನ್ನವಾಗಿದ್ದು, ಇನ್ನೂ ರೂಪಾಂತರ ಹೊಂದಲಿರುವ ಯಾ ರೂಪಾಂತರ ಹೊಂದುವುದಕ್ಕೆ ಮುಂಚಿನ ಅಪೂರ್ಣ ರೂಪ, ಉದಾಹರಣೆಗೆ ಕಪ್ಪೆಯ ಗೊದಮೊಟ್ಟೆ ಮರಿ, ಬಾಲದ ಮರಿ.
larval
ಗುಣವಾಚಕ
ಲಾರ್ವದ; ಲಾರ್ವಕ್ಕೆ ಸಂಬಂಧಿಸಿದ.
ಲಾರ್ವದಂಥ.
ಲಾರ್ವಸ್ಥಿತಿಯ.
larvi-
ಸಮಾಸ ಪೂರ್ವಪದ
ಲಾರ್ವದ, ಲಾರ್ವದಂಥ, ಲಾರ್ವಕ್ಕೆ ಸಂಬಂಧಿಸಿದ ಎಂಬರ್ಥಗಳಲ್ಲಿ ಬಳಸುವ ಸಮಾಸ ಪೂರ್ವಪದ.
larvicide
ನಾಮವಾಚಕ
ಲಾರ್ವನಾಶಕ; ಮರಿಹುಳು ನಾಶಕ; ಲಾರ್ವವನ್ನು ಕೊಲ್ಲಲು ಬಳಸುವ ಪದಾರ್ಥ.
laryngeal
ಗುಣವಾಚಕ
ಗಳಕುಹರದ; ಕಂಠ ಕುಹರದ; ಗಂಟಲಗೂಡಿನ; ದನಿಪೆಟ್ಟಿಗೆಯ, ಅದಕ್ಕೆ ಸಂಬಂಧಿಸಿದ, ಅದರ ಸಂಬಂಧದಲ್ಲಿ ಬಳಸುವ.
(ಧ್ವನಿವಿಜ್ಞಾನ) ಕಂಠಕುಹರಜನ್ಯ; ಗಂಟಲಗೂಡಿನ ದನಿಪೆಟ್ಟಿಗೆಯಿಂದ ಯಾ ಅದನ್ನು ಅಮುಕುವುದರಿಂದ ಉತ್ಪತ್ತಿಯಾಗುವ.
laryngeal
ನಾಮವಾಚಕ
(ಧ್ವನಿವಿಜ್ಞಾನ) ಕಂಠ ಕುಹರಧ್ವನಿ; ಗಂಟಲಿನ ದನಿಪೆಟ್ಟಿಗೆಯಿಂದ ಹೊರಡುವ, ಪ್ರಾಗಿಂಡೋಯೂರೋಪಿಯನ್ ಭಾಷೆಯಲ್ಲಿ ಇದ್ದಿತೆಂದು ಊಹಿಸಲಾಗಿರುವ ಒಂದು ಧ್ವನಿ ವಿಶೇಷ.