logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

electric clock
ನಾಮವಾಚಕ
ವಿದ್ಯುದ್ಗಡಿಯಾರ; ಕೀಲಿ ಕೊಡುವ ಅಗತ್ಯವಿಲ್ಲದೆ, ವಿದ್ಯುತ್ತಿನ ಸಹಾಯದಿಂದಲೇ ನಡೆಯುವ ಗಡಿಯಾರ.

electric cord
ನಾಮವಾಚಕ
(ಅಮೆರಿಕನ್‍ ಪ್ರಯೋಗ) ರಕ್ಷಾಹೊದಿಕೆಯುಳ್ಳ ವಿದ್ಯುತ್‍ ತಂತಿ; ದೀಪ ಮೊದಲಾದವುಗಳಿಗೆ ವಿದ್ಯುತ್ತನ್ನು ಒಯ್ಯುವ, ರಕ್ಷಾಹೊದಿಕೆ ಇರುವ, ಬಾಗಿಸಬಹುದಾದ ತಂತಿ.

electric current
ನಾಮವಾಚಕ
ವಿದ್ಯುತ್ಪ್ರವಾಹ; ವಿದ್ಯುತ್ತಿನ ಹರಿಯುವಿಕೆ; ಯಾವುದೇ ವಸ್ತುವಿನಲ್ಲಿ ಇಲೆಕ್ಟ್ರಾನುಗಳ ಪ್ರವಾಹ.

electric eel
ನಾಮವಾಚಕ
ವಿದ್ಯುತ್‍ಮೀನು; ವಿದ್ಯುತ್‍ ಉತ್ಪತ್ತಿಮಾಡಿ ವಿದ್ಯುದಾಘಾತ ಕೊಡಬಲ್ಲ, ಹಾವುಮೀನಿನಂಥ ಮೀನು.

electric eye
ನಾಮವಾಚಕ
(ಭೌತವಿಜ್ಞಾನ) ವಿದ್ಯುದಕ್ಷಿ; ವಿದ್ಯುನ್ನೇತ್ರ:
  • ದ್ಯುತಿವಿದ್ಯುತ್ಕೋಶ.
  • ರೇಡಿಯೋ ಮೊದಲಾದ ಉಪಕರಣಗಳಲ್ಲಿ ಬಳಸುವ ಪುಟ್ಟ ಕ್ಯಾತೋಡ್‍ ಕಿರಣ ನಳಿಕೆ.

  • electric fence
    ನಾಮವಾಚಕ
    ವಿದ್ಯುತ್‍ ಬೇಲಿ; ಮುಟ್ಟಿದಾಗ ಪ್ರಾಣಿಗಳಿಗೆ ಎಚ್ಚರಿಕೆಯಾಗಿ ಅಲ್ಪ ಆಘಾತ ಕೊಡಲು ವಿದ್ಯುತ್ತನ್ನು ಹರಿಸಿರುವ, ಕೆಲವೊಮ್ಮೆ ಒಂದೇ ಎಳೆಯಿರುವ, ತಂತಿಬೇಲಿ.

    electric field
    ನಾಮವಾಚಕ
    (ಭೌತವಿಜ್ಞಾನ) ವಿದ್ಯುತ್‍ಕ್ಷೇತ್ರ; ವಿದ್ಯುದಾವೇಶವಿರುವ ಯಾವುದೇ ಕಾಯವು ಯಾಂತ್ರಿಕ ಬಲವನ್ನು ಅನುಭವಿಸುವ ಪ್ರದೇಶ.

    electric fire
    ನಾಮವಾಚಕ
    ವಿದ್ಯುದಗ್ನಿ; ವಿದ್ಯುತ್ತಿನಿಂದ ಕೆಲಸಮಾಡುವ ಗೃಹಬಳಕೆಯ ಹೀಟರು.

    electric furnace
    ನಾಮವಾಚಕ
    ವಿದ್ಯುತ್ಕುಲುಮೆ; ವಿದ್ಯುತ್ತಿನ ಸಹಾಯದಿಂದ ಕಾಯಿಸುವ ಕುಲುಮೆ.

    electric guitar
    ನಾಮವಾಚಕ
    ವಿದ್ಯುತ್‍ಗಿಟಾರು; ಅಂತರ್ಧ್ವನಿವರ್ಧಕವನ್ನು ಹೊಂದಿರುವ ಗಿಟಾರ್‍ ವಾದ್ಯ.


    logo