logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

oil
ನಾಮವಾಚಕ ಪದಗುಚ್ಛ
  • ಎಣ್ಣೆ; ತೈಲ; ನೀರಿನಲ್ಲಿ ಕರಗದ, ನೀರಿನ ಮೇಲೆ ತೇಲುವ, ಆಲ್ಕಹಾಲ್‍, ಈಥರ್‍, ಬೆನ್ಸೀನ್‍, ಮೊದಲಾದ ಕಾರ್ಬನಿಕ ದ್ರಾವಕಗಳಲ್ಲಿ ಕರಗುವ, ಜಿಡ್ಡು ಸ್ವಭಾವದ, ರಾಸಾಯನಿಕವಾಗಿ ತಟಸ್ಥ ಗುಣದ, ಉರಿಯಬಲ್ಲ ದ್ರವ ಪದಾರ್ಥ ಯಾ ಸುಲಭವಾಗಿ ದ್ರವವಾಗುವ ಘನ ಪದಾರ್ಥ.
  • (ಅಮೆರಿಕನ್‍ ಪ್ರಯೋಗ) = petroleum.
  • (ಸಂಯುಕ್ತಪದಗಳಲ್ಲಿ) ಇಂಧನ; ಇಂಧನವಾಗಿ ಬಳಸುವ ಎಣ್ಣೆ: oil-lamp ಎಣ್ಣೆದೀಪ.
  • (ಸಾಮಾನ್ಯವಾಗಿ ಬಹುವಚನದಲ್ಲಿ)
    1. = oil-paint.
    2. (ಆಡುಮಾತು) ತೈಲ ವರ್ಣಚಿತ್ರ; ತೈಲ ವರ್ಣಚಿತ್ರಗಳನ್ನು ಬಳಸಿ ರಚಿಸಿದ ಚಿತ್ರ: his best oils are exhibited here ಇಲ್ಲಿ ಆತನ ಅತ್ಯುತ್ತಮ ತೈಲ ವರ್ಣಚಿತ್ರಗಳನ್ನು ಪ್ರದರ್ಶಿಸಲಾಗಿದೆ.
  • (ಬಹುವಚನದಲ್ಲಿ) = oilskin.
  • ಬೆಣ್ಣೆಮಾತು; ಮುಖಸ್ತುತಿ ಮಾಡುವ, ಪುಸಲಾಯಿಸುವ ಮಾತು.
  • (ಆಸ್ಟ್ರೇಲಿಯ ಮತ್ತು ನ್ಯೂಸಿಲಂಡ್‍)
    1. ಸುದ್ದಿ; ಸಮಾಚಾರ.
    2. ಸಂಗತಿಗಳು; ನಿಜಾಂಶಗಳು.

  • oil
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ ಪದಗುಚ್ಛ
  • (ಹೆರೆ ಪದಾರ್ಥವಾಗಿ) ಎಣ್ಣೆ ಹಾಕು.
  • ಎಣ್ಣೆ ಊಡಿಸು; ಎಣ್ಣೆಯಿಂದ ಸಂಸ್ಕರಿಸು.
  • (ಹಡಗು ಮೊದಲಾದವುಗಳಿಗೆ) ಇಂಧನವಾಗಿ ಎಣ್ಣೆ–ತುಂಬು, ಒದಗಿಸು.
  • (ಬೆಣ್ಣೆ, ಗ್ರೀಸು, ಮೊದಲಾದವನ್ನು) ಎಣ್ಣೆಯಾಗಿಸು; ಎಣ್ಣೆ ಮಾಡು; ಎಣ್ಣೆಯಂಥ ದ್ರವವಾಗಿ ಪರಿವರ್ತಿಸು.

  • oil bush
    ನಾಮವಾಚಕ
    ಎಣ್ಣೆ ಅಚ್ಚುಗಂಡಿ; ನೆಟ್ಟಗೆ ನಿಲ್ಲುವ ಕದಿರಿಗಾಗಿ (spindle) ಇರುವ, ಎಣ್ಣೆ ತುಂಬಿದ ಅಚ್ಚುಗಂಡಿ, ಕುಳಿ.

    oil drum
    ನಾಮವಾಚಕ
    ಎಣ್ಣೆ ಡ್ರಮ್ಮು; ಎಣ್ಣೆಯನ್ನು ಸಾಗಿಸಲು ಬಳಸುವ ಲೋಹದ ಪೀಪಾಯಿ, ಉರುಳೆಯಾಕಾರದ ಡಬ್ಬ.

    oil engine
    ನಾಮವಾಚಕ
    ಎಣ್ಣೆ–ಎಂಜಿನ್ನು, ಯಂತ್ರ; ಆವೀಕರಿಸಿದ ತೈಲ ಮತ್ತು ವಾಯುಗಳ ಮಿಶ್ರಣದ ನೆರವಿನಿಂದ ನಡೆಯುವ ಎಂಜಿನ್‍.

    oil rig
    ನಾಮವಾಚಕ
    ಎಣ್ಣೆಬಾವಿ ಯಂತ್ರ; ಎಣ್ಣೆಬಾವಿಯನ್ನು ತೋಡಲು ಬೇಕಾದ ಸಲಕರಣೆಗಳನ್ನು ಅಳವಡಿಸಿರುವ ಯಂತ್ರ.

    oil well
    ನಾಮವಾಚಕ
    ಪೆಟ್ರೋಲಿಯಂ (ಎಣ್ಣೆ ಸಿಗುವ) ಬಾವಿ; ತೈಲ ಬಾವಿ.

    oil-bird
    ನಾಮವಾಚಕ
    ಎಣ್ಣೆಹಕ್ಕಿ; ತೈಲ ಪಕ್ಷಿ; ಗ್ವಾಚರೋ; ದಕ್ಷಿಣ ಅಮೆರಿಕದ ಉತ್ತರ ಭಾಗದಲ್ಲಿ ಕಂಡುಬರುವ, ಬೆಣ್ಣೆಯ ಬದಲು ಉಪಯೋಗಿಸಬಹುದಾದ ಒಂದು ಬಗೆಯ ಎಣ್ಣೆಯನ್ನು ಕೊಡುವ, ರಾತ್ರಿಯ ವೇಳೆ ಬಾವಲಿಯಂತೆ ಪ್ರತಿಧ್ವನಿಯ ನೆರವಿನಿಂದ ಸಂಚರಿಸುವ ಗ್ವಾಚರೊ ಎಂಬ ಗೂಬೆಯ ಬಳಗದ ಹಕ್ಕಿ.

    oil-coat
    ನಾಮವಾಚಕ
    ಮೇಣಗಪಟದ ಅಂಗಿ; (ಮಳೆಯಲ್ಲಿ ತೊಯ್ಯದಿರುವಂತೆ ಯಾ ನೆನೆಯದಿರುವಂತೆ ಧರಿಸಬಹುದಾದ) ಮೇಣಗಪಟದಿಂದ ತಯಾರಿಸಿದ ಕೋಟು.

    oil-colour
    ನಾಮವಾಚಕ
    = oil-paint.


    logo