logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

mandatorily
ಕ್ರಿಯಾವಿಶೇಷಣ
  • ಆಜ್ಞೆ ಕೊಡುವಂತೆ.
  • ಕಡ್ಡಾಯವಾಗಿ.

  • mandatory
    ಗುಣವಾಚಕ
  • ಆಜ್ಞೆಯ; ಆಜ್ಞೆ ಕೊಡುವ; ಆಜ್ಞಾಪಕ.
  • ಕಡ್ಡಾಯವಾದ; ನಿರ್ಬಂಧಕವಾದ.

  • mandatory
    ನಾಮವಾಚಕ
    = mandatary.

    mandible
    ನಾಮವಾಚಕ
    (ಅಂಗರಚನಾಶಾಸ್ತ್ರ) ಮ್ಯಾಂಡಿಬಲ್‍:
  • (ಮುಖ್ಯವಾಗಿ ಕೆಳ) ಹನ್ವಸ್ಥಿ; ಸಸ್ತನಿಗಳಲ್ಲಿ ಮತ್ತು ಮೀನುಗಳಲ್ಲಿ (ಮುಖ್ಯವಾಗಿ ಕೆಳ) ದವಡೆಯ ಮೂಳೆ.
  • ಹಕ್ಕಿಯ ಮೇಲು ಕೊಕ್ಕು ಯಾ ಕೆಳ ಕೊಕ್ಕು; ಕೊಕ್ಕಿನ ಮೇಲ್ಭಾಗ ಯಾ ಕೆಳಭಾಗ.
  • (ಜೇಡ ಮೊದಲಾದ) ಸಂಧಿಪದಿಗಳ ಬಾಯಿಯಲ್ಲಿಯ ಅರೆಯುವ ಅಂಗಗಳಲ್ಲೊಂದು.

  • mandibular
    ಗುಣವಾಚಕ
    ಮ್ಯಾಂಡಿಬಲ್‍ನ; ದವಡೆ ಮೂಳೆಯ, ಅದಕ್ಕೆ ಸಂಬಂಧಿಸಿದ, ಯಾ ಅದರ ಹತ್ತಿರ ಇರುವ.

    mandibulate
    ಗುಣವಾಚಕ
    ಮ್ಯಾಂಡಿಬಲ್‍ ಉಳ್ಳ; ದವಡೆ ಮೂಳೆಯುಳ್ಳ.

    mandola
    ನಾಮವಾಚಕ
    ಮ್ಯಾಂಡೋಲ; ಒಂದು ಬಗೆಯ ಮ್ಯಾಂಡೊಲಿನ್‍ ವಾದ್ಯ.

    mandolin
    ನಾಮವಾಚಕ
    ಮ್ಯಾಂಡಲಿನ್‍; ಜೋಡಿಜೋಡಿಯಾದ ತಂತಿಗಳುಳ್ಳ, ಕೊಂಬು ಮೊದಲಾದವುಗಳ ಗೋಟಿನಿಂದ ಮೀಟಿ ನುಡಿಸುವ, ಲ್ಯೂಟ್‍ ಜಾತಿಯ ವಾದ್ಯ.

    mandoline
    ನಾಮವಾಚಕ
    = mandolin.

    mandolinist
    ನಾಮವಾಚಕ
    ಮ್ಯಾಂಡಲಿನ್‍ ವಾದಕ.


    logo