logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

largo
ನಾಮವಾಚಕ
(ಸಂಗೀತ) ವಿಳಂಬ ಗಂಭೀರ – ನಡೆ, ನಿರೂಪಣೆ; ವಿಳಂಬಕಾಲದಲ್ಲಿ ವಿಸ್ತಾರವಾಗಿ ಗಂಭೀರ ಶೈಲಿಯಲ್ಲಿ ಮಾಡುವ ನಿರೂಪಣೆ.

lariat
ನಾಮವಾಚಕ
  • = 1lasso.
  • ಕಟ್ಟು ಹಗ್ಗ; ಕುದುರೆ ಮೊದಲಾದವನ್ನು ಕಟ್ಟಿಹಾಕುವ (ಮುಖ್ಯವಾಗಿ ದನಕಾಯುವವರು ಬಳಸುವ) ಹಗ್ಗ.

  • lark
    ನಾಮವಾಚಕ ನುಡಿಗಟ್ಟು
    ಲಾರ್ಕ್‍:
  • ಮರಳಿನಂಥ ಕಂದುಬಣ್ಣದ ಗರಿಗಳುಳ್ಳ, ಕಾಲಿನ ಹಿಂದೆ ಉದ್ದವಾದ ಉಗುರುಗಳುಳ್ಳ, ಅಲಾಡಿಡೇ ವಂಶಕ್ಕೆ ಸೇರಿದ, ರಾಗವಾಗಿ ಹಾಡುವ ಒಂದು ಚಿಕ್ಕ ಪಕ್ಷಿ (ಮುಖ್ಯವಾಗಿ skylark ಬಾನಾಡಿ).
  • ಬೇರೆ ವಂಶಕ್ಕೆ ಸೇರಿದ ಇತರ ಕೆಲವು ಹಕ್ಕಿಗಳು: meadowlark, titlark.

  • lark
    ನಾಮವಾಚಕ
    (ಆಡುಮಾತು)
  • ಕುಣಿದಾಟ; ನಲಿದಾಟ; ಮಜಾ; ಮೋಜು: what a lark! ಎಂಥ ತಮಾಷೆ! ಎಷ್ಟು ಮಜಾ!
  • ಮೋಜಿನ ಪ್ರಸಂಗ; ವಿನೋದಕರ ಘಟನೆ.
  • ಹಾಸ್ಯ; ಜೋಕು; ತಮಾಷೆ.
  • (ಬ್ರಿಟಿಷ್‍ ಪ್ರಯೋಗ) (ಯಾವುದೇ ಬಗೆಯ) ಚಟುವಟಿಕೆ, ಕೆಲಸ, ಮೊದಲಾದವು: fed up with his digging lark ಅವನ ಅಗೆಯುವ ಕೆಲಸ ನನಗೆ ಚಿಟ್ಟು ಹಿಡಿಸಿದೆ.

  • lark
    ಅಕರ್ಮಕ ಕ್ರಿಯಾಪದ
    (ಆಡುಮಾತು) ಕುಣಿದಾಡು; ನಲಿದಾಡು; ಮಜಾ ಮಾಡು.

    lark-heel
    ನಾಮವಾಚಕ
  • ಬಾನಾಡಿಪಾದಿ; ಕಿತ್ತಳೆ ಬಣ್ಣದ ಅಂದವಾದ ಹೂಬಿಡುವ, ಕುದುರೆ ಸವಾರನು ಕಾಲಿನ ಹಿಮ್ಮಡಿಗೆ ತೊಡುವ, ಮುಳ್ಳುಗಾಲಿಯಂಥ ಪುಷ್ಪಪಾತ್ರವಿರುವ, ಉದ್ಯಾನಗಳಲ್ಲಿ ಬೆಳೆಸುವ ಕಸ್ತೂರಿ ಬಳಗದ ಒಂದು ಬಳ್ಳಿ.
  • ಕಾಡುಸಾಸಿವೆ; ತಿನ್ನಬಹುದಾದ, ಕಟುರುಚಿಯ ಎಲೆಗಳುಳ್ಳ, ಭಾರತದಲ್ಲಿ ಬೆಳೆಯುವ ಒಂದು ಸಸ್ಯಜಾತಿ.

  • larkiness
    ನಾಮವಾಚಕ
    ಮೋಜು ಸ್ವಭಾವ; ನಲಿದಾಡುವಿಕೆ; ಮಜಾ ಮಾಡುವಿಕೆ.

    larkspur
    ನಾಮವಾಚಕ
    = lark-heel.

    larky
    ಗುಣವಾಚಕ
    ಕುಣಿದಾಟದ; ನಲಿದಾಟದ; ಮೋಜಿನ; ಮಜಾ ಕೊಡುವ; ವಿನೋದಕರ.

    larn
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಆಡುಮಾತು ಯಾ ಹಾಸ್ಯ ಪ್ರಯೋಗ) ಕಲಿಸು; that’ll larn you ಅದು ನಿನಗೆ ಕಲಿಸುತ್ತದೆ. (ಆಡುಮಾತು ಮತ್ತು ಯಾ ಹಾಸ್ಯ ಪ್ರಯೋಗ) ಕಲಿ.


    logo