logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

imperforate
ಗುಣವಾಚಕ
  • ನೀರಂಧ್ರ; ರಂಧ್ರರಹಿತ; ತೂತಿಲ್ಲದ; ರಂಧ್ರ ಮಾಡಿಲ್ಲದ; ತೂತು ಕೊರೆಯದಿರುವ.
  • (ಅಂಗರಚನಾಶಾಸ್ತ್ರ) ನಿರ್ದ್ವಾರ; ನೀರಂಧ್ರ; ತೂತಿಲ್ಲದ; ರಂಧ್ರ ರಹಿತ; ಸಹಜ ದ್ವಾರವಿಲ್ಲದ.
  • (ಅಂಚೆ ಚೀಟಿಯ ಯಾ ಅದರ ಹಾಳೆಗಳ ವಿಷಯದಲ್ಲಿ) ಸಾಲು ತೂತು, ಸಾಲು ರಂಧ್ರ – ಇರದ, ಮಾಡಿರದ.

  • imperial
    ಗುಣವಾಚಕ
  • ಸಾಮ್ರಾಜ್ಯದ; ಸಾಮ್ರಾಜ್ಯಶಾಹಿ; ಚಕ್ರಾಧಿಪತ್ಯದ; ಸಾರ್ವಭೌಮ; ಸಾಮ್ರಾಜ್ಯದಂತಸ್ತಿನ ಸ್ವತಂತ್ರ ರಾಷ್ಟ್ರದ.
  • (ಚರಿತ್ರೆ) ಬ್ರಿಟಿಷ್‍ ಸಾಮ್ರಾಜ್ಯದ.
  • ಚಕ್ರವರ್ತಿಯ; ಸಾರ್ವಭೌಮನ; ಸಮ್ರಾಟನ.
  • ಪರಮಾಧಿಕಾರವುಳ್ಳ.
  • ಪ್ರತಿಷ್ಠೆಯುಳ್ಳ; ಠೀವಿಯುಳ್ಳ; ಘನತೆಯುಳ್ಳ.
  • ಅತ್ಯಂತ ವೈಭವದ.
  • (ಅಳತೆ ತೂಕಗಳ ವಿಷಯದಲ್ಲಿ) ಬ್ರಿಟನ್ನಿನ; ಕಾಯಿದೆ ಮೂಲಕ ಬ್ರಿಟನ್ನಿನಲ್ಲಿ ಜಾರಿಯಲ್ಲಿರುವ: imperial gallon, acre.
  • (ಕಾಗದದ ವಿಷಯದಲ್ಲಿ) ಇಂಪೀರಿಯಲ್‍; ಬ್ರಿಟನ್ನಿನಲ್ಲಿ $762\times 559$ ಯಾ ಅಮೆರಿಕದಲ್ಲಿ $787\times 584$ ಮಿಲಿಈಟರ್‍ ಅಳತೆಯ.

  • imperial
    ನಾಮವಾಚಕ
  • (ಕೆಳದುಟಿಯ ಕೆಳಗಿನ) ಗಲ್ಲದ ಗಡ್ಡ; ಕೆಳದುಟಿಯ ಕೆಳಗೆ ಗಲ್ಲದ ಮೇಲೆ ಮಾತ್ರ ಚೂಪಾಗಿ ಬೆಳೆಯುವಂತೆ ಬಿಟ್ಟ ಗಡ್ಡ ಯಾ ಗಡ್ಡದ ಭಾಗ.
  • (ಪ್ರಾಚೀನ ಪ್ರಯೋಗ) (ಕೋಚ್‍ ಬಂಡಿಯ ಚಾವಣಿಯ ಮೇಲಣ) ಸಾಮಾನುಖಾನೆ. Figure: imperial-2
  • ಇಂಪೀರಿಯಲ್‍; ಹದಿನೈದು ಬೆಳ್ಳಿಯ ರೂಬಲ್‍ಗಳಿಗೆ ಸಮನಾದ, ರಷ್ಯಾದ ಸಾರ್‍ ಚಕ್ರವರ್ತಿಯ ಕಾಲದ ಒಂದು ಚಿನ್ನದ ನಾಣ್ಯ.
  • (ಕಾಗದದ ವಿಷಯದಲ್ಲಿ) ಇಂಪೀರಿಯಲ್‍ ಸೈಜು; ಬ್ರಿಟನ್ನಿನಲ್ಲಿ $762\times 559$ ಯಾ ಅಮೆರಿಕದಲ್ಲಿ $787\times 584$ ಮಿಲಿಈಟರ್‍ ಅಳತೆ.

  • imperial preference
    ನಾಮವಾಚಕ
    ಸಾಮ್ರಾಜ್ಯೀಯ ಸವಲತ್ತು; ಬ್ರಿಟಿಷ್‍ ಸಾಮ್ರಾಜ್ಯದ ಹೊರಗಣ ದೇಶಗಳ ಸರಕುಗಳ ಮೇಲೆ ಹಾಕುವುದಕ್ಕಿಂತಲೂ ಬ್ರಿಟಿಷ್‍ ಸಾಮ್ರಾಜ್ಯದ ರಾಷ್ಟ್ರಗಳಿಂದ ಬಂದ ಆಮದುಗಳ ಮೇಲೆ ಕಡಿಮೆ ಸುಂಕ ಹಾಕುವ ನೀತಿ.

    imperialism
    ನಾಮವಾಚಕ
  • (ಮುಖ್ಯವಾಗಿ ನಿರಂಕುಶವಾದ) ಸಾರ್ವಭೌಮತ್ವ; ಚಕ್ರವರ್ತಿ ಪ್ರಭುತ್ವ; ಸಾಮ್ರಾಜ್ಯಶಾಹಿ.
  • (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಸಾಮ್ರಾಜ್ಯಶಾಹಿ ವಿಸ್ತರಣ; ಎಲ್ಲಿ ವ್ಯಾಪಾರಕ್ಕೆ ಬ್ರಿಟಿಷರ (ಧ್ವಜ) ರಕ್ಷಣೆ ಬೇಕಾಗಿದೆಯೊ ಅಲ್ಲಿಗೆ ಚಕ್ರವರ್ತಿಯ ಆಜ್ಞಾನುಸಾರ ಬ್ರಿಟಿಷ್‍ ಸಾಮ್ರಾಜ್ಯ ವಿಸ್ತರಿಸುವಿಕೆ.
  • (ಬ್ರಿಟಿಷ್‍ ಪ್ರಯೋಗ) (ಚರಿತ್ರೆ) ಸಾಮ್ರಾಜ್ಯ ಸಂಘಟನೆ; ಯುದ್ಧದಂಥ ರಕ್ಷಣಾ ಕಾರ್ಯಗಳು, ಸಾಮ್ರಾಜ್ಯದ ಆಂತರಿಕ ವಾಣಿಜ್ಯ, ಮೊದಲಾದವಕ್ಕಾಗಿ ಬ್ರಿಟಿಷ್‍ ಸಾಮ್ರಾಜ್ಯದ ವಿವಿಧ ವಸಾಹತುಗಳ ಸಂಘಟನೆ.
  • (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಸಾಮ್ರಾಜ್ಯತತ್ತ್ವ; ಸಾಮ್ರಾಜ್ಯಶಾಹಿ; ವಸಾಹತುಗಳನ್ನು ಮತ್ತು ಆಶ್ರಿತ ರಾಜ್ಯಗಳನ್ನು ಗಳಿಸಬೇಕೆಂಬ ತತ್ತ್ವ.
  • (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ವಸಾಹತು ಗಳಿಕೆ, ಸಂಪಾದನೆ; ವಸಾಹತು ಮತ್ತು ಆಶ್ರಿತ ರಾಜ್ಯಗಳನ್ನು ಸಂಪಾದಿಸುವುದು.
  • ಪ್ರಭಾವ ವಿಸ್ತರಣೆ; ವ್ಯಾಪಾರ, ರಾಯಭಾರ, ಮೊದಲಾದವುಗಳ ಮೂಲಕ ಒಂದು ದೇಶ ತನ್ನ ಪ್ರಭಾವವನ್ನು ಇತರರ ಮೇಲೆ ಬೀರುವುದು.

  • imperialist
    ನಾಮವಾಚಕ
  • (ಮುಖ್ಯವಾಗಿ 1600 – 1800 ಅವಧಿಯ ಜರ್ಮನಿಯ) ಚಕ್ರವರ್ತಿಯ ಅನುಯಾಯಿ.
  • ಸಾಮ್ರಾಜ್ಯವಾದಿ:
    1. ಚಕ್ರವರ್ತಿಯ ಆಳ್ವಿಕೆ ಬೇಕೆಂದು ವಾದಿಸುವವನು (ಮುಖ್ಯವಾಗಿ ನೆಪೋಲಿಯನ್‍ ಬೋನಪಾರ್ಟ್‍ನ ವಂಶಾಭಿಮಾನಿ).
    2. (ಮುಖ್ಯವಾಗಿ) ಬ್ರಿಟನ್ನಿನ ಯಾ ಅಮೆರಿಕದ ಸಾಮ್ರಾಜ್ಯಶಾಹಿಯ ಪ್ರತಿಪಾದಕ ಯಾ ಸಹಾಯಕ.

  • imperialistic
    ಗುಣವಾಚಕ
  • ಸಾಮ್ರಾಜ್ಯವಾದಿಯ; ಸಾಮ್ರಾಜ್ಯಶಾಹಿಯ.
  • ಸಾಮ್ರಾಜ್ಯವಾದಿಯಂಥ; ಸಾಮ್ರಾಜ್ಯಶಾಹಿಯಂಥ; ಸಾಮ್ರಾಜ್ಯಶಾಹಿಗೆ ಯಾ ಸಾಮ್ರಾಜ್ಯವಾದಿಗೆ ಸಂಬಂಧಿಸಿದ.

  • imperialize
    ಸಕರ್ಮಕ ಕ್ರಿಯಾಪದ
    ಸಾಮ್ರಾಜ್ಯಶಾಹಿಗೆ ಒಳಪಡಿಸು; ಸಾಮ್ರಾಜ್ಯದ ಆಳ್ವಿಕೆಗೆ ಸೇರಿಸು: Napoleon’s scheme for imperializing Mexico ಮೆಕ್ಸಿಕೋವನ್ನು ಸಾಮ್ರಾಜ್ಯದಾಳ್ವಿಕೆಗೆ ಸೇರಿಸುವ ನೆಪೋಲಿಯನ್ನನ ಯೋಜನೆ.

    imperially
    ಕ್ರಿಯಾವಿಶೇಷಣ
  • ಸಾರ್ವಭೌಮನಂತೆ; ಚಕ್ರವರ್ತಿಯಂತೆ; ಚಕ್ರವರ್ತಿಯ ಹಾಗೆ.
  • ಠೀವಿಯಿಂದ; ಪ್ರತಿಷ್ಠೆಯಿಂದ.
  • ವೈಭವದಿಂದ.
  • ನಿರಂಕುಶವಾಗಿ; ದರ್ಪದಿಂದ.
  • ಸಾಮ್ರಾಜ್ಯಕ್ಕೆ ಸೇರಿದಂತೆ, ಸಂಬಂಧಿಸಿದಂತೆ.

  • imperil
    ಸಕರ್ಮಕ ಕ್ರಿಯಾಪದ
    ಅಪಾಯಕ್ಕೆ ಈಡುಮಾಡು, ಗುರಿಪಡಿಸು; ಗಂಡಾಂತರಕ್ಕೊಳಪಡಿಸು; ಕೇಡು ತರು; ವಿಪತ್ತಿಗೆ ಸಿಕ್ಕಿಸು.


    logo