logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Electra complex
ನಾಮವಾಚಕ
(ಮನಶ್ಶಾಸ್ತ್ರ) ಎಲೆಕ್ಟ್ರ ಪ್ರತ್ತಿ; ಮಗಳಲ್ಲಿ ತಂದೆಯನ್ನು ಕಂಡರೆ ಲೈಂಗಿಕ ಆಕರ್ಷಣೆಯೂ ತಾಯಿಯನ್ನು ಕಂಡರೆ ದ್ವೇಷವೂ ಸುಪ್ತವಾಗಿ ಇರುವ ಮನೋಭಾವ.

electress
ನಾಮವಾಚಕ
  • ಚುನಾಯಕಿ; ಮತದಾರಿಣಿ.
  • (ಚರಿತ್ರೆ) (Electress) ಜರ್ಮನ್‍ ಚುನಾಯಕನ ಹೆಂಡತಿ.

  • electret
    ನಾಮವಾಚಕ
    ವಿದ್ಯುದ್ಯುಗ್ಮ; ಇಲೆಕ್ಟ್ರೆಟ್‍; (ಕಾಂತದಲ್ಲಿರುವಂತೆ) ಧನ ಮತ್ತು ಋಣ ವಿದ್ಯುತ್‍ ಶಾಶ್ವತವಾಗಿ ಪ್ರತ್ಯೇಕಗೊಂಡಿರುವ ಯಾವುದೇ ನಿರೋಧಕ ಕಾಯದ ತುಂಡು.

    electric
    ಗುಣವಾಚಕ
  • ವಿದ್ಯುತ್ತಿನ; ವಿದ್ಯುತ್ತುಳ್ಳ.
  • ವಿದ್ಯುಜ್ಜನಕ.
  • ವಿದ್ಯುಜ್ಜನ್ಯ.
  • ವಿದ್ಯುದ್ವಾಹಕ.
  • ವಿದ್ಯುಚ್ಚಾಲಿತ: electric bell ವಿದ್ಯುತ್‍ಚ್ಚಾಲಿತ ಗಂಟೆ.
  • ವಿದ್ಯುತ್ತಿನಂಥ; ವಿದ್ಯುತ್ತಿನಿಂದ ಉಂಟಾದುದೋ ಎಂಬಂತೆ, ಹಠಾತ್‍ ಉದ್ರೇಕಕಾರಿಯಾದ; ಉದ್ವೇಗಕಾರಿಯಾದ: electric effect ವಿದ್ಯುತ್ತಿನಂಥ ಪರಿಣಾಮ.

  • electric
    ನಾಮವಾಚಕ
  • ವಿದ್ಯುದ್ವಸ್ತು; ತಿಕ್ಕಿ ವಿದ್ಯುತ್ತನ್ನು ಉತ್ಪತ್ತಿ ಮಾಡಬಹುದಾದಂತಹ ಪದಾರ್ಥ (ರಾಳ, ಗಾಜು, ಮೊದಲಾದವು).
  • ವಿದ್ಯುನ್ಮಂಡಲ, ದೀಪ, ಮೋಟಾರು ಕಾರು, ಮೊದಲಾದವು.
  • (ಬಹುವಚನದಲ್ಲಿ) ವಿದ್ಯುತ್‍ ಉಪಕರಣಗಳು.

  • electric blanket
    ನಾಮವಾಚಕ
    ವಿದ್ಯುತ್ಕಂಬಳಿ; ವಿದ್ಯುತ್ತಿನಿಂದ ಬೆಚ್ಚಗಿಟ್ಟಿರುವ ಹೊದಿಕೆ.

    electric blue
    ಗುಣವಾಚಕ
    ಉಕ್ಕುನೀಲಿ; ಉಕ್ಕಿನಂತೆ ನಸುನೀಲಿ ಬಣ್ಣದ.

    electric cell
    ನಾಮವಾಚಕ
    ವಿದ್ಯುತ್ಕೋಶ; ವಿದ್ಯುತ್ತನ್ನು ಸಂಗ್ರಹಿಸುವ ಕೋಶ.

    electric chair
    ನಾಮವಾಚಕ
    ವಿದ್ಯುತ್ಕುರ್ಚಿ:
  • ಮರಣದಂಡನೆಗೆ ಗುರಿಯಾದವರನ್ನು ಕೂರಿಸಿ ವಿದ್ಯುತ್ತಿನಿಂದ ಕೊಲ್ಲುವ ಕುರ್ಚಿ.
  • ಈ ಶಿಕ್ಷೆ.

  • electric charge
    ನಾಮವಾಚಕ
    (ಭೌತವಿಜ್ಞಾನ) ವಿದ್ಯುದಾವೇಶ; ವಿದ್ಯುತ್ಸಂಚಯ; ವಿದ್ಯುದಂಶ; ನಿರ್ದಿಷ್ಟ ಸ್ಥಳದಲ್ಲಿ ಇಲೆಕ್ಟ್ರಾನುಗಳ ಹೇರಳತೆಯಿಂದ ಯಾ ಕೊರತೆಯಿಂದ ಉಂಟಾಗುವ ಋಣ ಯಾ ಧನ ವಿದ್ಯುತ್‍.


    logo