logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

candle-ends
ನಾಮವಾಚಕ
  • (ಉರಿದ ಮೇಲೆ ಉಳಿಯುವ) ಮೋಂಬತ್ತಿ–ತುಂಡುಗಳು, ಚೂರುಗಳು.
  • (ಜಿಪುಣರು ಕೂಡಿಹಾಕಿದ) ಚಿಲ್ಲರೆ ಪಲ್ಲರೆ; ತುಂಡುಪಂಡು; ಚೂರುಪಾರು.

  • candle-light
    ನಾಮವಾಚಕ
  • ಮೋಂಬತ್ತಿ ಬೆಳಕು.
  • (ಮಂದವಾದ) ಕೃತಕ ಬೆಳಕು.
  • ಸಂಜೆ; ಮುಚ್ಚಂಜೆ; ದೀಪ ಹಚ್ಚುವ ಹೊತ್ತು.

  • candle-tree
    ನಾಮವಾಚಕ
  • =candleberry-tree.
  • ಮೋಂಬತ್ತಿಮರ; ಮೋಂಬತ್ತಿಯಂಥ, ಹಳದಿ ಬಣ್ಣದ ಉದ್ದಕಾಯಿ ಬಿಡುವ, ಪನಾಮ ದೇಶದ ಒಂದು ಮರ.

  • candleberry-myrtle
    ನಾಮವಾಚಕ
    ಮೋಂಬತ್ತಿಹಣ್ಣಿನ ಗಿಡ; ಮೋಂಬತ್ತಿ ಮಾಡಲು ಬಳಸುವ ಮೇಣ ಮತ್ತು ಎಣ್ಣೆ ನೀಡುವ, ಮರದಂಪಟ್ಟೆ ಕುಲಕ್ಕೆ ಸೇರಿದ, ಉತ್ತರ ಅಮೆರಿಕದ ಒಂದು ಬಗೆಯ ಕುರುಚಲು ಗಿಡ.

    candleberry-tree
    ನಾಮವಾಚಕ
    ನಾಡು ಅಕ್ರೋಟು; ಅಲ್ಯುರೈಟಿಸ್‍ ಟ್ರಿಲೋಬ ಮರ; ಮೋಂಬತ್ತಿ ತಯಾರಿಸಲು ಬಳಸುವಂಥ ಕಾಯಿ ಬಿಡುವ, ಒಂದು ಬಗೆಯ ಉಷ್ಣವಲಯದ ಮರ.

    Candlemas
    ನಾಮವಾಚಕ
    ಹೆಬ್ರವರಿ 2 ರಂದು ಕ್ರೈಸ್ತರು ಆಚರಿಸುವ, ಮೇರಿ ಕನ್ನಿಕೆಯ ಶುದ್ಧೀಕರಣ ಹಬ್ಬ.

    candlepower
    ನಾಮವಾಚಕ
    (ಭೌತವಿಜ್ಞಾನ) (ಕ್ಯಾಂಡಲ್‍ ಎಂಬ ಏಕಮಾನಗಳಲ್ಲಿ ಅಳೆಯುವ) ಪ್ರಕಾಶತೀವ್ರತೆ; ಕ್ಯಾಂಡಲ್‍ ಶಕ್ತಿ.

    candlestick
    ನಾಮವಾಚಕ
    ಮೋಂಬತ್ತಿ ಕಂಬ; ಮೋಂಬತ್ತಿಪೀಠ; (ಸಾಮಾನ್ಯವಾಗಿ ಒಂದು) ಮೋಂಬತ್ತಿ ಇಡಲು ಅನುಕೂಲವಾಗುವಂತೆ ಕುಳಿ ಯಾ ಚೂಪು ಮೊನೆ ಉಳ್ಳ ಕಂಬ.

    candlewick
    ನಾಮವಾಚಕ
  • ಮೋಂಬತ್ತಿಯ ಬತ್ತಿ.
  • ಕಸೂತಿಕೆಲಸಕ್ಕೆ ಬಳಸುವ ದಪ್ಪನೂಲು.
  • ಈ ನೂಲಿನಿಂದ ಕುಚ್ಚುಕುಚ್ಚಾಗಿ ಮಾಡಿದ ಕಸೂತಿಕೆಲಸ.

  • candor
    ನಾಮವಾಚಕ
    (ಅಮೆರಿಕನ್‍ ಪ್ರಯೋಗ) =candour.


    logo