logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

bank holiday
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಬ್ಯಾಂಕ್‍ ರಜ; ಕಾನೂನುಬದ್ಧವಾಗಿ ಬ್ಯಾಂಕ್‍ಗಳನ್ನು ಮುಚ್ಚುವ ದಿನ (ಬ್ರಿಟನ್ನಿನಲ್ಲಿ ಸಾಮಾನ್ಯವಾಗಿ ಸಾರ್ವಜನಿಕ ರಜೆಯ ದಿನ ಸಹ).

bank manager
ನಾಮವಾಚಕ
ಬ್ಯಾಂಕ್‍ ಮ್ಯಾನೇಜರು; ಬ್ಯಾಂಕಿನ ಸ್ಥಳೀಯ ಶಾಖೆಯ ಮೇಲ್ವಿಚಾರಕ ಯಾ ಕಾರ್ಯನಿರ್ವಾಹಕ.

Bank Rate
ನಾಮವಾಚಕ
(ಬ್ರಿಟಿಷ್‍ ಪ್ರಯೋಗ) ಬ್ಯಾಂಕ್‍ – ದರ, ವಟ್ಟ, ಸೋಡಿ; ಹುಂಡಿಗಳಿಗೆ ಹಣ ಕೊಡಲು ಬ್ಯಾಂಕಿನವರು ಗೊತ್ತುಮಾಡಿರುವ ಕನಿಷ್ಠ ಮಟ್ಟದ ಯಾ ಸೋಡಿಯ ದರ.

bank-bill
ನಾಮವಾಚಕ
  • (ಬ್ರಿಟಿಷ್‍ ಪ್ರಯೋಗ) ಬ್ಯಾಂಕ್‍ – ಹುಂಡಿ, ಬಿಲ್ಲು; ಒಂದು ಬ್ಯಾಂಕು ಇನ್ನೊಂದು ಬ್ಯಾಂಕಿಗೆ ಕೊಡುವ ಡ್ರಾಹ್ಟ್‍.
  • (ಅಮೆರಿಕನ್‍ ಪ್ರಯೋಗ) = banknote.

  • bank-book
    ನಾಮವಾಚಕ
    ಬ್ಯಾಂಕ್‍ಬುಕ್ಕು; ಪಾಸ್‍ಬುಕ್ಕು; ಬ್ಯಾಂಕ್‍, ವಹಿವಾಟು – ಪುಸ್ತಕ; ಠೇವಣಿದಾರನ ಹಣದ ಲೆಕ್ಕವನ್ನು ನಮೂದಿಸಿರುವ ಬ್ಯಾಂಕಿನ ಪುಸ್ತಕ.

    bankable
    ಗುಣವಾಚಕ
  • (ಆಧಾರ ಪತ್ರಗಳು ಮೊದಲಾದವುಗಳ ವಿಷಯದಲ್ಲಿ) (ಬ್ಯಾಂಕಿನಲ್ಲಿ) ಸ್ವೀಕಾರ ಯೋಗ್ಯವಾದ; ಬ್ಯಾಂಕ್‍ ವ್ಯವಹಾರ ಯೋಗ್ಯವಾದ.
  • (ರೂಪಕವಾಗಿ) ನಂಬಬಹುದಾದ; ನೆಚ್ಚಬಹುದಾದ; ನಂಬಲರ್ಹ; ಶ್ರದ್ಧಾರ್ಹ.

  • banker
    ನಾಮವಾಚಕ ನುಡಿಗಟ್ಟು
    let me be your banker ನಿನಗೆ ಬೇಕಾದ ಹಣವನ್ನು ಸಾಲ ಕೊಡುತ್ತೇನೆ; ನಿನ್ನ ಬ್ಯಾಂಕರ್‍ ಆಗಿರಲು (ಬೇಕಾದ ಹಣವನ್ನು ಸಾಲಕೊಡಲು) ಅವಕಾಶಕೊಡು.
  • ಬ್ಯಾಂಕರು; ಖಾಸಗಿ ಬ್ಯಾಂಕಿನ ಮಾಲೀಕ ಯಾ ಪಾಲುದಾರ.
  • ಬ್ಯಾಂಕರು; ಬ್ಯಾಂಕಿನ ಆಡಳಿತಗಾರ, ನಿರ್ದೇಶಕ, ಚಾಲಕ, ಮೊದಲಾದವರು.
  • (ಜೂಜಿನಲ್ಲಿ) ಬ್ಯಾಂಕುಗಾರ; ಜೂಜಿನ ಹಣವನ್ನು ಇಟ್ಟುಕೊಂಡಿರುವವನು.
  • (ಕೆಲವು ಅದೃಷ್ಟದಾಟಗಳಲ್ಲಿ) ಹಂಚಿಕೆಗಾರ.
  • ಇಸ್ಪೀಟುಜೂಜು.
  • (ಒಂದು ಚೀಟಿಯಲ್ಲಿ ನಮೂದಿಸಿರುವ ಅನೇಕ ಪಂದ್ಯಗಳನ್ನೊಳಗೊಂಡಿರುವ ಹುಟ್‍ಬಾಲ್‍ ಸರಣಿಯಲ್ಲಿ) ಸರಿಯಾಗಿ ಮುನ್ನುಹಿಸಿದ (ಪಂದ್ಯಗಳ) ಫಲಿತಾಂಶ.

  • banker
    ನಾಮವಾಚಕ
    (ಬ್ರಿಟಿಷ್‍ ಪ್ರಯೋಗ)
  • (ಪೂರ್ವದೇಶಗಳಲ್ಲಿ) ಕೆಲಸಗಾರ; ಕಾಮಾಟಿ.
  • ಹಾರು ಕುದುರೆ; ಬೇಟೆಯಲ್ಲಿ ಒಂದೇ ಸಲಕ್ಕೆ ದಾಟಲಾಗದ ದಿಣ್ಣೆಗಳ ಮೇಲಕ್ಕೆ ನೆಗೆದು, ಮತ್ತೆ ಅಲ್ಲಿಂದ ಕೆಳಕ್ಕೆ ನೆಗೆಯುವ ಕುದುರೆ.

  • banker
    ನಾಮವಾಚಕ
    (ಇಟ್ಟಿಗೆ ಯಾ ಕಲ್ಲುಗಳನ್ನು) ನಯಗೊಳಿಸುವ, ಅಂದಮಾಡುವ (ಮರದ ಯಾ ಕಲ್ಲಿನ) ಬೆಂಚು, ಅಟ್ಟಣೆ.

    banker
    ನಾಮವಾಚಕ
  • (ನ್ಯೂಹೌಂಡ್‍ಲಂಡ್‍) ಕಾಡ್‍ಈನನ್ನು ಹಿಡಿಯಲು ಬಳಸುವ ದೋಣಿ ಯಾ ಹಿಡಿಯುವ ವ್ಯಕ್ತಿ.
  • (ಆಸ್ಟ್ರೇಲಿಯ) ತುಂಬು – ಹೊಳೆ, ನದಿ; ತುಂಬು – ನೆರೆ, ಪ್ರವಾಹ.


  • logo