logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

Acheulean
ಗುಣವಾಚಕ
= 2Acheulian.

Acheulian
ನಾಮವಾಚಕ
ಅಷೂಲಿಯನ್‍; ಅಬ್‍ವಿಲಿಯನ್‍ ಯುಗದ ನಂತರದ, ಮೂಸ್ಟರಿಯನ್‍ ಯುಗಕ್ಕೆ ಮೊದಲಿನ, ಯುರೋಪ್‍ ಮೊದಲಾದ ಕಡೆಗಳಲ್ಲಿದ್ದ, ಎರಡು ಯಾ ಅನೇಕ ಮುಖಗಳ ಆಯುಧಗಳನ್ನು ಬಳಸುತ್ತಿದ್ದ, ಪೂರ್ವಶಿಲಾ ಯುಗದ ಸಂಸ್ಕೃತಿ.

Acheulian
ಗುಣವಾಚಕ
ಅಷೂಲಿಯದ; ಹ್ರಾನ್ಸಿನ ಸೆಯಿಂಟ್‍ ಅಷೂಲ್‍ ಎಂಬಲ್ಲಿಯ ಪೂರ್ವ ಶಿಲಾಯುಗದ ಅವಶೇಷಗಳ ಕಾಲದ, ಆ ಕಾಲಕ್ಕೆ ಸಂಬಂಧಿಸಿದ.

acheval
ಕ್ರಿಯಾವಿಶೇಷಣ
  • (ಕುದುರೆ ಮೊದಲಾದವುಗಳ ಮೇಲೆ) ಅಡ್ಡಗಾಲು, ಕಿಸುಗಾಲು–ಹಾಕಿ.
  • (ಜೂಜಿನ ಪಣದ ವಿಷಯದಲ್ಲಿ) ಎರಡು ಕಡೆಗೂ ಸಮವಾಗಿ ಪಣ ಯಾ ಬಾಜಿ ಕಟ್ಟಿ.

  • achievable
    ಗುಣವಾಚಕ
    ಕಾರ್ಯಸಾಧ್ಯ; ಸಾಧಿಸಬಹುದಾದ.

    achieve
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ನಿರ್ದಿಷ್ಟ ಮಟ್ಟದ ಸಾಧನೆ, ಯಶಸ್ಸು, ಮೊದಲಾದವನ್ನು) ಮುಟ್ಟು; ತಲುಪು; ಪಡೆ; ಗಳಿಸು.
  • ಮುಗಿಸು; ಪೂರಯಿಸು; ನೆರೆವೇರಿಸು; ಸಾಧಿಸು: to achieve his purpose ಅವನ ಉದ್ದೇಶವನ್ನು ಸಾಧಿಸಲು.
  • ಗಳಿಸು; ಪಡೆ; ಹೊಂದು; ಸಂಪಾದಿಸು: he achieved fame ಅವನು ಖ್ಯಾತಿ ಪಡೆದ.
  • (ಯಶಸ್ಸು, ಪ್ರಸಿದ್ಧಿ, ಧ್ಯೇಯ, ಮೊದಲಾದವನ್ನು) ಮುಟ್ಟು; ತಲುಪು: he achieved his goal ಅವನು ತನ್ನ ಧ್ಯೇಯವನ್ನು ಮುಟ್ಟಿದ.

  • achievement
    ನಾಮವಾಚಕ
  • ಸಾಧಿಸುವಿಕೆ; ನೆರವೇರಿಸುವಿಕೆ; ಮುಗಿಸುವಿಕೆ; ಪೂರೈಕೆ; ಸಾಧನೆ; ನಿರ್ವಹಣ.
  • ಮಹತ್ಸಾಧನೆ; ಮಹಾಕಾರ್ಯಸಿದ್ಧಿ: the achievement of Columbus ಕೊಲಂಬಸನ ಮಹತ್ಸಾಧನೆ.
  • (ವಂಶಲಾಂಛನ ವಿದ್ಯೆ) ದೊಡ್ಡ ಕೆಲಸಕ್ಕಾಗಿ, ಸಾಧನೆಗಾಗಿ ಕೊಟ್ಟ ಲಾಂಛನ.
  • (ಮನಶ್ಶಾಸ್ತ್ರ) ಪರೀಕ್ಷಾ ಸಾಧನೆ; ಪರೀಕ್ಷಾ ನಿರ್ವಹಣೆ; ಪರೀಕ್ಷೆಯಲ್ಲಿ ಯಾ ಪರೀಕ್ಷಾ ಪ್ರಯೋಗದಲ್ಲಿ ಮಾಡಿದುದು.

  • achiever
    ನಾಮವಾಚಕ
    (ಯಾವುದೇ ಕಾರ್ಯವನ್ನು) ಸಾಧಿಸುವವನು; ನಿರ್ವಹಿಸುವವನು; ಜಯಶಾಲಿ; ಸಾಧಕ.

    achilary
    ಗುಣವಾಚಕ
    (ಸಸ್ಯವಿಜ್ಞಾನ) (ಕೆಲವು ಸೀತಾಳ ಹೂಗಳಲ್ಲಿರುವಂತೆ) ತುಟಿಯಿಲ್ಲದ; ಅಧರಹೀನ; ನಿರೋಷ್ಠ; ತುಟಿಯು ಇಲ್ಲದಿರುವ ಯಾ ಸರಿಯಾಗಿ ಬೆಳೆದಿಲ್ಲದ.

    Achilean
    ಗುಣವಾಚಕ
  • (ಹೋಮರನ ಇಲಿಯಡ್‍ ಕಾವ್ಯದ ನಾಯಕ) ಅಕಿಲೀಸ್‍ನಂತಹ.
  • ಸೋಲದ; ಅಜೇಯ.


  • logo