logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

uncouthly
ಕ್ರಿಯಾವಿಶೇಷಣ
  • ಒರಟಾಗಿ; ನಯನಾಜೂಕಿಲ್ಲದೆ.
  • ಒಡ್ಡೊಡ್ಡಾಗಿ; ವಕ್ರವಾಗಿ; ಎಡವಟ್ಟು ರೀತಿಯಲ್ಲಿ.

  • uncouthness
    ನಾಮವಾಚಕ
  • ವಕ್ರತೆ; ವಿಕಾರವಾಗಿರುವುದು.
  • ಒರಟಾಗಿರುವುದು; ನಯನಾಜೂಕಿಲ್ಲದಿರುವುದು; ಅನಾಗರಿಕತೆ.

  • uncouvenanted
    ಗುಣವಾಚಕ
  • (ಮುಖ್ಯವಾಗಿ ದೇವರ) ಒಪ್ಪಂದದಲ್ಲಿ, ಒಡಂಬಡಿಕೆಯಲ್ಲಿ – ವಾಗ್ದಾನ ಮಾಡಿಲ್ಲದ ಯಾ ಆಧಾರವಿಲ್ಲದ.
  • ಒಪ್ಪಂದವಾಗಿರದ; ಒಡಂಬಡಿಕೆಯಾಗಿರದ.

  • uncover
    ಸಕರ್ಮಕ ಕ್ರಿಯಾಪದ ಅಕರ್ಮಕ ಕ್ರಿಯಾಪದ
    (ಪ್ರಾಚೀನ ಪ್ರಯೋಗ) ಹ್ಯಾಟು, ಟೋಪಿ, ಮೊದಲಾದವನ್ನು – ತೆಗೆ, ತೆಗೆದಿಡು.
  • ಹೊದಿಕೆ ಮೊದಲಾದವನ್ನು ತೆರೆ; ಮರೆ, ಮುಸುಕು – ತೆಗೆ.
  • ತೆರೆದಿಡು; ತೆರೆದು ತೋರಿಸು; ಬಯಲು ಮಾಡು; ಪ್ರಕಟಪಡಿಸು: the police have uncovered a plot against the President ರಾಷ್ಟ್ರಪತಿಯ ವಿರುದ್ಧ ನಡೆಸಲಾಗಿದ್ದ ಪಿತೂರಿಯೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

  • uncovered
    ಗುಣವಾಚಕ
  • ಮೈಮೇಲೆ ಬಟ್ಟೆಯಿಲ್ಲದ; ನಗ್ನ; ಬೆತ್ತಲೆ ಮೈಯಿನ.
  • ತಲೆಯ ಮೇಲೊಂದು ಸೂರಿಲ್ಲದ; ಇರಲು ಮನೆಯಿಲ್ಲದ.
  • (ತಲೆ) ಟೋಪಿಯಿಲ್ಲದ; ಬರಿ ತಲೆಯ.

  • uncreate
    ಅಕರ್ಮಕ ಕ್ರಿಯಾಪದ
    (ಸಾಹಿತ್ಯಕ) ನಾಶಗೊಳಿಸು; ಧ್ವಂಸಮಾಡು.

    uncreated
    ಗುಣವಾಚಕ
    (ಪ್ರಾಚೀನ ಪ್ರಯೋಗ) ಸ್ವಯಂಭೂ; (ಬೇರೊಬ್ಬರಿಂದ) ಸೃಷ್ಟಿಯಾಗದೆ ತಾನೇ ಅಸ್ತಿತ್ವಕ್ಕೆ ಬಂದ; ಸೃಷ್ಟಿಸದ; ಹುಟ್ಟಿಸದ.

    uncreative
    ಗುಣವಾಚಕ
    ಸೃಜನಾತ್ಮಕವಲ್ಲದ; ಸೃಷ್ಟ್ಯಾತ್ಮಕವಲ್ಲದ; ಸೃಷ್ಟಿಸುವ ಶಕ್ತಿಯಿಲ್ಲದ.

    uncritical
    ಗುಣವಾಚಕ
  • ಅವಿವೇಚಿತ; ವಿಮರ್ಶಾರಹಿತ; ವಿಮರ್ಶೆ ಮಾಡದ; ವಿಚಾರ ಮಾಡದೆ ಒಪ್ಪಿಕೊಂಡುಬಿಡುವ.
  • ವಿಮರ್ಶನತತ್ತ್ವಗಳಿಗೆ – ಅನುಗುಣವಾಗಿರದ, ವಿರುದ್ಧವಾದ.

  • uncritically
    ಕ್ರಿಯಾವಿಶೇಷಣ
  • ವಿಮರ್ಶೆ ಮಾಡದೆ; ವಿಚಾರರಹಿತವಾಗಿ.
  • ವಿಮರ್ಶ ತತ್ತ್ವಗಳಿಗೆ ವಿರುದ್ಧವಾಗಿ.


  • logo