logo
भारतवाणी
bharatavani  
logo
Knowledge through Indian Languages
Bharatavani

English-Kannada Nighantu
A B C D E F G H I J K L M N O P Q R S T U V W X Y Z

Please click here to read PDF file English-Kannada Nighantu

ohm
ನಾಮವಾಚಕ
(ವಿದ್ಯುದ್ವಿಜ್ಞಾನ) ಓಮ್‍; ವಿದ್ಯುದ್ರೋಧತ್ವದ ಏಕಮಾನ: ಒಂದು ವೋಲ್ಟ್‍ ವಿಭವಾಂತರವುಳ್ಳ ಎರಡು ಬಿಂದುಗಳ ನಡುವಿನ ವಾಹಕದಲ್ಲಿ ಒಂದು ಆಂಪಿಯರ್‍ ಪ್ರವಾಹ ಹರಿಯುತ್ತಿದ್ದರೆ ಆ ವಾಹಕದ ರೋಧತ್ವಕ್ಕೆ ಸಮನಾದ ಅಂತರಾಷ್ಟ್ರೀಯ ಮಾನ, ಸಂಕೇತ $\Omega$.

Ohm's law
ನಾಮವಾಚಕ
(ವಿದ್ಯುದ್ವಿಜ್ಞಾನ) ಓಮ್‍ನ ನಿಯಮ; ಸರ್ಕಿಟ್‍ನಲ್ಲಿ ಹರಿಯುವ ವಿದ್ಯುತ್ಪ್ರವಾಹವು ವಿಭವಾಂತರಕ್ಕೆ ಅನುಲೋಮವಾಗಿಯೂ ರೋಧಕ್ಕೆ ವಿಲೋಮವಾಗಿಯೂ ಇರುವುದೆಂಬ ನಿಯಮ.

ohm-ammeter
ನಾಮವಾಚಕ
ಓಮ್‍ ಆಮೀಟರ್‍; ವಿದ್ಯುದ್ರೋಧತ್ವವನ್ನೂ ಪ್ರವಾಹವನ್ನೂಅಳೆಯುವ ಉಪಕರಣ.

ohmage
ನಾಮವಾಚಕ
ಓಮೇಜ್‍; ಓಮ್‍ಗಳಲ್ಲಿ ಅಳೆಯುವ ವಿದ್ಯುತ್ತಿನ ಪ್ರತಿರೋಧ.

ohmmeter
ನಾಮವಾಚಕ
ಓಮ್‍ ಮೀಟರ್‍; ಓಮ್‍ ಮಾಪಕ; ವಿದ್ಯುತ್‍ ಪ್ರವಾಹದ ರೋಧತ್ವವನ್ನು ಅಳೆಯುವ ಉಪಕರಣ.

OHMS
ಸಂಕ್ಷಿಪ್ತ
on Her (or His) Majesty’s Service.

oho
ಭಾವಸೂಚಕ ಅವ್ಯಯ
ಓಹೋ; ಆಶ್ವರ್ಯ, ಹಿಗ್ಗು, ಮೊದಲಾದವನ್ನು ಸೂಚಿಸುವ ಉದ್ಗಾರ.

ohone
ಭಾವಸೂಚಕ ಅವ್ಯಯ
ochone ಪದದ ರೂಪಾಂತರ.

oi
ಭಾವಸೂಚಕ ಅವ್ಯಯ
ಓಯ್‍; ಗಮನ ಸೆಳೆವಾಗ ಯಾ ಗಾಬರಿಯನ್ನು ವ್ಯಕ್ತಪಡಿಸುವಾಗ ಬಳಸುವ ಉದ್ಗಾರ.

oidium
ನಾಮವಾಚಕ
ಓಯಿಡಿಯಮ್‍; ಶಿಲೀಂಧ್ರದ ‘ಹೈಹಗಳು’ (hyphae) ಕೋಶಗಳಾಗಿ ವಿಘಟಿಸಿ ಉಂಟುಮಾಡುವ ಬೀಜಕಗಳಲ್ಲೊಂದು.


logo